ಜೂನ್ 14 ಮತ್ತು 15 ರಂದು ದೇಸಿ ಬೀಜೋತ್ಸವ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ಕೃಷಿ ತಂತ್ರಜ್ಞರ ಸಂಸ್ಥೆ ಹಾಗೂ ಮೈಸೂರಿನ ಸಹಜ ಸಮೃದ್ಧ ಇವರ ಸಂಯುಕ್ತಾಶ್ರಯದಲ್ಲಿ ದೇಸಿ ಬೀಜೋತ್ಸವಹಾಗೂ ದೇಸಿ ಬೀಜಗಳ ಪ್ರದರ್ಶನ, ಸಾವಯವ ಉತ್ಪನ್ನಗಳು, ಮೌಲ್ಯವರ್ಧಿತ ಪದಾರ್ಥಗಳ ವಹಿವಾಟು ಮತ್ತು ತಾಂತ್ರಿಕ ಅಧಿವೇಶನಗಳನ್ನು ಜೂನ್ 14 ಮತ್ತು 15 ರಂದು ಬೆಳಿಗ್ಗೆ 10.30 ರಿಂದ ಸಂಜೆ 6.30 ರವರೆಗೆ

- Advertisement - 

ಬೆಂಗಳೂರಿನ ಕೃಷಿ ತಂತ್ರಜ್ಞರ ಸಂಸ್ಥೆಯ ಡಾ.ಹೆಚ್.ಆರ್.ಅರಕೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಭಾರತ ಸರ್ಕಾರದ ನವದೆಹಲಿಯ ಪಿ.ಪಿ.ವಿ & ಎಫ್.ಆರ್.. ಅಧ್ಯಕ್ಷರಾದ ಡಾ.ತ್ರಿಲೋಚನ್ ಮಹಾಪಾತ್ರ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ವಿ,ಸುರೇಶ್, ಬೆಂಗಳೂರು ತೋಟಗಾರಿಕೆ ಇಲಾಖೆಯ ನಿರ್ದೇಶಕರಾದ ಡಿ.ಎಸ್.ರಮೇಶ್, ಬೆಂಗಳೂರು ಕೃಷಿ ಇಲಾಖೆಯ ನಿರ್ದೇಶಕರಾದ ಡಾ.ಜಿ.ಟಿ.ಪುತ್ರ,

- Advertisement - 

ಭಾರತ ಸರ್ಕಾರದ ಪಿ.ಪಿ.ವಿ & ಎಫ್.ಆರ್.. ರಿಜಿಸ್ಟ್ರಾರ್ ಜನರಲ್ ಡಾ.ದಿನೇಶ್ ಕುಮಾರ್ ಅಗರವಾಲ್, ಬೆಂಗಳೂರಿನ ಕರ್ನಾಟಕ ರಾಜ್ಯ ಬೀಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಕೆ.ಜಿ.ಅನೂಪ್, ಮೈಸೂರಿನ ಸಹಜ ಸಮೃದ್ಧ ಅಧ್ಯಕ್ಷರಾದ ಶಿವನಾಪುರ ರಮೇಶ್, ಕೋಲಾರ ಜಿಲ್ಲೆಯ ಮುಳಬಾಗಿಲಿನ ಬೀಜಮಾತಾ ಶ್ರೀಮತಿ ಪಾಪಮ್ಮ,  GIZ-SuATI ಯ ರಾಜ್ಯ ಮಟ್ಟದ ಹಿರಿಯ ತಂಡದ ಮುಖ್ಯಸ್ಥರಾದ ಶ್ರೀಮತಿ ನಮ್ರತಾ ಶರ್ಮ ಭಾಗವಹಿಸಲಿದ್ದಾರೆ. ಬೆಂಗಳೂರಿನ ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷರಾದ ಡಾ..ಬಿ.ಪಾಟೀಲ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಜೂನ್ 14 ರಂದು ತಾಂತ್ರಿಕ ಅಧಿವೇಶನ 1 ಮದ್ಯಾಹ್ನ 12.00 ಗಂಟೆಯಿಂದ 1.30ರವರೆಗೆ ಕರ್ನಾಟಕದಲ್ಲಿ ದೇಸಿ ಬೀಜ ಸಂರಕ್ಷಣೆಯ ಪ್ರಾಮುಖ್ಯತೆ ಹಾಗೂ ಅವಲೋಕನ, ತಾಂತ್ರಿಕ ಅಧಿವೇಶನ 2, ಮದ್ಯಾಹ್ನ 2.30 ಗಂಟೆಯಿಂದ 3.30ರವರೆಗೆ ದೇಸಿ ಬೀಜ ಸಂರಕ್ಷಣೆ ಸವಾಲುಗಳು ಮತ್ತು ಅವಕಾಶಗಳು, ತಾಂತ್ರಿಕ ಅಧಿವೇಶನ3 ಮದ್ಯಾಹ್ನ 3.30 ಗಂಟೆಯಿಂದ 4.30ರವರೆಗೆ ರೈತರು ಅಭಿವೃದ್ಧಿಪಡಿಸಿದ ತಳಿಗಳನ್ನು ಮುಖ್ಯವಾಹಿನಿಗೆ ತರುವ ಕ್ರಮಗಳು ಹಾಗೂ ಪ್ರಾಮುಖ್ಯತೆ ಕುರಿತ ಅಧಿವೇಶನಗಳು ಜರುಗಲಿದ್ದು, 4.30ಗಂಟೆಯಿಂದ 5.00 ಗಂಟೆಯವರೆಗೆ ಸಮಾರೋಪ ಸಮಾರಂಭ ನಡೆಯಲಿದೆ.

- Advertisement - 

ಜೂನ್ 15 ರಂದು ದ್ವಿತೀಯ ದಿವಸದ ತಾಂತ್ರಿಕ ಅಧಿವೇಶನ 2 ಬೀಜ ಜ್ಞಾನ ಅಧಿವೇಶನ 1, ಬೆಳಿಗ್ಗೆ 11.00 ಗಂಟೆಯಿಂದ 12.00 ರವರೆಗೆ ಬೀಜ ಸಂರಕ್ಷಣೆಯಲ್ಲಿ ಬೀಜ ಸಂರಕ್ಷಕರ ಅನುಭವಗಳ ಹಂಚಿಕೆ, ಬೀಜ ಜ್ಞಾನ ಅಧಿವೇಶನ 2, ಮದ್ಯಾಹ್ನ 12.00 ಗಂಟೆಯಿಂದ 1.30ರವರೆಗೆ ಸಮುದಾಯ ಬೀಜ ಬ್ಯಾಂಕುಗಳ ಸ್ಥಾಪನೆ ಮತ್ತು ನಿರ್ವಹಣೆ, ಬೀಜ ಜ್ಞಾನ ಅಧಿವೇಶನ3 ಮದ್ಯಾಹ್ನ 2.30 ಗಂಟೆಯಿಂದ 3.30ರವರೆಗೆ ಸಾವಯವ ಬೀಜ ಉತ್ಪಾದನೆ ಮತ್ತು ಮಾರಾಟ ಅಧಿವೇಶನಗಳು ಜರುಗಲಿದ್ದು, 4.00 ಗಂಟೆಯಿಂದ 5.00 ಗಂಟೆಯವರೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

 

 

Share This Article
error: Content is protected !!
";