ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಆಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ಮಂಗಳವಾರ ಬೆಳ್ಳಂಬೆಳಗ್ಗೆ ಚಳ್ಳಕೆರೆಯ ಕಾಟಪ್ಪನಹಟ್ಟಿ ಹಿರಿಯೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಸುರೇಶ್‌ರವರ ಮನೆಯ ಮೇಲೆ ದಾಳಿ ನಡೆಸಿ ಅಪಾರ ಹಣ, ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಲೋಕಾಯುಕ್ತ ಎಸ್ಪಿ ವಾಸುದೇವರಾಮ್ ಡಿವೈಎಸ್ಪಿ ಮೃತ್ಯುಂಜಯ ಮತ್ತು ತಂಡ ಈ ದಾಳಿ ನಡೆಸಿದರು. ಮಂಗಳವಾರ ಬೆಳಗ್ಗೆ ಸುರೇಶ್‌ಗೆ ಸೇರಿದ ಬೆಂಗಳೂರಿನ ಒಂದು ಮನೆ, ಚಳ್ಳಕೆರೆಯ ವಿಠಲನಗರ ಮತ್ತು ವಾಲ್ಮೀಕಿ ಬಡಾವಣೆ (ಹೊಸಬೇಡರಹಟ್ಟಿ) ಮನೆಯ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಿದಾಗ ಎಸಿಎಫ್ ಸುರೇಶ್ ಮನೆಯಲ್ಲಿ ೧ಕೆಜಿ ಚಿನ್ನಾಭರಣ, ೫ಲಕ್ಷ ರೂ.ನಗದು ಪತ್ತೆ ೯ಎಕರೆ ಜಮೀನು, ೩ನಿವೇಶನ ಸೇರಿ ಅಪಾರ ಆಸ್ತಿಪತ್ರ ಪತ್ತೆ ಆದಾಯ ಮೀರಿದ ಆಸ್ತಿ ಗಳಿಕೆ ದಾಖಲೆ ಲೋಕಾಯುಕ್ತರ ವಶಪಡಿಸಿಕೊಂಡಿದ್ದಾರೆ.
ಮಂಗಳವಾರ ಬೆಳಗಿನ ಜಾವ ಸುಮಾರು ೪.೩೦ರ ಸಮಯದಲ್ಲಿ ಅಧಿಕಾರಿಗಳ ತಂಡ ಏಕಾಏಕಿ ದಾಳಿ ನಡೆಸಿದೆ. ನಿದ್ದೆಯಲ್ಲಿದ್ದ ಸುರೇಶ್ ಮತ್ತು ಕುಟುಂಬಕ್ಕೆ ದಾಳಿ ಮೂಲಕ ಅಧಿಕಾರಿಗಳು ಶಾಕ್ ನೀಡಿದರು.
ಬೆಳಗಿನ ಜಾವವೇ ಲೋಕಾ ಅಧಿಕಾರಿಗಳು ಮನೆ ಬಾಗಿಲು ತಟ್ಟಿದ ಕೂಡಲೇ ಸುರೇಶ್‌ಗೆ ಶಾಕ್ ಆಗಿದೆ. ಒಳಪ್ರವೇಶಿಸಿದವರೇ ಅವರಿಂದ ಕೆಲವೊಂದು ಮಾಹಿತಿ ಪಡೆದಿದ್ದಾರೆ.