ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರಿನ ವಾಸವಿ ಕಲ್ಯಾಣ ಮಂಟಪದಲ್ಲಿ ನಡೆದ “ಬುದ್ಧ ಪ್ರಜ್ಞೆ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ- 2025” ಸಮಾರಂಭದಲ್ಲಿ “ಬುದ್ಧ ಪ್ರಜ್ಞೆ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ- 2025” ಪ್ರಶಸ್ತಿ ಪುರಸ್ಕಾರವನ್ನು ಸ್ವೀಕರಿಸಿದ ನಾಗತಿಹಳ್ಳಿ ರಮೇಶ್ ರವರು ಸಭೆ ಉದ್ದೇಶಿಸಿ ಮಾತಾನಾಡಿ,
ಕರ್ನಾಟಕದ ರಾಜಕರಣದಲ್ಲಿದ್ದ ಧೀಮಂತ ನಾಯಕರ ನಡೆನುಡಿಗಳ ಮರೆತ ಇಂದಿನ ಬಂಡವಾಳಶಾಹಿ ರಾಜಕಾರಣಿಗಳು ವಂಶಾವಳಿ ರಾಜಕಾರಣವನ್ನು ಮುನ್ನೆಲೆಗೆ ತಂದು, ಸ್ವಾರ್ಥದಲ್ಲಿ ಆಸ್ತಿ ಹಣ ಮಾಡುವುದರಲ್ಲಿ ಮುಳುಗಿ ಹೋಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಅಂತಹ ಬಂಡವಾಳಶಾಹಿಗಳಿಗೆ ಕರ್ನಾಟಕ ಮತ್ತು ದಿಲ್ಲಿ ಸೇರಿದಂತೆ ಪಕ್ಷದ ಅಧ್ಯಕ್ಷಗಿರಿಯು ಕೊಟ್ಟಿರುವುದು ಏನನ್ನು ಸೂಚಿಸುತ್ತದೆ. ಬಂಡವಾಳಶಾಹಿಗಳ ಹಿಡಿತದಲ್ಲಿ ಪ್ರಜಾಪ್ರಭುತ್ವದ ಆದರ್ಶದ ಕನಸುಗಳು ಸಾಯುತ್ತಿವೆ. ಕೆ.ಎಚ್. ರಂಗನಾಥರವರು, ನಜೀರ್ ಸಾಬ್, ಲಕ್ಷ್ಮಿಸಾಗರ್, ಶಾಂತವೇರಿ ಗೋಪಾಲಗೌಡ ರಂತಹ ಆದರ್ಶ ರಾಜಕಾರಣಿಗಳು ಇಂದು ಯಾಕಿಲ್ಲ? ನಾನು ಸಮಾಜವಾದಿ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯನವರು ಒಬ್ಬ ಕರ್ತವ್ಯನಿರತ ಅಧಿಕಾರಿಯ ಮೇಲೆ ಕೈ ಎತ್ತುವಷ್ಟು ಸಮಾಜವ್ಯಾದಿಯಾಗಿದ್ದಾರೆ ಎಂದು ತರಾಟೆ ತೆಗೆದುಕೊಂಡರು.
ಇಂದು ಬರೀ ಜಾತಿ ರಾಜಕಾರಣ ಮತ್ತು ವ್ಯಕ್ತಿ ಪೂಜೆಯ ಗುಂಪುಗಾರಿಕೆ ರಾಜಕಾರಣ ಮುನ್ನೆಲೆಗೆ ಬಂದು, ಮೇಲ್ಜಾತಿ ರಾಜಕಾರಣಿಗಳು ದಲಿತ ಮತ್ತು ಹಿಂದುಳಿದವರ ಹೆಸರೇಳಿಕೊಂಡು ಮತ್ತು ತಮ್ಮದೇ ಜಾತಿಯ ತುಳಿತಕ್ಕೊಳಗಾದ ನಿರಾಶ್ರೀತರ ದಲಿತರ ಹೆಸರೇಳಿಕೊಂಡು ತಾವು ಭದ್ರವಾದರೆ ಹೊರೆತು ತಮಗೆ ಸಹಾಯವಾಗಬಹುದೆಂದು ನಂಬಿ ಕಾಯುತ್ತಲೇ ಕುಣಿತವರು ಅವರಲ್ಲೇ ಕುಳಿತಿದ್ದಾರೆ. ಊರುಕೇರಿಗಳೊಳಗೆ.
