ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಶ್ರೀ ಪುಷ್ಪಾಂಡಜ ಮಹರ್ಷಿ ಆಶ್ರಮ ಸಹಕಾರ ದೂಂದಿಗೆ ಗುರು ಪೀಠದಲ್ಲಿ ಸಾಮಾಜಿಕ ಅರಣಿಕರಣ ಮತ್ತು ಹಣ್ಣಿನ ಗಿಡ ನಾಟಿ ಕಾರ್ಯಕ್ರಮ ಮಾಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ಪುಷ್ಪಾಂಡಜ ಮಹರ್ಷಿ ಆಶ್ರಮ ಗುರುಪೀಠದ ಪೀಠಾಧಿಪತಿ ಶ್ರೀ ದಿವ್ಯ ಜ್ಞಾನಾನಂದ ಸ್ವಾಮಿಜಿ ಗಿಡ ನಾಟಿ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿ ಸ್ವಾಮಿಜಿ ಗಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಹತ್ತು ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಅದರಲ್ಲಿ ವಿಶೇಷವಾಗಿ ಕೆರೆ ಹೂಳೆತ್ತುವ ಕಾರ್ಯಕ್ರಮ ಹಣ್ಣಿನ ಗಿಡ ನಾಟಿ ಕಾರ್ಯಕ್ರಮ ಉತ್ತಮ ಆಗಿದ್ದು ಮದ್ಯವರ್ಜನ ಶಿಬಿರಗಳು ನಡೆಯುತ್ತಿದ್ದು ಅತಿ ಉತ್ತಮ ಕಾರ್ಯಕ್ರಮ ಎಂದು ಅಭಿಪ್ರಾಯಪಟ್ಟರು.
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕರಾದ ಉಮ ರಬ್ಬ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಾಜ್ಯಾದ್ಯಂತ ಪ್ರತಿ ವರ್ಷ ಹಣ್ಣಿನ ಗಿಡ ನಾಟಿ ಕಾರ್ಯಕ್ರಮ ಯಶಸ್ವಿಯಾಗಿ ಆಗುತ್ತಿದ್ದು ಗಿಡ ನಾಟಿ ಮಾಡಿದ ನಂತರ ಗಿಡಗಳ ರಕ್ಷಣೆ ಅತೀ ಮುಖ್ಯವಾಗಿದ್ದು ಎಂದರು.
ಪ್ರತಿಯೊಬ್ಬರೂ ಮನೆ ಹತ್ತಿರ/ಜಮೀನುಗಳಲ್ಲಿ ಗಿಡ ನಾಟಿ ಮಾಡುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕಿನ ಯೋಜನಾಧಿಕಾರಿ ಸುಧಾ ಭಾಸ್ಕರ್
ಜನಜಾಗೃತಿ ಸದಸ್ಯ ರಮೇಶ್, ಪ್ರಗತಿಪರ ರೈತರಾದ ಸದಾನಂದ, ಕೃಷ್ಣೆ ಗೌಡ, ಗ್ರಾಮ ಪಂಚಾಯತ್ ಸದಸ್ಯ ಆನಂದ್, ಡೈರಿ ಅಧ್ಯಕ್ಷ ರಾಮಣ್ಣ, ಒಕ್ಕೂಟದ ಅಧ್ಯಕ್ಷರು, ತಾಲೂಕಿನ ಕೃಷಿ ಮೇಲ್ವಿಚಾರಕ ಲೋಹಿತ್ ಗೌಡ ವಲಯ ಮೇಲ್ವಿಚಾರಕ ಗಿರೀಶ್, ಟಿಎನ್ಒ ರೇಣುಕಾ ಪ್ರಸಾದ್, ಶೌರ್ಯ ವಿಪತ್ತು ತಂಡದ ಸದಸ್ಯರು, ಸೇವಾ ಪ್ರತಿನಿಧಿಗಳು , ವಿಎಲ್ಇ ,ಸಂಘದ ಸದಸ್ಯರು, ಮಠದ ಅಧಿಕಾರಿಗಳು ಉಪಸ್ಥಿತರಿದ್ದರು.