ಭಕ್ತರ ಕಲ್ಪತರು ಶ್ರೀರಾಮಕೃಷ್ಣರು-ಯಶೋಧಾ ಪ್ರಕಾಶ್

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಅವತಾರಪುರುಷರಾದ ಶ್ರೀರಾಮಕೃಷ್ಣರು ಭಕ್ತರ ಕಲ್ಪತರು ಆಗಿದ್ದರು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತೆ ಯಶೋಧಾ ಪ್ರಕಾಶ್ ಅಭಿಪ್ರಾಯಪಟ್ಟರು.

ಇಲ್ಲಿನ ಶಿವನಗರದ ತಮ್ಮ ನಿವಾಸದಲ್ಲಿ “ಶ್ರೀರಾಮಕೃಷ್ಣರ ಕಲ್ಪತರು ದಿನ”ದ ಪ್ರಯುಕ್ತ ಆಯೋಜಿಸಿದ್ದ “ಮನೆ-ಮನೆಗೆ ಶ್ರೀರಾಮಕೃಷ್ಣರು ಪ್ರಚಾರಾಂದೋಲನ” ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಬೇಡಿದ್ದನ್ನು ಭಗವಂತನು ಕೊಡುತ್ತಾನೆ ನಿಜ‌.

ಆದರೆ ಅನೇಕ ಬಾರಿ ಅವನು ನಮ್ಮನ್ನು ಪರೀಕ್ಷಿಸಿ ನಂತರ ನೀಡುತ್ತಾನೆ. ಅದೇ ರೀತಿ ಶ್ರೀರಾಮಕೃಷ್ಣರು ಮುಂಚಿತವಾಗಿಯೂ ಭಕ್ತರಿಗೆ ವಿವಿಧ ರೀತಿಯಲ್ಲಿ ಕೃಪೆ ಮಾಡಿದ್ದರು. ಆದರೆ 1886ರ ಜನವರಿ 1ರಂದು ಅನೇಕ ಭಕ್ತರು ಶ್ರೀರಾಮಕೃಷ್ಣರ ದರ್ಶನವನ್ನು ಪಡೆಯಲು ಬಂದಿದ್ದರು.

ಆ ಸಂದರ್ಭದಲ್ಲಿ ಶ್ರೀರಾಮಕೃಷ್ಣರಿಗೆ ಗಂಟಲು ಕ್ಯಾನ್ಸರ್ ಬಂದಿತ್ತು. ಆದರೆ ಅಂದಿನ ದಿನ ಅವರ ಆರೋಗ್ಯದಲ್ಲಿ ತುಸು ಚೇತರಿಕೆ ಕಂಡಿದ್ದರಿಂದ ಮಧ್ಯಾಹ್ನ ಅವರು ಹೊರಬಂದರು. ಅಂದು ಶ್ರೀರಾಮಕೃಷ್ಣರು ಗಿರೀಶ್ ಚಂದ್ರ ಘೋಷ್ ಸೇರಿದಂತೆ ಅನೇಕ ಭಕ್ತರಿಗೆ ಅವರು ಬೇಡಿದ ವರಗಳನ್ನು ದಯಪಾಲಿಸಿದರು. ಅವರಿಗೆ ಕುಂಡಲಿನಿ ಶಕ್ತಿ ಜಾಗೃತಿಯಾಗುವಂತೆ ಮಾಡಿ ಅಲೌಕಿಕ ಅನುಭವಗಳನ್ನು ಕರುಣಿಸಿ-ಹರಸಿದರು ಎಂದು ಕಲ್ಪತರು ದಿನದ ವಿಶೇಷತೆಗಳ ಬಗ್ಗೆ ತಿಳಿಸಿದರು.

ಶ್ರೀಶಾರದಾಶ್ರಮದ ಸ್ವಯಂಸೇವಕ ಯತೀಶ್ ಎಂ ಸಿದ್ದಾಪುರ ಮಾತನಾಡಿ  ಶ್ರೀರಾಮಕೃಷ್ಣರು ಭಕ್ತರು ಬೇಡಿದ ವರಗಳನ್ನು ಈಡೇರಿಸುವ ಕಲ್ಪತರುವಾಗಿ ಆಧ್ಯಾತ್ಮಿಕ ಸಾಧಕರನ್ನು ಮುನ್ನೆಡೆಸುತ್ತಿದ್ದಾರೆ ಎಂದು ಹೇಳಿದರು.
ಈ ಸತ್ಸಂಗ ಕಾರ್ಯಕ್ರಮಕ್ಕೆ ಮೊದಲು ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀವಿಷ್ಣು ಸಹಸ್ರನಾಮ ಪಾರಾಯಣ ಮತ್ತು ಶ್ರೀರಾಮಕೃಷ್ಣರ ಕುರಿತ ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು.

ಸತ್ಸಂಗ ಸಭೆಯಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಮಂಗಳ, ಕಲ್ಪನ‌ಮಧುಸೂದನ, ಲಕ್ಷ್ಮೀದೇವಮ್ಮ , ವಿಮಲ ನಾಗರಾಜ್, ದ್ರಾಕ್ಷಾಯಣಿ, ಪ್ರೇಮಲೀಲಾ, ಸರಸ್ವತಮ್ಮ, ಶೈಲಜ, ವಿಜಯಲಕ್ಷ್ಮೀ, ರಶ್ಮಿ ರಮೇಶ್, ನಾಗರತ್ನಮ್ಮ, ಗೀತಾಲಕ್ಷ್ಮೀ, ರಶ್ಮಿ ವಸಂತ, ಕೃಷ್ಣವೇಣಿ, ವನಜಾಕ್ಷಿ ಮೋಹನ್, ಮಾಣಿಕ್ಯ ಸತ್ಯನಾರಾಯಣಜಯಮ್ಮ,ಪಂಕಜ, ಗೀತಾ ನಾಗರಾಜ್, ಕೆ.ಎಸ್, ವೀಣಾ,ವೀರಮ್ಮ, ಗೌತಮ್, ಸೇರಿದಂತೆ ಶ್ರೀಶಾರದಾಶ್ರಮದ ಸದ್ಭಕ್ತರು ಪಾಲ್ಗೊಂಡಿದ್ದರು.

 

 

 

 

- Advertisement -  - Advertisement - 
Share This Article
error: Content is protected !!
";