ಧರ್ಮಸ್ಥಳ ಗ್ರಾಮಾಭಿವೃದ್ಧಿಯಿಂದ ಕೆರೆ ಹೂಳೆತ್ತುವ ಕಾರ್ಯ ಆರಂಭ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ತಾಲ್ಲೂಕು
,ತೂಬಗೆರೆ ಹೋಬಳಿ ‌ಅಂತರಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡಬಳ್ಳಾಪುರ ತಾಲ್ಲೂಕು ಕಂಟನಕುಂಟೆ ವಲಯದ ಅಂತರಹಳ್ಳಿ ಗ್ರಾಮದ ಸುಮಾರು 200 ವರ್ಷ ಇತಿಹಾಸವಿರುವ ಗ್ರಾಮದ ಕೆರೆಯನ್ನು ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದ ಅಡಿಯಲ್ಲಿ ಹೂಳೆತ್ತುವ ಕಾಮಗಾರಿ ಯನ್ನು ಕೈಗೊಳ್ಳಲಾಗಿದ್ದು ಇಂದು ನಾಮಫಲಕ ಅನಾವರಣ ಹಾಗೂ ಕೆರೆ ಹಸ್ತಾಂತರ ಕಾರ್ಯಕ್ರಮ ನೆರವೇರಿಸಲಾಯಿತು.

 ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ನಿರ್ದೇಶಕ ಉಮಾರಬ್ಬ ತಾಲ್ಲೂಕಿನ ಯೋಜನಾಧಿಕಾರಿ ಸುಧಾ ಭಾಸ್ಕರ್ ನಾಯಕ್,ಕೆರೆ ಸಮಿತಿ ಅಧ್ಯಕ್ಷರಾದ ಗವಿ ಸಿದ್ದಯ್ಯ ಹಾಗೂ ಸ್ಥಳೀಯ ಪ್ರಮುಖರು ನೆರವೇರಿಸಿದರು.

 ಜಿಲ್ಲಾ ನಿರ್ದೇಶಕರಾದ ಉಮಾರಬ್ಬ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು 48 ಕಾರ್ಯಕ್ರಮಗಳಲ್ಲಿ ಅದರಲ್ಲಿ ವಿಶೇಷವಾಗಿ ನಮ್ಮೂರು ನಮ್ಮ ಕೆರೆ ಕೆರೆಗಳ ಪುನರ್ ಚೇತನ ಕಾರ್ಯಕ್ರಮವನ್ನು 2016 ರಿಂದ ಜಾರಿಗೆ ತರಲಾಯಿತು.

ಅನೇಕ ರೈತ ಕುಟುಂಬಗಳು ಧರ್ಮಸ್ಥಳಕ್ಕೆ ಬಂದು ಪೂಜ್ಯರಲ್ಲಿ ಮತ್ತು ಬರಗಾಲದ ಬಗ್ಗೆ ಅಳಲನ್ನು ತೋಡಿ ಕೊಂಡಿರುತ್ತಾರೆ ಅದರಂತೆ ವೀರೇಂದ್ರ ಹೆಗ್ಗಡೆಯವರು ಈ ಬಗ್ಗೆ ಯೋಜನೆಯ ಕಾರ್ಯಕರ್ತರ ಮೂಲಕ ಅಧ್ಯಯನ ನಡೆಸಿ ಕೆರೆಗಳ ಸದುಪಯೋಗ, ಉಪಯೋಗ ಪಡೆದು ರೈತರು ಆದಾಯ ಹೆಚ್ಚಿಸಿಕೊಂಡು ಸ್ವಾವಲಂಬಿ ಜೀವನ ನಡೆಸುವಂಥಾಗಲು ಹಾಗೂ ಜನರಲ್ಲಿ ಜಲ ಸಮೃದ್ಧಿ ಯಾಗಲು ಕೆರೆ ಹೂಳೆತ್ತಿ ಅಭಿವೃದ್ಧಿ ಮಾಡಲು ಮಾರ್ಗದರ್ಶನ ಮಾಡುತ್ತಿದ್ದಾರೆ ಎಂದರು.

