ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಚಳ್ಳಕೆರೆ ತಾಲೂಕ್ ಗಡಿ ಗ್ರಾಮ ಕ್ಯಾದಿಗುಂಟೆಯಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮ ಆಚರಿಸಲಾಯಿತು.
ಕ್ಯಾದಿಗುಂಟೆ ಗ್ರಾಮದ ಶಿಕ್ಷಕ ದಂಪತಿಗಳಾದ ಶ್ರೀನಿವಾಸ್ ಮತ್ತು ಲಕ್ಷ್ಮಿ ನಡೆಸುತ್ತಿರುವ ಜ್ಞಾನ ದೀವಿಗೆ ಟ್ಯೂಟೋರಿಯಲ್ ಸಂಸ್ಥೆಯಿಂದ ನಡೆಸಿದ ಕಾರ್ಯಕ್ರಮದಲ್ಲಿ ಸುಮಾರು 150ಕ್ಕೂ ಹೆಚ್ಚು ಮಕ್ಕಳು ಹಾಗೂ ಇನ್ನೂರಕ್ಕೂ ಹೆಚ್ಚು ಮಕ್ಕಳ ಪೋಷಕರು ಮತ್ತು ತಂದೆ ತಾಯಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಕನ್ನಡ ನಾಡಿನ ಜ್ಞಾನಪೀಠ ಪುರಸ್ಕೃತ ಕವಿಗಳ ಮತ್ತು ಕಾದಂಬರಿ ಕಾರರ ಕನ್ನಡಕ್ಕಾಗಿ ತನು ಮನ ಧನಗಳನ್ನು ಅರ್ಪಿಸಿ ಮಡಿದವರ ಹಾಗೂ ವಿಶೇಷವಾಗಿ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಹಾಗೂ ಸಾಲುಮರದ ತಿಮ್ಮಕ್ಕನವರ ಭಾವಚಿತ್ರಗಳನ್ನಿಟ್ಟು ಕನ್ನಡ ಪ್ರೇಮ ಮೆರೆದರು.
ಕ್ಯಾದಿಗುಂಟೆ ಗ್ರಾಮದ ರಾಜಬೀದಿಗಳಲ್ಲಿ ಅದ್ಧೂರಿ ಮೆರವಣಿಗೆ ಆಯೋಜಿಸಲಾಗಿದ್ದು ಸಂಚರಿಸಿ ಮುಖ್ಯ ದ್ವಾರದಲ್ಲಿ ಜ್ಞಾನ ದೀವಿಗೆಯ ವ್ಯವಸ್ಥಾಪಕ ಶ್ರೀನಿವಾಸ್ ಮತ್ತು ಲಕ್ಷ್ಮಿ ದಂಪತಿ ಅವರಿಗೆ ಶ್ರೀ ವಿನಾಯಕ ಯುವಕ ಸಂಘದಿಂದ ಸನ್ಮಾನ ಮಾಡಿ ಮಾತನಾಡಿದ ನಾಗರಾಜ್.ಎ. ಪರಶುರಾಂಪುರ, ಗಡಿ ಗ್ರಾಮಗಳಲ್ಲಿ ಕನ್ನಡ ಭಾಷೆಯ ಸ್ಥಿತಿ ಚಿಂತಾಜನಕವಾಗಿದೆ.
ಗಡಿ ಗ್ರಾಮಗಳ ಕನ್ನಡಿಗರು ನೆರೆ ರಾಜ್ಯಗಳ ಪ್ರಭಾವದಿಂದಾಗಿ ಕನ್ನಡ ಭಾಷೆ ಮತ್ತು ಸಂಸ್ಕೃತಿ ಉಳಿಸಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಅವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ನಿಟ್ಟಿನ ಮಾಡುವ ಪ್ರಯತ್ನಿಗಳ ಪರಿಸ್ಥಿತಿ ಕಠಿಣವಾಗಿದೆ ಎಂದು ತಿಳಿಸಿದರು.
