ಚಂದ್ರವಳ್ಳಿ ನ್ಯೂಸ್, ದೊದ್ದಬಳ್ಳಾಪುರ :
ತಾಲ್ಲೂಕಿನ ಎಸ್ಸಿಲೊರ್ (essilorluxottica) ಕಂಪನಿಯ ನಾಮಫಲಕವನ್ನು ಕನ್ನಡ ಭಾಷೆಯಲ್ಲಿ ಬದಲಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ( ನಾರಾಯಣ ಗೌಡರ ಬಣ )ಯ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡ ಅಗ್ರಹಿಸಿದ್ದಾರೆ.
ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡ ಭಾಷೆ ಬಳಕೆ ಕಡ್ಡಾಯವಾಗಿರಬೇಕು, ಕರ್ನಾಟಕದ ನೆಲ ಜಲ ಸಂಪನ್ಮೂಲಗಳನ್ನು ಬಳಸಿ ಜೀವನ ಕಟ್ಟಿಕೊಂಡಿರುವ ಕಂಪನಿಗಳು ವಾಣಿಜ್ಯ ಕಾರಣಗಳಿಗಾಗಿ ಭಾಷೆ ನಿರಾಕರಿಸುವುದು ಎಷ್ಟು ಸರಿ, ಇದಕ್ಕೆ ಪುಷ್ಟಿ ಎಂಬಂತೆ ಪ್ರತಿಷ್ಠಿತ ಬಹು ರಾಷ್ಟ್ರೀಯ ಕಂಪನಿ ಎಸ್ಸಿಲೊರ್ ಲೂಕ್ಸೋಟ್ಟಿಕಾ (essilorluxottica) ತನ್ನ ಕಂಪನಿ ನಾಮಫಲಕವನ್ನು ಆಂಗ್ಲ ಭಾಷೆಯಲ್ಲಿ ಬಳಕೆ ಮಾಡಿದ್ದೂ ಸದರಿ ನಾಮಫಲಕವನ್ನು ಕನ್ನಡ ಭಾಷೆಯಲ್ಲಿ ಬದಲಿಸುವಂತೆ ಅಗ್ರಹಿಸಿದ್ದೇವೆ ಎಂದು ತಿಳಿಸಿದರು.
ಕಂಪನಿಯ ಸಿಬ್ಬಂದಿಯೋಟ್ಟಿಗೆ ದೂರವಾಣಿ ಕರೆಯಲ್ಲಿ ಮಾತನಾಡಿದ್ದು ಸಕಾರತ್ಮಕವಾಗಿ ಸ್ಪಂದಿಸಿದ್ದಾರೆ. ನಾಮಫಲಕವನ್ನು ಕನ್ನಡದಲ್ಲಿ ಬದಲಿಸುವುದ್ದಾಗಿ ತಿಳಿಸಿ ಕಾಲಾವಕಾಶ ಕೇಳಿದ್ದಾರೆ,ಕಂಪನಿಯು ತನ್ನ ನಾಮ ಫಲಕವನ್ನು ಬದಲಿಸಲು ಮುಂದಾಗಿದ್ದು ಕರವೇ (ನಾರಾಯಣಗೌಡರ ಬಣ )ಸಂತಸ ವ್ಯಕ್ತಪಡಿಸುತ್ತದೆ ಎಂದು ತಿಳಿಸಿದ್ದಾರೆ.