 ನಿರ್ಗತಿಕ ಕುಟುಂಬಗಳಿಗೆ ಮಾಸಿಕ 1000 ರೂಗಳ ಮಶಾಸನವನ್ನು ರಾಜ್ಯದಲ್ಲಿ ಸುಮಾರು 15,000 ಕುಟುಂಬಗಳಿಗೆ ನೀಡಲಾಗುತಿದೆ ಅಲ್ಲದೆ ವಾತ್ಸಲ್ಯ ಕಾರ್ಯಕ್ರಮದಿಂದ ಇವರಿಗೆ ಮನೆ ಕಟ್ಟಿಕೊಡಗುಲಾಗುತಿದೆ, ವೃತ್ತಿಪರ ಕೋರ್ಸ್ ಗಳಿಗೆ ಸುಜ್ಞಾನ ನಿಧಿ ಶಿಷ್ಯವೇತನ ಮಾಸಿಕ 700 ರಿಂದ 1000 ಸಾವಿರಾರು ಸುಮಾರು 55000 ಸಾವಿರ ಕೋಟಿ ರೂ ವಿನಿಯೋಗಿಸಲಾಗಿದೆ,

ಸಮುದಾಯ ಅಭಿವೃದ್ಧಿಗಳಾದ ದೇವಸ್ಥಾನ ಜೀರ್ಣೋದ್ಧಾರ, ಹಿಂದೂ ರುದ್ರ ಭೂಮಿಯ ಅಭಿವೃದ್ಧಿ, ಶುದ್ಧ ಗಂಗಾ ಕುಡಿಯುವ ನೀರು, ಶಾಲೆಗಳಿಗೆ ಬೆಂಚು ಡೆಸ್ಕ್ ವಿತರಣೆ , ಜನ ಮಂಗಳ ಕಾರ್ಯಕ್ರಮದ ಮೂಲಕ ವಿಕಲಚೇತನರಿಗೆ ವಿವಿಧ ಉಪಕರಣಗಳ ವಿತರಣೆ ಇತ್ಯಾದಿ ವಿಶೇಷ ಯೋಜನೆಗಳ ಸೌಲಭ್ಯವನ್ನು ಧರ್ಮಸ್ಥಳ ಯೋಜನೆಯು ನೀಡುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ತಾಲೂಕಿನ ಯೋಜನಾಧಿಕಾರಿ ಸುಧಾ ಭಾಸ್ಕರ್ ನಾಯ್ಕ್ ಮಾತನಾಡಿ ಜೀವಜಲ ಕಾಪಾಡಿದರೆ ಮಾತ್ರ ನಮ್ಮ ಜೀವ ವೈವಿಧ್ಯವನ್ನು ಉಳಿಸಲು ಸಾಧ್ಯ, ಈ ನಿಟ್ಟಿನಲ್ಲಿ ಸಮಾಜವನ್ನು ಒಗ್ಗೂಡಿಸಿಕೊಂಡು ರಾಜ್ಯಾದ್ಯಂತ ಕೆರೆಗಳಿಗೆ ಕಾಯಕಲ್ಪ ನೀಡುವ ಧರ್ಮಸ್ಥಳ ಯೋಜನೆಯ ದಿಟ್ಟ ಹೆಜ್ಜೆ ಇದಾಗಿದೆ ಎಂದರು.

ಯೋಜನೆಯ ಅಧಿಕಾರಿಗಳು ಹಾಗೂ ಊರಿನ ಗ್ರಾಮಸ್ಥರು ಕೆರೆಗೆ ಬಾಗಿನ ಅರ್ಪಿಸಿದರು. ಕೆರೆ ಸಮಿತಿ ಅಧ್ಯಕ್ಷರಾದ ಗವಿ ಸಿದ್ದಯ್ಯ ಮಾತನಾಡಿ ನೀರು ಅತ್ಯಂತ ಅಮೂಲ್ಯವಾದದ್ದು ಜೀವ ಜಲವನ್ನು ಉಳಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಅದನ್ನು ಉಳಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಧರ್ಮಸ್ಥಳ ಯೋಜನೆಯ ಕಾರ್ಯಕ್ರಮಗಳು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳ ಕಾರ್ಯಾ ಶ್ಲಾಘನೀಯವಾದದ್ದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೆರೆ ಸಮಿತಿಯ ಪದಾಧಿಕಾರಿಗಳು, ವಲಯ ಮೇಲ್ವಿಚಾರಕರಾದ ಗಿರೀಶ್ ಮತ್ತು ಕೃಷಿ ಮೇಲ್ವಿಚಾರಕರಾದ ಲೋಹಿತ್, ಸೇವಾಪ್ರತಿನಿಧಿಗಳು,ಊರಿನ ಪ್ರಮುಖರಾದ ಪ್ರಕಾಶ್ ,ಶಿವಣ್ಣ, ಬೈಯಣ್ಣ, ಮುನಿರತ್ನ  ಪುಟ್ಟರಾಜು,ಮುನಿರಾಜುಚನ್ನಾರಾಮಯ್ಯ, ಸೇರಿದಂತೆ ಗ್ರಾಮಸ್ಥರು ಹಾಗೂ ಪ್ರಗತಿ ಬಂದು ಸ್ವ ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.

- Advertisement -  - Advertisement -  - Advertisement - 
Share This Article
error: Content is protected !!
";