ಗಡಿ ಗ್ರಾಮಗಳಲ್ಲಿ ವಾಸಿಸುವ ಕನ್ನಡಿಗರು ನೆರೆ ರಾಜ್ಯಗಳ ಭಾಷೆ ಮತ್ತು ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗುತ್ತಿದ್ದಾರೆ. ಇದು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅಳಿವು-ಉಳಿವಿನ ಪ್ರಶ್ನೆಯಾಗಿದೆ, ಅದರಲ್ಲೂ ನೆರೆ ರಾಜ್ಯಗಳ ಪ್ರಭಾವದಿಂದಾಗಿ ಸಂಕಷ್ಟ ಎದುರಾಗಿದೆ ಎಂದು ನಾಗರಾಜ್ ಬೇಸರ ವ್ಯಕ್ತಪಡಿಸಿದರು.
ಕನ್ನಡ ಭಾಷೆಯ ಸ್ಥಿತಿ ಕೇವಲ ನವೆಂಬರ್ ತಿಂಗಳ ಕನ್ನಡ ರಾಜ್ಯೋತ್ಸವಕ್ಕೆ ಸೀಮಿತವಾಗಿರುವುದು ಶೋಚನೀಯ ಸಂಗತಿ. ಗಡಿ ಭಾಗಗಳ ಅಭಿವೃದ್ಧಿ ಹೆಚ್ಚಿನ ಒತ್ತು ನೀಡಬೇಕು ಎಂದು ನಾಗರಾಜ್ ಆಗ್ರಹ ಮಾಡಿದರು.
ಈ ಎಲ್ಲ ಸಂಕಷ್ಟಗಳ ಮಧ್ಯ ಕ್ಯಾದಿಗುಂಟೆ ಗಡಿಗ್ರಾಮದಲ್ಲಿ ರಾಜ್ಯೋತ್ಸವದ ಮೆರಗು ತಂದಿರುವುದು ತುಂಬಾ ಸಂತೋಷದ ವಿಚಾರ ಹಾಗೆ ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ನಾಡು ನುಡಿಯ ಬಗ್ಗೆ ಖ್ಯಾತ ಕವಿಗಳು ಕಾದಂಬರಿ ಕಾರರ ಬಗ್ಗೆ ಹಾಗೂ ಬಸವಾದಿ ಶರಣರ ಬಗ್ಗೆ ಶರಣ ಪ್ರಮತರ ಬಗ್ಗೆ ಚಿಕ್ಕ ವಯಸ್ಸಿನಲ್ಲೇ ಮಕ್ಕಳ ಮನಸ್ಸಿನಲ್ಲಿ ತುಂಬಿದರೆ ಈ ನಾಡಿಗೆ ಈ ದೇಶಕ್ಕೆ ಅತಿ ಮುಖ್ಯವಾಗಿ ಪೋಷಕರ ಮತ್ತು ತಂದೆ ತಾಯಿಗಳ ಬಗ್ಗೆ ವಿಶ್ವಾಸ ಪ್ರೀತಿ ಮಮತೆ ಹಾಗೂ ವಯಸ್ಸಾದವರ ಊಟ ಉಪಚಾರ ಮಾಡುವಂತಹ ಕರುಣಾ ಭಾವನೆ ಉಂಟಾಗುವುದರಲ್ಲಿ ಸಂದೇಶವೇ ಇಲ್ಲ ಎಂದು ನಾಗರಾಜ್ ಪರಶುರಾಮಪುರ ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಶುಶ್ರೂಷಕಿ ಪುಷ್ಪ, ನಿವೃತ್ತ ಶುಶ್ರೂಷಕಿ ಕಮಲಮ್ಮ ರವರಿಗೆ ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಮತ್ತು ದಿವಂಗತ ಸಾಲುಮರದ ತಿಮ್ಮಕ್ಕ ರವರ ಭಾವಚಿತ್ರಗಳನ್ನು ಕೊಟ್ಟು ಟ್ಯೂಟೋರಿಯಲ್ ವತಿಯಿಂದ ಸನ್ಮಾನಿಸಿದರು.
ಮಕ್ಕಳು ಪೋಷಕರು ಊರಿನ ಪ್ರಮುಖರು ಸಾರ್ವಜನಿಕರು ಉಪಸ್ಥಿತರಿದ್ದು ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿದರು.

