ದಂತ ವೈದ್ಯಕೀಯ ಶಿಬಿರ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಕೋಟ:
ರೋಟರಿ ಕ್ಲಬ್ ಸಾಹೇಬರ ಕಟ್ಟೆ ಜಯಂಟ್ಸ್  ಗ್ರೂಪ್ ಆಫ್ ಬ್ರಹ್ಮಾವರ ಮತ್ತು ದಂತ ವೈದ್ಯಕೀಯ ಮಹಾವಿದ್ಯಾಲಯ ಮಣಿಪಾಲ ಕೆಎಂಸಿ ಇದರ ವತಿಯಿಂದ ಸಾಹೇಬರಕಟ್ಟೆ ಗಾಂಧಿ ಪ್ರೌಢಶಾಲೆಯಲ್ಲಿ ದಂತ ವೈದ್ಯಕೀಯ ಶಿಬಿರ ಆದಿತ್ಯವಾರ ಜನವರಿ 18 ರಂದು ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರೋಟರಿ ನಿಯೋಜಿತ ಸಹಾಯಕ ಗವರ್ನರ್ ವಿಜಯಕುಮಾರ್ ಶೆಟ್ಟಿ, ಈ ರೀತಿಯ ಶಿಬಿರಗಳಿಂದ ಹಲ್ಲಿನ ಸಮಸ್ಯೆಗಳನ್ನು ಮುಂಚಿತವಾಗಿ ಗುರುತಿಸಿ ಚಿಕಿತ್ಸೆ ಪಡೆಯಬಹುದಾಗಿದೆ. ನಮ್ಮ ಆರೋಗ್ಯದಲ್ಲಿ ಹಲ್ಲಿನ ಆರೋಗ್ಯ ಕೂಡ ಬಹಳ ಅಗತ್ಯ ಎಂದು ತಿಳಿಸಿದರು.

- Advertisement - 

ವೇದಿಕೆಯಲ್ಲಿ ರೋಟರಿ ಅಧ್ಯಕ್ಷ ವರದರಾಜ್ ಶೆಟ್ಟಿ, ಕಾರ್ಯದರ್ಶಿ  ಕೃಷ್ಣ ಶಾನುಭಾಗ್, ಕೆಎಂಸಿಯ ಡಾ. ಅದಿತಿ ಬೋಸ್, ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಅಧ್ಯಕ್ಷ ಅಣ್ಣಯ್ಯ ದಾಸ್, ಫೆಡರೇಶನ್ ಪೂವಾ೯ಧ್ಯಕ್ಷ ಮಧುಸೂದನ್ ಹೇರೂರು, ಮುಂತಾದವರು ಉಪಸ್ಥಿತರಿದ್ದರು. ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.

 

- Advertisement - 

Share This Article
error: Content is protected !!
";