ವಿಜ್ಞಾನ ಕಾಲೇಜು ಹಾಗೂ ತೋಟಗಾರಿಕಾ ಇಲಾಖೆಯ ಗಿಡ-ಮರ ಕಡಿಯದಂತೆ ಧರಣಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಹಾಗೂ ತೋಟಗಾರಿಕಾ ಇಲಾಖೆ ಕಚೇರಿ ಆವರಣದಲ್ಲಿರುವ ಗಿಡ-ಮರಗಳನ್ನು ಕಡಿದು ಪರಿಸರ ನಾಶ ಮಾಡುವುದನ್ನು ವಿರೋಧಿಸಿ ಪರಿಸರ ಪ್ರೇಮಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳವರು ಒನಕೆ ಓಬವ್ವ ವೃತ್ತದಲ್ಲಿ ಸೋಮವಾರ ಧರಣಿ ನಡೆಸಿ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.

ಸರ್ಕಾರಿ ವಿಜ್ಞಾನ ಕಾಲೇಜು ಎದುರಿನ ಆವರಣದಲ್ಲಿ ಮಹಿಳಾ ಕಾಲೇಜು ಕಟ್ಟುವುದಕ್ಕಾಗಿ ಕಡಿಯಲಾಗಿರುವ ಮರದ ಬೇರೊಂದನ್ನು ಧರಣಿಯ ಸ್ಥಳದಲ್ಲಿರಿಸಿ ಹುತಾತ್ಮ ಮರವೆಂದು ಪೂಜಿಸಿ ಪುಷ್ಪ ನಮನ ಗೈಯುವ ಮೂಲಕ ಗಿಡ-ಮರಗಳನ್ನು ಕಡಿಯದಂತೆ ಅಧಿಕಾರಿಗಳನ್ನು ಒತ್ತಾಯಿಸಿ ಧರಣಿನಿರತರು ಮನವಿ ಅರ್ಪಿಸಿದರು.

- Advertisement - 

ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಕೆ.ಎಸ್ ನವೀನ್ ಹೋರಾಟಗಾರರಿಗೆ ಬೆಂಬಲ ವ್ಯಕ್ತಪಡಿಸಿ ನಿಮ್ಮ ಹೋರಾಟಕ್ಕೆ ಸದಾ ಬೆಂಬಲ ನೀಡುವುದಾಗಿ ಘೋಷಿಸಿದರಲ್ಲದೆ ಪರ್ಯಾಯ ಜಾಗ ಲಭ್ಯ ಇದ್ದು ಅಲ್ಲಿ ಜಿಲ್ಲಾಡಳಿತ ಮತ್ತು ಮಹಿಳಾ ಕಾಲೇಜ್ ನಿರ್ಮಿಸಲಿ ಎಂದು ತಾಕೀತು ಮಾಡಿದರು.

ಪರಿಸರ ಪ್ರೇಮಿ ಹೆಚ್.ಎಸ್.ಕೆ.ಸ್ವಾಮಿ, ನಾಗರಾಜ್‌ಬೇದ್ರೆ, ಎಸ್.ಲಕ್ಷ್ಮಿಕಾಂತ್, ಡಾ.ನಟರಾಜ್, ನ್ಯಾಯವಾದಿಗಳಾದ ದಿಲ್‌ಶಾದ್, ಸೈಯದ್ ಸ್ವಾಲೇಹ, ರೈತ ಮುಖಂಡ ಕಸವನಹಳ್ಳಿ ರಮೇಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ, ವೀಣಾ ಗೌರಣ್ಣ, ನಿವೃತ್ತ ಪಿ.ಎಸ್.ಐ. ನಾಗರಾಜ್, ಇನ್ನರ್‌ವೀಲ್ ಚಿತ್ರದುರ್ಗ ಫೋರ್ಟ್‌ನ ಜಾನ ಚಂದ್ರಕಲಾ, ಪದ್ಮಾವತಿ, ಎಂ.ಬಿ.ಜಯದೇವಮೂರ್ತಿ ಇನ್ನು ಅನೇಕರು ಧರಣಿಯಲ್ಲಿ ಭಾಗವಹಿಸಿದ್ದರು.

- Advertisement - 

Share This Article
error: Content is protected !!
";