ಬ್ರಾಂಡ್ ಸಲುವಾಗಿ ಸೀರೆ ಸಂತೆ ಆಯೋಜನೆ-ಧೀರಜ್ ಮುನಿರಾಜ್

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರದ ನೇಕಾರರ ಸೀರೆಗಳಿಗೆ ಉತ್ತೇಜನ ನೀಡುವ ಸಲುವಾಗಿ ಜೊತೆಗೆ ನೇಕಾರರಿಂದ ಗ್ರಾಹಕರಿಗೆ ನೇರ ಮಾರಾಟ ದೃಷ್ಟಿಯಿಂದ ಸೀರೆ ಸಂತೆ ಶೀರ್ಷಿಕೆಯಡಿ ನಗರದಲ್ಲಿ 45 ಸೀರೆಗಳ ಮಳಿಗೆಗಳ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ಬಿಗ್ ಬಾಸ್ ಕನ್ನಡ ವಿಜೇತ ಗಿಲ್ಲಿ ನಟ ಆಗಮಿಸಲಿದ್ದಾರೆ ಎಂದು ಶಾಸಕ ಧೀರಜ್ ಮುನಿರಾಜ್ ಅವರು ತಿಳಿಸಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಶಾಸಕರು ಮಾತನಾಡಿ ನೇಕಾರಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ದಿ.ಕೊಂಗಾಡಿಯಪ್ಪನವರ ಸ್ಮರಣಾರ್ಥವಾಗಿ ಫೆ.20,21,22 ಮೂರು ದಿನಗಳ ಕಾಲ ವಿಶೇಷ ಕಾರ್ಯಕ್ರಮಗಳನ್ನು ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಫೆ.20 ರಂದು ಸಂಜೆ ಕಾರ್ಯಕ್ರಮ ಉದ್ಘಾಟನೆಯಾಗಲಿದ್ದು  ತಾಲೂಕಿನ ನೇಕಾರಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡಿರುವವರನ್ನು ಅವರ ಸಾಧನೆಯನ್ನು ಗುರುತಿಸಿ ಅವರನ್ನು ಗೌರವಿಸುವ ಕಾರ್ಯಕ್ರಮ ಸೇರಿದಂತೆ  ಗ್ರಾಹಕರನ್ನು ಸೆಳೆಯುವ ದೃಷ್ಟಿಯಿಂದ ಹಲವಾರು ಮನರಂಜನೆ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಗಿಲ್ಲಿ ನಟ ಅತಿಥಿಯಾಗಿ ಆಗಮಿಸಲಿದ್ದಾರೆ. ನೇಕಾರಿಕೆ ಹಿನ್ನೆಲೆಯುಳ್ಳ ನಟ ನಟಿಯರನ್ನು ಕರೆಸುವ ತಯಾರಿ ನಡೆದಿದೆ. ಸಂಜೆ 7.30ಕ್ಕೆ ಸರಿಯಾಗಿ ಸವಾರಿ ತಂಡದಿಂದ ಮನರಂಜನೆ ಕಾರ್ಯಕ್ರಮ.

- Advertisement - 

ಫೆಬ್ರವರಿ-22ರ ಶನಿವಾರ ಸಂಜೆ 5.30ಕ್ಕೆ ಪ್ರಾಣೇಶ್ ರವರಿಂದ ಹಾಸ್ಯೋತ್ಸವ ಮತ್ತು ಇದೇ ದಿನ 8ಕ್ಕೆ ಕಾಮಿಡಿ ಕಿಲಾಡಿಗಳು ತಂಡದಿಂದ ಹಾಸ್ಯ ಕಾರ್ಯಕ್ರಮ,

