ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ವಿರುದ್ಧ ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜು ಹಾಗೂ ಸಾ.ರಾ. ಮಹೇಶ್ ರವರ ನೇತೃತ್ವದಲ್ಲಿ ಮಂಡ್ಯ ಹಾಗೂ ಮೈಸೂರು ಜಿಲ್ಲೆಯ ಭಕ್ತಾದಿಗಳ ವತಿಯಿಂದ ಧರ್ಮಸ್ಥಳ ಯಾತ್ರೆ ಮಾಡಲಾಯಿತು ಎಂದು ಜೆಡಿಎಸ್ ತಿಳಿಸಿದೆ.
“ಧರ್ಮರಕ್ಷಣೆಗಾಗಿ ಧರ್ಮಸ್ಥಳ ಯಾತ್ರೆ” ಹೊರಟು ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀಮಂಜುನಾಥ ಸ್ವಾಮಿಯ ದರ್ಶನ ಪಡೆಯಲಾಯಿತು ಜೆಡಿಎಸ್ ತಿಳಿಸಿದೆ.

