ಅವಹೇಳನಕಾರಿ ಪೋಸ್ಟ್, ಪರಿಸ್ಥಿತಿ ಹತೋಟಿ- ಎಡಿಜಿಪಿ ಹಿತೇಂದ್ರ

News Desk

ಚಂದ್ರವಳ್ಳಿ ನ್ಯೂಸ್, ಮೈಸೂರು:
ವ್ಯಕ್ತಿಯೊಬ್ಬರು ಹಾಕಿದ್ದ ಅವಹೇಳನಕಾರಿ ಪೋಸ್ಟರ್​ನಿಂದ ಸೋಮವಾರ ರಾತ್ರಿ ಉದ್ವಿಗ್ನಗೊಂಡಿದ್ದ ಮೈಸೂರು ಈಗ ಪರಿಸ್ಥಿತಿ ಶಾಂತವಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಹಿತೇಂದ್ರ ಹೇಳಿದ್ದಾರೆ.
ಮೈಸೂರಿನ ಉದಯಗಿರಿ ಪೊಲೀಸ್​ ಠಾಣೆಯ ಬಳಿಯ ಸ್ಥಳದಲ್ಲಿ ಬಿಗಿ ಪೊಲೀಸ್​ ಬಂದೋಬಸ್ತ್ ಹಾಕಲಾಗಿದ್ದು
, ಉನ್ನತ ಪೊಲೀಸ್​ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ ಎಂದು ಎಡಿಜಿಪಿ ಅವರು ತಿಳಿಸಿದರು.

ಪೊಲೀಸರು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟರ್ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ಠಾಣೆಗೆ ಕರತಂದಿದ್ದರು. ಈ ಸಂದರ್ಭದಲ್ಲಿ ಕೆಲ ಯುವಕರು ಉದಯಗಿರಿ ಪೊಲೀಸ್​ ಠಾಣೆಯ ಬಳಿ ಜಮಾಯಿಸಿದ್ದು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಆರೋಪಿ ಯುವಕನನ್ನು ಬಿಟ್ಟುಬಿಡುತ್ತಾರೆ ಎನ್ನುವ ತಪ್ಪು ತಿಳುವಳಿಕೆಯಿಂದ ತಡ ರಾತ್ರಿಯೇ ಗದ್ದಲ ಉಂಟಾಗಿದ್ದು, ಪರಿಸ್ಥಿತಿ ಅರಿತ ಪೊಲೀಸರು ಲಘು ಲಾಠಿ ಚಾರ್ಜ್​ ಮಾಡುವ ಮೂಲಕ ಗುಂಪುಗಳನ್ನು ಚದುರಿಸಿದ್ದಾರೆ.
ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದಾಗ ಪೊಲೀಸರು ಅಶ್ರುವಾಯು ಸಿಡಿಸುವ ಮೂಲಕ ಮಧ್ಯರಾತ್ರಿ ವೇಳೆಗೆ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದು ಸದ್ಯ ಪರಿಸ್ಥಿತಿ ಶಾಂತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಡಿಜಿಪಿ ಜೀತೇಂದ್ರ ಭೇಟಿ:
ಮೈಸೂರಿನ ಉದ್ನಿಗ್ನ ಮತ್ತು ಸೂಕ್ಷ್ಮ ಪರಿಸ್ಥಿತಿ ಅರಿತ ಎಡಿಜಿಪಿ ಜೀತೇಂದ್ರ
, ಮಂಗಳವಾರ ಉದಯಗಿರಿ ಪೊಲೀಸ್​ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ಅವಹೇಳನಕಾರಿ ಪೋಸ್ಟ್‌ಹಾಕಿರುವುದನ್ನು ವಿರೋಧಿಸಿ ಸಾವಿರಾರು ಜನ ಸೋಮವಾರ ರಾತ್ರಿ ಉದಯಗಿರಿ ಠಾಣೆಗೆ ಬಂದು ಪ್ರತಿಭಟನೆ ನಡೆಸಿದ್ದರು ಎಂದು ಅವರು ಹೇಳಿದರು.
ಅವಹೇಳನಕಾರಿ ಪೋಸ್ಟ್​ ಹಾಕಿದ್ದ ಆರೋಪಿಯನ್ನು ಬೇಗ ಬಿಟ್ಟು ಬಿಡುತ್ತಾರೆ ಎಂದು ಕೆಲವರು ಗಲಾಟೆ ಮಾಡಿದ್ದಾರೆ. ಗಲಾಟೆಯಲ್ಲಿ ಏಳು ಜನ ಪೊಲೀಸರಿಗೆ ಗಾಯ ಆಗಿದೆ. ಗಲಾಟೆ ಮಾಡಿದವರ ಬಂಧನಕ್ಕೆ ಸ್ಥಳೀಯ ಪೊಲೀಸರಿಂದ ಟೀಂ ರಚನೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಪೋಸ್ಟರ್ ಹಾಕಿದ ಪ್ರಕರಣ ಹಿಂದೆ ಯಾರಿದ್ದಾರೆ, ಯಾವುದಾದರೂ ಸಂಘಟನೆ ಇದೆಯಾ ಎಂದುಬದರ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ತನಿಖೆ ಬಳಿಕ ಈ ಬಗ್ಗೆ ಹೆಚ್ಚಿನ ವಿವರ ತಿಳಿದು ಬರಲಿದೆ. ಸದ್ಯಕ್ಕೆ ಪರಿಸ್ಥಿತಿ ಶಾಂತವಾಗಿದೆ ಎಂದು ಅವರು ತಿಳಿಸಿದ್ದಾರೆ.

ಉದಯಗಿರಿಯಲ್ಲಿ ಬಿಗಿ ಪೊಲೀಸ್​ ಬಂದೋಬಸ್ತ್ ಏರ್ಪಡಿಸಿದ್ದು, ಮೈಸೂರು ನಗರ ಪೊಲೀಸ್​ ಕಮಿಷನರ್ ಸೀಮಾ ಲಾಟ್ಕರ್ ಹಾಗೂ ಎಸಿಪಿ ಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

 

Share This Article
error: Content is protected !!
";