 22/02/2026 ಭಾನುವಾರ ಸಂಜೆ 5.30ಕ್ಕೆ ಜೀ ಕನ್ನಡ ಡ್ಯಾನ್ಸ್‌ಕರ್ನಾಟಕ ಡ್ಯಾನ್ಸ್ ತಂಡದಿಂದ ಮನರಂಜನೆ ಕಾರ್ಯಕ್ರಮ. ಇದೇ ದಿನ 8 ಘಂಟೆಗೆ ಹೆಸರಾಂತ ಗಾಯಕರದ ರಘು ದೀಕ್ಷಿತ್ ರವರಿಂದ ಲೈವ್ ಮ್ಯೂಸಿಕ್ ಕಾರ್ಯಕ್ರಮ ಇರುತ್ತದೆ. ಇದರ ಜೊತೆಗೆ ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ಸೀರೆ ಮೇಳ ನಡೆಯುತ್ತದೆ . ಸೀರೆ ಮಳಿಗೆಗಳು, ಇತರೆ ಮಳಿಗೆಗಳು, ಈವೆಂಟ್ ಸ್ಟೇಜ್, ಫುಡ್ ಕೋರ್ಟ್, ಮಕ್ಕಳು ಆಟವಾಡಲು ಎಲ್ಲಾ ರೀತಿಯ ಏರ್ಪಾಡು ಮಾಡಲಾಗಿರುತ್ತದೆ. ನೇಕಾರ ರಿಂದ ಗ್ರಾಹಕರಿಗೆ ಸೀರೆಗಳನ್ನು ನೇರವಾಗಿ ಮಾರಾಟ ಮಾಡಲು  54 ಮಳಿಗೆಗಳನ್ನು ತೆರೆಯಲಾಗುತ್ತದೆ ಎಂದು ಹೇಳಿದರು.

- Advertisement - 

      ಬಿಜೆಪಿ ಹಿರಿಯ ಮುಖಂಡ ಕೆ. ಎಂ. ಹನುಮಂತರಾಯಪ್ಪ ನವರು ಮಾತನಾಡಿ ನೇಕಾರರ ಸಮಸ್ಯೆಗಳಿಗಾಗಿ ಹಲವಾರು ಬಾರಿ ನಿಯೋಗಗಳನ್ನು ದೆಹಲಿ ಮಟ್ಟದ ವರೆಗೆ ಕೊಂಡೊಯ್ದು ಪರಿಹಾರಕ್ಕಾಗಿ ಪ್ರಯತ್ನಿಸಲಾಗಿದೆ. ದೊಡ್ಡಬಳ್ಳಾಪುರ ದಲ್ಲಿ ನೇಯ್ದ ಸೀರೆಗಳಿಗೆ ಮಾರಾಟ ದೃಷ್ಟಿಯಿಂದ ದೊಡ್ಡಬಳ್ಳಾಪುರ ಬ್ರಾಂಡ್ ಮಾಡಲು ಸಾಕಷ್ಟು ಹಿರಿಯ ನೇಕಾರರು ಹಾಗೂ ಜನಪ್ರತಿನಿದಿಗಳು ಈವರೆಗೂ ಪ್ರಯತ್ನಿಸಿದ್ದಾರೆ. ಇದರ ಮುಂದುವರೆದ ಬಾಗವಾಗಿ ಸೀರೆ ಸಂತೆ ಎನ್ನುವ ಶೀರ್ಷಿಕೆಯಡಿ ಎಲ್ಲಾ ನೇಕಾರರ ಸಹಕಾರದಿಂದ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಹಿರಿಯ ಮುಖಂಡರಾದ ಬಿ. ಸಿ. ನಾರಾಯಣಸ್ವಾಮಿ, ತಳಗವಾರ ಲಕ್ಷ್ಮಿ ನಾರಾಯಣ್, ಬಿಜೆಪಿ ನಗರಾಧ್ಯಕ್ಷ ಕೆ.ಬಿ.ಮುದ್ದಪ್ಪ, ಮಂಡಲಾಧ್ಯಕ್ಷ ನಾಗೇಶ್, ಪುಷ್ಪಾ ಶಿವಶಂಕರ್, ಸೀರೆ ಸಂತೆ ಆಯೋಜಕರಾದ ಪಿ. ಸಿ. ವೆಂಕಟೇಶ್, ಎಂ. ಜಿ. ಶ್ರೀನಿವಾಸ್, ದೇವಲೋಕಮ್ ಜಗದೀಶ್, ಎಸ್. ಪ್ರಕಾಶ್,ಭಾಷೆಟ್ಟಿ ಹಳ್ಳಿ ಪಟ್ಟಣ ಪಂಚಾಯ್ತಿ ಸದಸ್ಯ ನಾರಾಯಣಸ್ವಾಮಿ, ನಗರಸಭಾ ಸದಸ್ಯ ಬಂತಿ ವೆಂಕಟೇಶ್ ಸೇರಿದಂತೆ ಹಲವರು ನೇಕಾರ ಮುಖಂಡರು ಉಪಸ್ಥಿತರಿದ್ದರು.

 

 

Share This Article
error: Content is protected !!
";