ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾಜಿ ಪ್ರಧಾನಮಂತ್ರಿ ಹಾಗೂ ರಾಜ್ಯಸಭಾ ಸದಸ್ಯರಾದ ಹೆಚ್.ಡಿ ದೇವೇಗೌಡರು ರಾಜ್ಯಸಭೆಯಲ್ಲಿ ʼವಂದೇ ಮಾತರಂ‘ ಗೀತೆಗೆ 150 ವರ್ಷಾಚರಣೆ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕವಿ ಬಂಕಿಮ್ಚಂದ್ರ ಚಟರ್ಜಿ ಅವರ ʼವಂದೇ ಮಾತರಂʼ ದೇಶಭಕ್ತಿ ಗೀತೆಯು ಹಲವು ತಲೆಮಾರಿನ ಜನರಿಗೆ ಸ್ಫೂರ್ತಿ ನೀಡಿದ್ದು, ಭಾರತೀಯರನ್ನು ಅಂದಿನಿಂದ ಇಂದಿನವರೆಗೂ ಒಗ್ಗೂಡಿಸುತ್ತಲೇ ಬಂದಿದೆ, ರಾಷ್ಟ್ರೀಯತೆ ಮೇಲೆ ಪ್ರಭಾವ ಬೀರಿದೆ ಎಂದು ದೇವೇಗೌಡರು ಬಣ್ಣಿಸಿದರು.
ವಂದೇ ಮಾತರಂ ಗೀತೆಯಂತೆ ರಾಷ್ಟ್ರಕವಿ ಕುವೆಂಪು ಅವರಿಂದ ರಚಿತವಾದ ಕರ್ನಾಟಕದ ನಾಡಗೀತೆ “ಜಯ ಭಾರತ ಜನನಿಯ ತನುಜಾತೆ” ಕೇಳಿದಾಗಲೂ ನಾನು ಅದೇ ರೀತಿ ಭಾವುಕನಾಗುತ್ತೇನೆ ಎಂದ ಅವರು, ಕವಿಗಳಾದ ರವೀಂದ್ರನಾಥ್ಟ್ಯಾಗ್ಯೂರ್, ಬಂಕಿಮ್ ಚಂದ್ರ ಚಟರ್ಜಿ ಮತ್ತು ಕುವೆಂಪು ಅವರಿಗೆ ಮಾಜಿ ಪ್ರಧಾನಿ ದೇವೇಗೌಡರು ಗೌರವ ಸಲ್ಲಿಸಿದರು.

