ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರ ಮತ್ತು ತಾಲೂಕಿನ ಚಂದ್ರವಳ್ಳಿ ಪತ್ರಿಕೆ ವಿತರಕರು ಮತ್ತು ವರದಿಗಾರರಾದ ಮಲ್ಲಪ್ಪನಹಳ್ಳಿಯ ಎಂ.ಎಲ್.ಗಿರಿಧರ ಇವರ ಪುತ್ರಿ ನಂದಿತಾ ಜಿ.ಆರ್ ಇವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದು ಡಿಸ್ಟಿಕ್ಷನ್ ನಲ್ಲಿ ಉತ್ತೀರ್ಣರಾಗುವ ಮೂಲಕ ಕೀರ್ತಿ ತಂದಿದ್ದಾರೆ.
ಚಂದ್ರವಳ್ಳಿ ಪ್ರಾದೇಶಿಕ ದಿನ ಪತ್ರಿಕೆಯ ಪ್ರತಿನಿಧಿ ಮತ್ತು ಹಿರಿಯೂರು ವರದಿಗಾರರಾದ ಎಂ.ಎಲ್.ಗಿರಿಧರ ಮತ್ತು ರೂಪಾ ಅವರ ಪುತ್ರಿ ನಂದಿತಾ ಅವರ ಸಾಧನೆಗೆ ಚಂದ್ರವಳ್ಳಿ ಪತ್ರಿಕೆ ವತಿಯಿಂದ ಎರಡು ಸಾವಿರ ರೂ. ಚೆಕ್ ನೀಡಿ ಅಭಿನಂದನೆ ಸಲ್ಲಿಸಿ ಮುಂದಿನ ವಿದ್ಯಾಭ್ಯಾಸಕ್ಕೆ ಶುಭಕೋರಲಾಯಿತು.
ಈ ಸಂದರ್ಭದಲ್ಲಿ ಚಂದ್ರವಳ್ಳಿ ಪ್ರಾದೇಶಿಕ ದಿನ ಪತ್ರಿಕೆ ಸಂಪಾದಕರಾದ ಹರಿಯಬ್ಬೆ ಸಿ.ಹೆಂಜಾರಪ್ಪ, ಶ್ರೀಮತಿ ಅನಿತ ಎನ್.ಕೆ, ವರದಿಗಾರರಾದ ಮಲ್ಲಪ್ಪನಹಳ್ಳಿಯ ಎಂ.ಎಲ್.ಗಿರಿಧರ ಉಪಸ್ಥಿತರಿದ್ದರು.