ನಿರ್ಬಂಧದ ನಡುವೆಯೂ ಪಟಾಕಿ ಮಾರಾಟ ಜೋರು

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೀಪಗಳ ಹಬ್ಬ ದೀಪಾವಳಿಯ
ಮುಖ್ಯ ಆಕರ್ಷಣೆ ಎಂದರೆ ಪಟಾಕಿಗಳು ಮಕ್ಕಳು ಮತ್ತು ವಯಸ್ಕರು ಪಟಾಕಿ ಹಚ್ಚುವಾಗ ಅವಘಡಗಳು ಸಂಭವಿಸುತ್ತವೆ ಎಂದು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದ್ದು ಪಟಾಕಿ ಮಾರಾಟಕ್ಕೆ ಇದ್ದ  ಆತಂಕ ತುಸು ದೂರವಾಗಿದ್ದು, ಪಟಾಕಿ ವ್ಯಾಪಾರ ಜೋರಾಗಿಯೇ ನಡೆಯುತ್ತಿದೆ. ನಿರ್ಬಂಧ ಹಾಗೂ ಜಾಗೃತಿಯ ನಡುವೆಯೂ ಜನ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಕಳೆದ ಕೆಲವು ದಿನಗಳ ಹಿಂದೆ  ಪಟಾಕಿಯ ಅವಘಡಕ್ಕೆ  ದೊಡ್ಡಬಳ್ಳಾಪುರ  ನಗರದ ಮುತ್ತೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಪಟಾಕಿ ಅವಘಡದಲ್ಲಿ ಮೂರು ಜನ ಬಾಲಕರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಗಣೇಶ ವಿಸರ್ಜನೆ ವೇಳೆ ಪಟಾಕಿ ಸಿಡಿಸದಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದರು.

- Advertisement - 

ವ್ಯಾಪಾರಕ್ಕೆ ಹಲವಾರು ನಿರ್ಬಂಧಗಳನ್ನು ವಿಧಿಸಲಾಗಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಹಸಿರು ಪಟಾಕಿ ಹಾಗೂ ಮಾಲಿನ್ಯರಹಿತ ಪಟಾಕಿಗಳ ಮಾರಾಟಕ್ಕೆ ಸರ್ಕಾರ ಅವಕಾಶ ಕಲ್ಪಿಸಿದೆ. ಎಂದಿನಂತೆ ಪಟಾಕಿ ಮಾರಾಟಕ್ಕೆ ಪರವಾನಗಿ ಸಿಗುವುದು ವಿಳಂಬವಾಗಿತ್ತು.

ಪ್ರತಿವರ್ಷದಂತೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಪಟಾಕಿಗಳ ವ್ಯಾಪಾರಕ್ಕೆ ಅವಕಾಶ ನೀಡಲಾಗುತ್ತಿತ್ತು. ಕಳೆದ ಎರಡು ವರ್ಷಗಳಿಂದ ಕೆ.ಆರ್.ಎನ್ ಲೋಕದ ಬಳಿ ಖಾಸಗಿ ಜಮೀನಿನಲ್ಲಿ ‌ಪಟಾಕಿ ಮಾರಾಟಕ್ಕೆ ತಾತ್ಕಾಲಿಕ ಪರವಾನಗಿ ನೀಡಲಾಗಿದೆ. ನಗರ ಕೆ ಸಿ ಪಿ ವೃತ್ತದಲ್ಲಿ ಖಾಲಿ ಜಾಗದಲ್ಲಿ  ನಗರ ಸಭೆ ವತಿಯಿಂದ ತಾತ್ಕಾಲಿಕವಾಗಿ 12  ಪಟಾಕಿ ಮಳಿಗೆಗಳನ್ನು  ಸ್ಥಾಪನೆ ಮಾಡಿ ವ್ಯಾಪಾರಸ್ಥರಿಗೆ ಮಾರಾಟದಲ್ಲಿ ಕಟ್ಟುನಿಟ್ಟಾಗಿ  ಶಿಸ್ತಿನ  ಕ್ರಮ ವಹಿಸುವಂತೆ ಎಚ್ಚರಿಕೆ ನೀಡಲಾಗಿದೆ.

- Advertisement - 

 

 

 

 

Share This Article
error: Content is protected !!
";