ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರುನಾಡಿನ ಸುಪುತ್ರ, ಮಾಜಿ ಪ್ರಧಾನಮಂತ್ರಿಗಳು, ಪಕ್ಷದ ವರಿಷ್ಠರಾದ ಹೆಚ್.ಡಿ ದೇವೇಗೌಡ ಅವರಿಗೆ ಜೆಡಿಎಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ನಾಡಿನ ಸಮಸ್ತ ಜನತೆಯ ಪರವಾಗಿ ಹುಟ್ಟ ಹಬ್ಬವನ್ನು ಜೆಡಿಎಸ್ ಪಕ್ಷದ ವತಿಯಿಂದ ಆಚರಿಸಿದರು.
ನಾಡು, ನುಡಿ, ಜಲ ವಿಷಯಗಳಲ್ಲಿ ರಾಷ್ಟ್ರಮಟ್ಟದಲ್ಲಿ ಕನ್ನಡಿಗರಿಗೆ ಗಟ್ಟಿ ಧ್ವನಿಯಾಗಿರುವ ಧೀಮಂತ ನಾಯಕ, ಪ್ರಧಾನಿ ಹುದ್ದೆಗೇರಿದಾಗ ಮಹಿಳೆಯರಿಗಾಗಿ ಮೊದಲ ಬಾರಿಗೆ ಮಹಿಳಾ ಮೀಸಲಾತಿಯನ್ನು ಜಾರಿಗೆ ತಂದ ರಾಷ್ಟ್ರಕಂಡ ಅಪರೂಪದ ರಾಜಕಾರಣಿ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಹೀಗೆ ಎಲ್ಲ ವರ್ಗದವರಿಗೂ ಸೌಲಭ್ಯ ಸಿಗುವಂತೆ ಮೀಸಲಾತಿ ಯೋಜನೆಯನ್ನು ಜಾರಿಗೆ ತಂದು ಸಾಮಾಜಿಕ ನ್ಯಾಯ ಒದಗಿಸಿದ ರಾಜಕೀಯ ಮುತ್ಸದ್ಧಿ ಎಂದು ಸ್ಮರಿಸಿದ್ದಾರೆ.
ಕರ್ನಾಟಕ ಸೇರಿ ದೇಶಾದ್ಯಂತ ನೀರಾವರಿ ಯೋಜನೆಗಳಿಗೆ ಒತ್ತು ನೀಡಿದ “ನೀರಾವರಿ ಪಿತಾಮಹ”, ನೀರಾವರಿ ತಜ್ಞ, ಪ್ರಧಾನಿಯಾಗಿ ತವರು ಕರ್ನಾಟಕಕ್ಕೂ ಹೆಚ್.ಡಿ ದೇವೇಗೌಡರ ಕೊಡುಗೆ ಅಜರಾಮರ. ರೈಲ್ವೇ, ನೀರಾವರಿ, ವಿದ್ಯುತ್, ಕೈಗಾರಿಕೆ , ಕೃಷಿ ಸೇರಿದಂತೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ ಎಂದು ಸ್ಮರಿಸಿದರು.