ಸಮಾಜದ ಕೊನೆಯ ಪೈರಿಗೆ ನೀರುಣಿಸುವ ಕಾರ್ಯಕ್ರಮಗಳು ಕಮ್ಮಿಯಾಗಿ ರಾಜಕಾರಣಿಗಳ ಹಿಂಬಾಲಕರು ಕಾಸು ಮಾಡುತ್ತಿದ್ದಾರೆ. ದೇಶದ ಬೆನ್ನೆಲುಬಾದ ರೈತ ತಾವು ಬೆಳೆದ ಬೆಳೆಗಳಿಗೆ ಒಂದು ನಿಶ್ಚಿತ ಬೆಲೆ ಇಲ್ಲದೆ ದಿನವೂ ಆತ್ಮಹತ್ಯೆ ಹಾದಿ ಹಿಡಿಯತ್ತಿದ್ದಾರೆ. ನಾನು ಒಬ್ಬ ಕೃಷಿಕನಾಗಿ ಇಂದು ಕೃಷಿಯಲ್ಲಿ ಜೂಜಾಡುತ್ತಿದ್ದೇನೆ. ಈ ದೇಶದ ಕೊಳೆ ತೊಳೆವ ಪೌರಕಾರ್ಮಿಕರನ್ನು ಸಾಮಾಜಿಕ ಗೌರವ, ಸಮಾನತೆಯಲ್ಲಿ ಕಾಣದೆ ಅವರ ಬದುಕು ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಕುಸಿಯುತ್ತಿದೆ. ಯಾವಾಗ ರಾಜಕಾರಣದಲ್ಲಿ ಆದರ್ಶ ಮಾನವೀಯತೆ ಕಾಣೆಯಾಗುವವೊ ಆಗ ರಾಜಕಾರಣ ಒಂದು ಹಣ ಮಾಡುವ ದಂಧೆ ಆಗಿಬಿಡುತ್ತದೆ ಎಂದು ಹೇಳಿದರು.
ಸಚಿವ ಡಿ. ಸುಧಾಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೆ ಎಚ್ ರಂಗನಾಥ್ ಅವರ ಧೀಮಂತ ವ್ಯಕ್ತಿತ್ವ, ಅವರೊಂದಿಗೆ ಒಡನಾಡಿನ ದಿನಗಳನ್ನು, ನಾಗತಿಹಳ್ಳಿ ರಮೇಶ್ ರವರ ಘನಸಾರ ವ್ಯಕ್ತಿತ್ವವನ್ನು ಕುರಿತು ಮಾತನಾಡಿದರು.
ಮಾಜಿ ಸಚಿವೆ ಮೋಟಮ್ಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿರಾ ಗಾಂಧಿಯವರು ನನ್ನಂತಹ ಬಡವಳ ಮದುವೆಗೆ ಇಂದಿರಾ ಗಾಂಧಿಯವರು ಬಂದ ನೆನಪುಗಳನ್ನು, ಇಂದಿರಾ ಗಾಂಧಿಯವರ ಸರಳತೆಯನ್ನು ಕುರಿತು ಮಾತನಾಡಿದರು.
ವಿಶೇಷವೆಂದರೆ, ಕರ್ನಾಟಕ ಸರ್ಕಾರದ ಹಾಲಿ ಸಚಿವರ ಎದಿರು ಎದೆಗಾರಿಕೆಯಿಂದ ನಾಗತಿಹಳ್ಳಿ ರಮೇಶ್ ರವರು ಸತ್ಯವನ್ನು ಕಾಣಿಸುವ ಭಾಷಣ ಶೈಲಿ ಸಭೆಯಲ್ಲಿ ನೆರೆದವರು ಸೇರಿದಂತೆ, ಹಾಲಿ ಸಚಿವರಾದ ಡಿ. ಸುಧಾಕರ್, ಮಾಜಿ ಸಚಿವೆ ಮೋಟಮ್ಮನವರು ಕಣ್ಣರಳಿಸಿ ನಾಗತಿಹಳ್ಳಿ ರಮೇಶ್ ರವರ ಇಡೀ ಭಾಷಣವನ್ನು ತದೇಕಚಿತ್ತವಾಗಿ ಕೇಳುತ್ತಾ ಕುಳಿತ್ತಿದ್ದರು.
ಕಾರ್ಯಕ್ರಮದ ಭಾಗವಾಗಿ ನರಸಿಂಮೂರ್ತಿ ಬ್ಯಾಲೆನಹಳ್ಳಿ ದಂಪತಿಗಳ 25 ವರುಷದ ದಾಂಪತ್ಯ ಜೀವನದ ಸಂಭ್ರಮ ಆಚರಿಸಿಕೊಳ್ಳಲಾಯಿತು ಮತ್ತು 25 ಸಾಧಕರಿಗೆ ‘ಜೀವನಾಡಿ ಪ್ರಶಸ್ತಿ‘ ಹಾಗೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ‘ಪ್ರತಿಭಾ ಪುರಸ್ಕಾರ ‘ ನೀಡಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಎಸ್. ವಿಜಯ ಕುಮಾರ್, ಎಂ ರೇವಣ ಸಿದ್ದಪ್ಪ, ಡಿ. ಹನುಮಂತರಾಯ, ಸರ್ಕಾರದ ವಿಶ್ರಾಂತ ಕಾರ್ಯದರ್ಶಿ ಕೃಷ್ಣಾ ರೆಡ್ಡಿ, ಕೆ ಹೆಚ್ ರಂಗನಾಥ್ ಅವರ ಆಪ್ತ ಕಾರ್ಯದರ್ಶಿ ಎನ್. ನರಸಿಂಹ ಮೂರ್ತಿ, ಕೆ ಹೆಚ್ ರಂಗನಾಥ್ ರವರ ದ್ವಿತೀಯ ಪುತ್ರಿ ಹೆಚ್ ಆರ್ ಗೋದಾವರಿ ಇದ್ದರು.

