ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ದೊಡ್ಡಬಳ್ಳಾಪುರ ತಾಲೂಕು ತುಬಗೆರೆ ವಲಯದ ಗಂಟಿಗನಹಳ್ಳಿ ಗ್ರಾಮದ ನಿವಾಸಿಯಾದ ಮುನಿಯಮ್ಮ ಅವರಿಗೆ ವಾತ್ಸಲ್ಯ ಮನೆ ರಚನೆ ಮಾಡಿ ಜಿಲ್ಲಾ ನಿರ್ದೇಶಕರಾದ ಉಮರಬ್ಬ ಹಸ್ತಾಂತರ ಮಾಡಿದರು .
1,15,000 ರೂ ಮೌಲ್ಯದ ಮನೆಯನ್ನು ಧರ್ಮಸ್ಥಳ ವತಿಯಿಂದ ನಿರ್ಮಿಸಲಾಗಿದೆ. ಗುಡಿಸಲಲ್ಲಿ ವಾಸ ಮಾಡುತ್ತಿದ್ದು, ಇವರಿಗೆ ಧರ್ಮಸ್ಥಳದ ವತಿಯಿಂದ ಪ್ರತಿತಿಂಗಳು 1000 ಮಾಸಾಸನ ನೀಡುತ್ತಿದ್ದು ಔಷದಿ ಖರ್ಚುಗೆ ಉಪಯೋಗ ಆಗುವಂತೆ ಪ್ರತಿತಿಂಗಳು ಮಾಸಾಶನ ನೀಡಲಾಗುತ್ತಿದೆ ಅದೇ ರೀತಿ ಅವರಿಗೆ ಮನೆ ರಚನೆ ಮಾಡಿ ಕೊಡಲಾಗಿದೆ.
ಕಾರ್ಯಕ್ರಮದಲ್ಲಿ ತಾಲೂಕಿನ ಯೋಜನಾಧಿಕಾರಿ ಸುಧಾ ಬಾಸ್ಕರ್, ಪ್ರಾದೇಶಿಕ ಕಚೇರಿಯ ಜ್ಞಾನ ವಿಕಾಸ ವಿಭಾಗದ ಯೋಜನಾಧಿಕಾರಿ ಸಂಧ್ಯಾ, ತಾಲೂಕಿನ ಸಮನ್ವಯ ಅಧಿಕಾರಿ ಛಾಯಾ ಕುಮಾರಿ, ಸೇವಾಪ್ರತಿನಿಧಿ, VLE ಗಳು ಹಾಗೂ ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.