ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ಏಕೀಕರಣ ರಕ್ಷಣಾ ಸೇನಾ ಸಮಿತಿ ಚಿತ್ರದುರ್ಗ ಜಿಲ್ಲಾ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಯಪುರ ಗ್ರಾಮದ ಅಲೆಮಾರಿ ಸುಡುಗಾಡು ಸಿದ್ಧ ಸಮುದಾಯದ ಜನಾಂಗಕ್ಕೆ ನಿವೇಶನ ಹಕ್ಕು ಪತ್ರ ಹಾಗೂ ಮೂಲಭೂತ ಸೌಕರ್ಯ ಒದಗಿಸಲು ಚಿತ್ರದುರ್ಗ ಜಿಲ್ಲಾಧಿಕಾರಿ ಟಿ ವೆಂಕಟೇಶ್ ರವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸೇನಾ ಸಮಿತಿ ರಾಜ್ಯಾಧ್ಯಕ್ಷ ಪಿ ಶೇಖರ್, ಜಿಲ್ಲಾ ಅಧ್ಯಕ್ಷ ಬಿಎಸ್ ಮಂಜಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಿಸ್ವಾಮಿ, ಗೌರವ ಅಧ್ಯಕ್ಷ ಬಿ ಮಾರನಾಯಕ, ಸಮುದಾಯದ ಮುಖಂಡರಾದ ಪಾಂಡ್ಯಪ್ಪ, ಅಂಜಿನಪ್ಪ, ಗಂಗಾಧರ್, ನರಸಪ್ಪ ಇತರರು ಇದ್ದರು.