ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡಬಳ್ಳಾಪುರ ತಾಲ್ಲೂಕು ಇವರ ವತಿಯಿಂದ ತಾಲೂಕು ಮಟ್ಟದ ಒಕ್ಕೂಟದ ಪದಾಧಿಕಾರಿಗಳ ಸಮಾವೇಶ ನಡೆಯಿತು.
ನಗರದ ಕೋರ್ಟ್ ರಸ್ತೆಯಲ್ಲಿರುವ ಎ ಬಿ ಎಂ ಕಲ್ಯಾಣ ಮಂಟಪದಲ್ಲಿ ಆಯೋಜನೆ ಮಾಡಲಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ನಿರ್ದೇಶಕ ಉಮಾರಬ್ಬ ಸಂಘ ರಚನೆ ಮಾಡಿ ಸದಸ್ಯರು ಉದ್ಯೋಗ ಸೃಷ್ಠಿ ಮಾಡಿಕೊಂಡು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಾಲ ಪಡೆದು ಹಣವನ್ನು ಒಳ್ಳೆಯ ಉದ್ಯೋಗಕ್ಕೆ ಬಳಕೆ ಮಾಡಿ ಅದರಲ್ಲಿ ಬಂದ ಲಾಭದ ಹಣದಲ್ಲಿ ಸಂಘಕ್ಕೆ
ಪ್ರತಿವಾರ ಕಂತಿನ ಲೆಕ್ಕಾಚಾರದ ರೀತಿಯಲ್ಲಿ ಕಟ್ಟುವುದರಿಂದ ಉತ್ತಮ ಬೆಳವಣಿಗೆ ಕಾಣಬಹುದು ಎಂದರು ಹಾಗು ಬಡ್ಡಿ ಲೆಕ್ಕಾಚಾರ ಸಂಘದ ಮುಖೇನ ವ್ಯವಹಾರ ಮಾಡಿದಾಗ ಕಡಿಮೆ ದಾಖಲಾತಿ ಕಡಿಮೆ ಬಡ್ಡಿದರದಲ್ಲಿ ಸದಸ್ಯರಿಗೆ ಆಗುವ ಲಾಭಗಳು, ಸಮುದಾಯ ಅಭಿವೃದ್ಧಿ ವತಿಯಿಂದ ಗ್ರಾಮಗಳಿಗೆ ಸಿಗುವ ಅನುದಾನಗಳು, ಉನ್ನತ ಶಿಕ್ಷಣಕ್ಕೆ ಶಿಷ್ಯವೇತನ, ನಿರ್ಗತಿಕರಿಗೆ ಮಾಸಸನ ನೀಡುವ ಬಗ್ಗೆ ಮಾಹಿತಿ ನೀಡಿದರು ಹಾಗು. ಒಕ್ಕೂಟದ ಪದಾಧಿಕಾರಿಗಳ ಜವಾಬ್ದಾರಿ ,ನಾಯಕತ್ವ ಗುಣ, ಸಹಕಾರ ಮನೋಭಾವನೆ ಬಗ್ಗೆ ತರಬೇತಿ ನೀಡಿದರು.
ನಂತರ ರವಿಕಿರಣ್ (ಪ್ರಾದ್ಯಾಪಕರು, ಸುದ್ದಿ ಸಂಪಾದಕರು DD ಚಂದನ) ಇವರು ಮಾತನಾಡಿ ಕ್ಷೇತ್ರದಿಂದ ಬರುವ ಅನುದಾನವನ್ನು ಒಕ್ಕೂಟದ ಮೂಲಕ ಸದಸ್ಯರಿಗೆ ಒದಗಿಸಲು ಒಕ್ಕೂಟದ ಪದಾಧಿಕಾರಿಗಳ ಪಾತ್ರ ಮುಖ್ಯ ಎಂದು ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಮಾಡುತ್ತಿದ್ದು ಹಳ್ಳಿ ಹಳ್ಳಿಗಳಿಗೂ ಸೇವೆ ನೀಡುತ್ತಿದ್ದು ವೀರೇಂದ್ರ ಹೆಗ್ಗಡೆಯವರ ಪಾತ್ರ ಶ್ಲಾಘನೀಯ ಎಂದು ಹಾರೈಸಿದರು.
ಒಕ್ಕೂಟದ ಪದಾಧಿಕಾರಿಗಳ ಜವಾಬ್ದಾರಿ ,ನಾಯಕತ್ವ ಗುಣ, ಸಹಕಾರ ಮನೋಭಾವನೆ ಬಗ್ಗೆ ಜಿಲ್ಲಾ ನಿರ್ದೇಶಕರಾದ ಉಮರಬ್ಬ ತರಬೇತಿ ನೀಡಿದರು. ಸಿ ಎಸ್ ಸಿ ಕೇಂದ್ರದ ಸಿರಿ ಮಳಿಗೆಗಳು ತೆರೆಯಲಾಗಿತ್ತು.
ಕಾರ್ಯಕ್ರಮದಲ್ಲಿ ಕನ್ನಡ ಛಾಯಾಗ್ರಾಹಕ ಸಂಘದ ಅಧ್ಯಕ್ಷರು ಹೆಚ್ ಎಸ್. ನಾಗೇಶ್, ಬ್ಯಾಂಕ್ ಆಫ್ ಬರೋಡ ಸಹಾಯಕ ಪ್ರಬಂಧಕ ಮಧುಸೂದನ್, ತಾಲೂಕು ಯೋಜನಾಧಿಕಾರಿ ಸುಧಾ ಬಾಸ್ಕರ್ ಮೇಲ್ವಿಚಾರಕರು, ಕೃಷಿ ಮೇಲ್ವಿಚಾರಕರು, ತಾಲೂಕಿನ 9 ವಲಯದ ಒಕ್ಕೂಟದ ಪದಾಧಿಕಾರಿಗಳು, ಸೇವಾಪ್ರತಿನಿಧಿಗಳು ,ಸಿ ಎಸ್ ಸಿ ಸೇವಾದಾರರು, ಕಛೇರಿ ಸಿಬ್ಬಂದಿಗಳು ಹಾಗು ಮಹಿಳಾ ಸಂಘದ ಪದಾಧಿಕಾರಿಗಳು ಹಾಜರಿದ್ದರು.