ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲ್ಲೂಕಿನ ಮಧುರೆ ಹೋಬಳಿ ಮಧಗೊಂಡನಹಳ್ಳಿ ಗ್ರಾಮದ ರಮೇಶ್ ಎಂಬುವರು ಮರದಿಂದ ಬಿದ್ದು ಗಂಬೀರ ಗಾಯಗೊಂಡಿದ್ದು ಅವರ ಚಿಕಿತ್ಸೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಮುಂಜೂರಾದ ಕ್ರಿಟಿಕಲ್ ಫಂಡ್ 30,000 ರೂಗಳನ್ನು ದರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನಾಧಿಕಾರಿ ದಿನೇಶ್ ರವರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ತಾಲೂಕು ಇವರ ವತಿಯಿಂದ ವಲಯದ ಮೇಲ್ವಿಚಾರಕರಾದ ಗಿರಿಜಾ, ಸೇವಾ ಪ್ರತಿನಿಧಿ ಜಯಮ್ಮ, ಒಕ್ಕೂಟದ ಅಧ್ಯಕ್ಷರಾದ ಮಂಜುಳ, ಆಶಾ ಕಾರ್ಯಕರ್ತೆ, ಸಂಘದ ಸದಸ್ಯರು ಉಪಸ್ಥಿತರಿದ್ದರು.