ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಎಲ್ಲಾ ವರ್ಗಕ್ಕೂ ಸೇರಿದವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಅರಸು ಅಸೋಸಿಯೇಷನ್ ಅವರು ಹಮ್ಮಿಕೊಂಡಿದ್ದ ದೇವರಾಜು ಅರಸು ಭವನದ ಸುವರ್ಣ ಮಹೋತ್ಸವ – 2025 ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಸೋಸಿಯೇಷನ್ ಸದಸ್ಯರಿಗೆ ಶುಭಹಾರೈಸಿ ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಆಡಳಿತ ವೈಖರಿ ಎಲ್ಲರೂ ಮೆಚ್ಚುವಂತದ್ದು. ಅವರಿಗೆ ಎಂದಿಗೂ ಹಿಂದುಳಿದ ವರ್ಗದವರು ಎಂಬ ಭಾವನೆ ಇರಲಿಲ್ಲ. ಅರಸು ಅವರು ಎಲ್ಲಾ ವರ್ಗಕ್ಕೂ ಸೇರಿದವರು. ಅವರ ತತ್ವ. ಆದರ್ಶಗಳು ಪ್ರತಿಯೊಬ್ಬರಿಗೂ ಮಾದರಿಯಾಗಿವೆ. ರಾಜ್ಯ ರಾಜಕೀಯಕ್ಕೆ ಅಡಿಪಾಯ ಹಾಕಿದ ದೇವರಾಜ ಅರಸು ಅವರ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

