ರೈತರ ಕೂಗು ಸರ್ಕಾರಕ್ಕೆ ಕೇಳಿಲಿಲ್ಲವೇ 100ನೇ ದಿನ ಪೂರೈಸಿದ ಧರಣಿ ಸತ್ಯಾಗ್ರಹ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಮನುಷ್ಯನಿಗೆ ನೀರು ಅತ್ಯಮೂಲ್ಯವಾದದ್ದು ರೈತರಿಗೆ ನೀರಿಲ್ಲವೆಂದರೆ ಬದುಕು ಬುರುಡಾಗಿ ಹೋಗುತ್ತದೆ ರೈತ ಬದುಕಿದರೆ ದೇಶಕ್ಕೆ ಅನ್ನದಾತರಾಗುತ್ತಾರೆ ಇಂಥ ರೈತರಿಗೆ ಸರ್ಕಾರ ರೈತರು ಮಾಡುವ ಹೋರಾಟಕ್ಕೆ ರೈತರಿಗೆ ಬೆಲೆ ಇಲ್ಲದಂತೆ ಮಾಡಿದೆ.

ವಿವಿ ಸಾಗರದಿಂದ ಗಾಯತ್ರಿ ಜಲಾಶಯಕ್ಕೆ ಹಾಗೂ ಜೆಜೆಹಳ್ಳಿ ಹೋಬಳಿಯ ಎಲ್ಲಾ ಕೆರೆಗಳಿಗೂ ನೀರು  ಹರಿಸುಬೇಕೆಂಬುವುದು ಯಾವ ರಾಜಕಾರಣಿಗೂ ಮನಸ್ಸಿಲ್ಲವೇ ಎಂಬುದೇ ರೈತರ ಮಾತಾಗಿದೆ ತಾಲೂಕಿನ ಜವನಗೊಂಡನಹಳ್ಳಿಯಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ 100  ದಿನ ಪೂರೈಸಿದ್ದು  ವಿಶೇಷ ಚಳುವಳಿಯಾಗಿ ಬಾರಿ ಕೋಲು ಚಳುವಳಿಯಲ್ಲಿ ನಡೆಸಿದರು.

 ಜೆಜೆ ಹಳ್ಳಿ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿ ಬಾರಿಕೋಲು ಚಾಟಿ ಹೊಡಿಯುತ್ತಾ ಸರ್ಕಾರಗಳಿಗೆ ಧಿಕ್ಕಾರ ಕೂಗುತ್ತಾ ಸಾಗಿದ ರೈತರು ಚಳುವಳಿಯನ್ನು ಉದ್ದೇಶಿಸಿ ಮಾತನಾಡಿದ  ರೈತ ಸಂಘದ ಅಧ್ಯಕ್ಷ ಕೆ ಟಿ ತಿಪ್ಪೇಸ್ವಾಮಿ 100  ದಿನದಿಂದ ವಿವಿಧ ರೀತಿಯ ಚಳುವಳಿ ನಡೆಸುತ್ತಾ ಸರ್ಕಾರದ ಗಮನ ಸೆಳೆಯುತ್ತಾ ಇದ್ದರು ಸರ್ಕಾರ ಇದುವರೆಗೂ ಸ್ಪಂದಿಸದೆ ಇರುವುದು ಖಂಡ ನೀಯ ಎಂದರು.

 ನೀರು ಹರಿಸುವ ಪ್ರಯತ್ನ ಮಾಡಲಿಲ್ಲ ರೈತರು ಹೊಲದಲ್ಲಿ ಕೃಷಿ ಚಟುವಟಿಕೆ ಕೆಲಸ ಕಾರ್ಯಗಳನ್ನು ಬಿಟ್ಟು  ಬೀದಿಯಲ್ಲಿ ಕುಳಿತಿದ್ದರು ಸರ್ಕಾರ  ಗಮನ ಹರಿಸುತ್ತಿಲ್ಲ.

 ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಗಮನ ಹರಿಸುವುದರ ಮೂಲಕ ರೈತರಿಗೆ  ಸೂಕ್ತ ತೀರ್ಮಾನ ನೀಡಲಿ ನೀರು ಕೊಟ್ಟರೆ ನಾವು ಅನ್ನ ನೀಡುವುದು ಎಂಬುವುದು ಮರೆಯಬಾರದು ಎಂದು ಹೇಳಿದರು.

 ಮಳೆಗಾಲ ಮುಗಿಯಿತಾ ಬಂದರು ಮಳೆ ಬಾರದೆ ಕುಡಿಯುವ ನೀರಿಗೂ ಜಾನುವಾರುಗಳಿಗೂ ಮತ್ತು ತೋಟಗಳಿಗೆ ನೀರು ಹರಿಸಲು ತುಂಬಾ ಕಷ್ಟವಾಗುತ್ತದೆ.

