ಸಿಎಂ ಕುರ್ಚಿ ಉಳಿಸಿಕೊಳ್ಳಲು ಆ ವರದಿ ಅಳಿಸಿ ಬಿಟ್ಟಿರಾ ಡಿಲೀಟ್ ರಾಮಯ್ಯ @ ವೈಟ್ನರ್ ರಾಮಯ್ಯ?

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿಎಂ ಕುರ್ಚಿ ಉಳಿಸಿಕೊಳ್ಳಲು ಆ ವರದಿಯನ್ನು ಅಳಿಸಿ ಬಿಟ್ಟಿರಾ
ಡಿಲೀಟ್ ರಾಮಯ್ಯ
@ ವೈಟ್ನರ್ ರಾಮಯ್ಯ? ಎಂದು ಜೆಡಿಎಸ್ ಆರೋಪಿಸಿದೆ.

ತನ್ನದೇ ಸರ್ಕಾರದ ವರದಿಯಿಂದ ತೀವ್ರ ಮುಖಭಂಗಕ್ಕೆ ಒಳಗಾಗಿರುವ  ಸಿದ್ದರಾಮಯ್ಯ, ಕರ್ನಾಟಕ ಸರ್ಕಾರದ ಅಧಿಕೃತ ವೆಬ್‌ಸೈಟ್‌ನಿಂದ ಆ ಸಮೀಕ್ಷಾ ವರದಿಯನ್ನೇ ಡಿಲೀಟ್ ಮಾಡಿಸಿದ್ದಾರೆ ಎಂದು ಜೆಡಿಎಸ್ ಆಕ್ಷೇಪ ವ್ಯಕ್ತಪಡಿಸಿದೆ. ಭಾರತದಲ್ಲಿ ಚುನಾವಣೆಗಳು ಮುಕ್ತ ಮತ್ತು ನ್ಯಾಯಯುತವೆಂದು 84.55% ನಾಗರಿಕರು ನಂಬಿದ್ದಾರೆ ಎಂದು ಸಮೀಕ್ಷೆಯು ಬಹಿರಂಗಪಡಿಸಿತ್ತು. ಶೇ. 83.61% ಜನರು ಇವಿಎಂಗಳ ಮೇಲೆ ವಿಶ್ವಾಸವಿದೆ ಎಂದು  ಚುನಾವಣೆಗಳ ಪಾರದರ್ಶಕತೆಯನ್ನು ಒಪ್ಪಿಕೊಂಡಿದ್ದಾರೆ.

- Advertisement - 

ಕರ್ನಾಟಕ ಸರ್ಕಾರದ ಸಮೀಕ್ಷಾ ವರದಿಯಿಂದ ರಾಹುಲ್ ಗಾಂಧಿ ಅವರ  “ವೋಟ್ ಚೋರಿ” ಸುಳ್ಳು ನಿರೂಪಣೆ ಠುಸ್ ಪಟಾಕಿಯಾಗಿದೆ ಎಂದು ಜೆಡಿಎಸ್ ಟೀಕಿಸಿದೆ.

ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಹಿನ್ನಡೆಯಾಗುತ್ತಿದ್ದಂತೆ, ಸಾರ್ವಜನಿಕ ಅಭಿಪ್ರಾಯವನ್ನು ಸ್ವೀಕರಿಸುವ ಬದಲು, ಕಾಂಗ್ರೆಸ್ಸಿಗರು ಆ ವರದಿಯನ್ನೇ ತೆಗೆಸಿ ಹಾಕಿರುವುದು ಸಿದ್ದರಾಮಯ್ಯ ಸರ್ಕಾರದ ಹೇಡಿತನಕ್ಕೆ ಸಾಕ್ಷಿ.! ಎಂದು ಜೆಡಿಎಸ್ ಟೀಕಿಸಿದೆ.

- Advertisement - 

 

Share This Article
error: Content is protected !!
";