ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಮಡಿವಾಳ ಸಮುದಾಯ ಆರ್ಥಿಕವಾಗಿ ಸಾಮಾಜಿಕವಾಗಿ ರಾಜಕೀಯವಾಗಿ ಬೆಳೆಯಲು ಸದಾ ನಮ್ಮ ಸಂಘದ ಬೆಂಬಲವಿರುತ್ತದೆ. ಸಮುದಾಯದ ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆಯುವ ಮೂಲಕ ಸಮಾಜದ ಉತ್ತಮ ಪ್ರಜೆಗಳಾಗಿ ಉತ್ತಮ ಸೇವೆ ಸಲ್ಲಿಸಲಿ ಎಂಬುದು ನಮ್ಮ ಆಶಯ ಎಂದು ಕರ್ನಾಟಕ ರಾಜ್ಯ ಮಡಿವಾಳ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಆಯೋಜನೆ ಮಾಡಲಾಗಿದ್ದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು ಸಮುದಾಯದ ಏಳಿಗೆಗಾಗಿ ಯಾವುದೇ ಅಪೇಕ್ಷೆ ಇಲ್ಲದೆ ಸದಾ ದುಡಿಯುತ್ತಿದ್ದೇವೆ.
ಸಮುದಾಯದ ಪ್ರತಿಯೊಬ್ಬರು ಸಮಾಜದ ಮುಖ್ಯ ವಾಹಿನಿಯಲ್ಲಿ ಉತ್ತಮ ರೀತಿಯಲ್ಲಿ ಜೀವಿಸಲಿ ಎಂಬುದೇ ನಮ್ಮೆಲ್ಲರ ಆಶಯ, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಉತ್ತಮ ಸಂಘಟನೆಯಾಗಿದ್ದು, ಪ್ರತಿ ಕಾರ್ಯಕ್ರಮಕ್ಕೂ ಉತ್ತಮ ರೀತಿಯಲ್ಲಿ ಸ್ಪಂದನೆ ದೊರೆಯುತ್ತಿದೆ. ಸ್ಥಳೀಯ ಮುಖಂಡರ ಸಲಹೆ ಮತ್ತು ಸಹಕಾರದಿಂದ ತಾಲೂಕಿನಲ್ಲಿ ಮಡಿವಾಳ ಸಮುದಾಯ ಮತ್ತಷ್ಟು ಅಭಿವೃದ್ಧಿಗೊಳ್ಳಲಿದೆ ಎಂದರು.
ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮುನಿಶಾಮಯ್ಯ ಮಾತನಾಡಿ ಇಂದು ನಮ್ಮ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ್ ಅವರ ಹುಟ್ಟು ಹಬ್ಬದ ಆಚರಣೆಯನ್ನು ತಾಲೂಕಿನ ಸಮುದಾಯದ ಮುಖಂಡರೊಂದಿಗೆ ಆಚರಿಸಿದ್ದೇವೆ.
ತಾಲೂಕಿನಲ್ಲಿ ಸಮುದಾಯದವನ್ನು ಒಗ್ಗೂಡಿಸಲು ರಾಜ್ಯ ಸಮಿತಿಯಿಂದ ನಮಗೆ ಸಾಕಷ್ಟು ಬೆಂಬಲ ದೊರೆತಿದ್ದು ಪ್ರಮುಖವಾಗಿ ಪ್ರಕಾಶ್ ರವರ ಸಲಹೆ ಮತ್ತು ಸಹಕಾರ ಸದಾ ದೊರೆತಿದೆ.
ಇಂದು ಪ್ರಕಾಶ್ ಅವರ ಹುಟ್ಟುಹಬ್ಬವನ್ನು ತಾಲೂಕಿನ ಮುಖಂಡರು ಒಮ್ಮತದಿಂದ ಒಟ್ಟಾಗಿ ಆಚರಿಸುತ್ತಿರುವುದು ಸಂತಸ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಘದ ತಾಲೂಕು ಉಪಾಧ್ಯಕ್ಷ ನರಸಿಂಹಮೂರ್ತಿ, ಗಂಗರಾಜು, ಮುಖಂಡರಾದ ರಾಜಘಟ್ಟ ದೇವರಾಜು,ನೆಲಮಂಗಲ ರಂಗಸ್ವಾಮಿ,ಮುನಿಯಪ್ಪ,ನಾರಾಯಣಪ್ಪ,ನಟರಾಜು,ವೀರಾಂಜಿನಿ, ವೈರ್ ಶಿವಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.