ಹಾಗಾಗಿ ಸರ್ಕಾರ ಕೂಡಲೇ 16 ಕೆರೆಗಳಿಗೆ ನೀರು ತುಂಬಿಸಬೇಕು 25.08.2024 ರಂದು ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಮತ್ತು ನೀರಾವರಿ ಅಧಿಕಾರಿಗಳು ಮತ್ತು ರೈತ ಮುಖಂಡರದೊಂದಿಗೆ ಸಭೆ ನಡೆಸಿ ಲೈನಿಂಗ್ ಎಸ್ಟಿಮೇಟ್ ಮಾಡಲು ಯೋಚಿಸಿದರು ಇದುವರೆಗೂ ನಮಗೆ ಯಾವುದೇ ಪ್ರಗತಿ ಕಂಡಿರುವುದಿಲ್ಲ ಆದ್ದರಿಂದ ಸಚಿವರು ಈ ಬರಗಾಲವನ್ನು ಸೂಕ್ಷ್ಮವಾಗಿ ಗಮನಿಸಿ ಲೈನಿಂಗ್ ಎಸ್ಟಿಮೇಟ್ ಮಾಡಿಸಿ.

ಡಿ. ಪಿ ಆರ್ ಸಿದ್ದಪಡಿಸಿ ಸರ್ಕಾರದಿಂದ ಮಂಜೂರಾತಿ ಕೊಡಿಸಿ ಶೀಘ್ರವೇ ಕಾಮಗಾರಿ ಪ್ರಾರಂಭಿಸಲು ಮುಂದಾಗಬೇಕು ಇದು ವಿಳಂಬವಾದರೆ ಹಿರಿಯೂರು ಬಂದ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ರೈತರ ಕರೆ ಸರ್ಕಾರದಲ್ಲಿ  ಪ್ರಸ್ತುತ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ 5,300 ಕೋಟಿ ಹಣವನ್ನು ಬಿಡುಗಡೆ ಮಾಡಿಲ್ಲ ರಾಜ್ಯ ಸರ್ಕಾರ ಈ ವರ್ಷದ ಬಜೆಟ್ಟಿನಲ್ಲಿ ಹಣ ಇಟ್ಟಿಲ್ಲ.

ಮೊದಲು ಮೊದಲನೆಯ  ಹಂತದ ಕಾಮಗಾರಿ ಪೂರ್ಣಗೊಳ್ಳಲಿ ಅನಂತರ ಎರಡನೇ ಹಂತದ ಕಾಮಗಾರಿ  ಮುಗಿಸಿ ಕೆರೆಗಳಿಗೆ ನೀರು ತುಂಬಿಸಬೇಕು ಜಿಲ್ಲೆಯಲ್ಲಿ ಬಹುತೇಕ ಭಾಗ ಅಂತರ್ಜಲ ಕುಸಿತದಿಂದ ಕುಡಿಯುವ ನೀರಿಗೂ ಮತ್ತು ರೈತರ ಜಮೀನಿಗೆ ನೀರು ಆಯಸಲು ತುಂಬಾ ಕಷ್ಟವಾಗುತ್ತಿದೆ ಮೊದಲನೇ ಅಂತ ಮತ್ತು 2ನೇ ಹಂತದ ಕಾಮಗಾರಿ ಮುಗಿದ ನಂತರ ಡ್ರಿಪ್ ಇರಿಗೇಶನ್ ಕಾಮಗಾರಿ ಪ್ರಾರಂಭಿಸಿ ನೀವು ಈ ಎರಡು ಹಂತದ ಕಾಮಗಾರಿ ಮುಗಿಸುವವರೆಗೆ ಡ್ರಿಪ್ ಇರಿಗೇಶನ್ ಸಂಪೂರ್ಣ ಹಾಳಾಗಿ ಹೋಗುತ್ತದೆ ಮತ್ತು ನೀವು ಮಳೆಗಾಲದಲ್ಲಿ ಡ್ರಿಪ್ ಅಲ್ಲಿ ನೀರು ಹರಿಸಿದರೆ ಯಾರಿಗೂ ಪ್ರಯೋಜನವಿಲ್ಲ ಅಂತರ್ಜಲ ಅಭಿವೃದ್ಧಿಯು ಆಗುವುದಿಲ್ಲ ಆದ್ದರಿಂದ ಎಲ್ಲಾ ತಾಲೂಕುಗಳಲ್ಲಿರುವ ಎಲ್ಲಾ ಮಣ್ಣಿನ ಕೆರೆಗಳಿಗೂ ನೀರು ತುಂಬಿಸಿ ಮತ್ತು ವಾಣಿವಿಲಾಸ ಜಲಾಶಯದಲ್ಲಿ 130 ಅಡಿ ನೀರು ಸಂಗ್ರಹವಾಗುವ ಜಲಾಶಯವಿದೆ ಅಲ್ಲಿ ಸಂಗ್ರಹಿಸಿ ಬೇಸಿಗೆ ನಾಲ್ಕೈದು ತಿಂಗಳಲ್ಲಿ ನೀರು ಹರಿಸಿದರೆ ರೈತರಿಗೆ ಉಪಯೋಗವಾಗುತ್ತದೆ ಆದ್ದರಿಂದ ಈಗ ನಡೆಸುತ್ತಿರುವ ಅವೈಜ್ಞಾನಿಕ ಕಾಮಗಾರಿಯನ್ನು ನಿಲ್ಲಿಸಿ ಯೋಜನೆಯಲ್ಲಿ ತಿದ್ದುಪಡಿ ಮಾಡಿಕೊಂಡು  ಕಾಮಗಾರಿ ನಡೆಸಿ.

