ಅಭಿವೃದ್ಧಿ ಶೂನ್ಯ, ಸುಳ್ಳು ಆಶ್ವಾಸನೆ, ಬೊಕ್ಕಸ ಖಾಲಿ ಇದು ಬೊಗಳೆ ಕಾಂಗ್ರೆಸ್ ಆಡಳಿತದ ಮಾದರಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಭಿವೃದ್ಧಿ ಶೂನ್ಯ
, ಸುಳ್ಳು ಆಶ್ವಾಸನೆ, ಬೊಕ್ಕಸ ಖಾಲಿ ! ಇದು ಬೊಗಳೆ ಕಾಂಗ್ರೆಸ್‌ಆಡಳಿತದ ಮಾದರಿ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ. ಬಂಡವಾಳವಿಲ್ಲದ ಬಡಾಯಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ರಾಜ್ಯದ ಜನರ ಮೂಗಿಗೆ ಬರೀ ತುಪ್ಪ ಸವರುವ ಕೆಲಸ ಮಾಡುತ್ತಿದೆ.

ದೆಹಲಿಯಲ್ಲಿ ನಂದಿನಿ ಉತ್ಪನ್ನಗಳ ಮಾರಾಟ, ವಿದೇಶಿ ತಂಡಗಳಿಗೆ ಪ್ರಾಯೋಜಕತ್ವ ಎಂದು ಬಡಾಯಿ ಕೊಚ್ಚಿಕೊ‍ಳ್ಳುವ ಸರ್ಕಾರಕೆಎಂಎಫ್‌ನೌಕರರಿಗೆ ವೇತನ ತಾರತಮ್ಯ ಮಾಡುತ್ತಿದೆ ಎಂದು ಜೆಡಿಎಸ್ ಆರೋಪಿಸಿದೆ. 

- Advertisement - 

ಕೆಎಂಎಫ್ ನೌಕರರಿಗೆ ಇನ್ನೂ ಶೇ.8ರಷ್ಟು ವೇತನ ಹೆಚ್ಚಳ ಬಾಕಿ ಉಳಿಸಿಕೊಂಡಿರುವುದು ಯಾಕೆ ? ಇದು ತಾರತಮ್ಯ ಅಲ್ಲವೇ ಸರ್ಕಾರದ ಖಜಾನೆಯಲ್ಲಿ ಹಣವಿಲ್ಲವೇ ಸಿದ್ದರಾಮಯ್ಯನವರೇ? ಎಂದು ಜೆಡಿಎಸ್ ಪ್ರಶ್ನಿಸಿದೆ.

 

- Advertisement - 

Share This Article
error: Content is protected !!
";