 ಡ್ರಿಪ್ ಇರಿಗೇಶನ್ ಕಾಮಗಾರಿ ನಡೆಸುವ ಸಂದರ್ಭದಲ್ಲಿ ರೈತರಿಗೆ ಯಾವುದೇ ನೋಟಿಸ್ ನೀಡದೆ ರೈತರಿಗೆ ತಿಳುವಳಿಕೆ ಪತ್ರ ಸಹ ನೀಡಲಿ ಏಕಾಏಕಿ ರೈತನ ಭೂಮಿಯಲ್ಲಿ 10 ಅಡಿ ಹಾಳ ಹತ್ತು ಅಡಿ ಅಗಲ ಗುಂಡಿ ತೋಡಿದರೆ ರೈತನ ಭೂಮಿ ಬರಡಾಗುತ್ತದೆ ಕಂದಾಯ ಇಲಾಖೆಯ ನಿಯಮ ಪ್ರಕಾರ ಅನುಮತಿ ಇಲ್ಲದೆ  ಜಮೀನಿಗೆ ಪ್ರವೇಶವಿಲ್ಲ ಎಂಬ ನಿಯಮವಿದ್ದರೂ ಇದನ್ನು ಉಲ್ಲಂಘನೆ ಮಾಡಲಾಗುತ್ತದೆ ಆದ್ದರಿಂದ ನಮ್ಮ ಸಭೆಯ ನಡವಳಿಯನ್ನು ಸರ್ಕಾರಕ್ಕೆ ಸಲ್ಲಿಸಿ ಸರ್ಕಾರದಿಂದ ಮಾರ್ಪಾಡು ಆಗುವವರೆಗೂ ಕಾಮಗಾರಿಯ ನಿಲ್ಲಿಸಬೇಕು ಎಂದು ತಿಳಿಸಿದರು.

ಚಳುವಳಿಯಲ್ಲಿ ಭಾಗವಹಿಸಿದ ರೈತ ಮುಖಂಡರು ಆಲೂರು ಸಿದ್ದರಾಮಣ್ಣ, ಈರಣ್ಣ, ಅರಳಿಕೆರೆ ತಿಪ್ಪೇಸ್ವಾಮಿ, ಎಂ ಆರ್ ಈರಣ್ಣ, ಅಶ್ವತಪ್ಪ, ವಜೀರ್ ಸಾಬ್, ನಟರಾಜ್, ವೆಂಕಟೇಶ್, ಬಳಗಟ್ಟೆ ತಿಮ್ಮಯ್ಯ, ಎ ವಿ ಕೊಟ್ಟಿಗೆ ಕೃಷ್ಣಮೂರ್ತಿ, ರಾಜಪ್ಪ, ಸೋಮೇರಳ್ಳಿ ಉಮಣ್ಣ, ಸೋಮಣ್ಣ, ರಾಜಕುಮಾರ್, ಅಮೀರ್ ಸಾಬ್, ತಿಪ್ಪೇಸ್ವಾಮಿ, ರಾಮಕೃಷ್ಣ, ಬಾಲಕೃಷ್ಣ, ಚಂದ್ರಪ್ಪ, ಕುಮಾರ್, ಕರಿಯಪ್ಪ, ಕಲೀಮ್ ಸಾಬ್ ಮುಂತಾದವರು ಭಾಗವಹಿಸಿದ್ದರು.

 

- Advertisement -  - Advertisement - 
Share This Article
error: Content is protected !!
";