ಘಾಟಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿಜಿಟಲ್ ಹುಂಡಿ ವ್ಯವಸ್ಥೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕರ್ನಾಟಕ ಪ್ರಸಿದ್ದ ಹತ್ತು ದೇವಾಲಯಗಳಲ್ಲಿ ಒಂದಾದ ಶ್ರೀಕ್ಷೇತ್ರ ಸುಬ್ರಹ್ಮಣ್ಯ  ದೇವಸ್ಥಾನದಲ್ಲಿ ಭಕ್ತರ ಅನುಕೂಲಕಾಗಿ ಹುಂಡಿ ಕಾಣಿಕೆಗೂ ಡಿಜಿಟಲ್ ವ್ಯವಸ್ಥೆಯಾಗಿ  ಇ-ಹುಂಡಿ  ಪ್ರಾರಂಭಿಸಲಾಗಿದೆ.

ದೇವಾಲಯಕ್ಕೆ ಬಂದ ಭಕ್ತರ ಹಣವನ್ನ ಗೂಗಲ್ ಪೇ ಪೇಟಿ ಎಂ  ಫೋನ್ ಪೇ  ಭೀಮ್ ಆಪ್ ಸೇರಿದಂತೆ ಹಲವು ಖಾತೆಗಳಲ್ಲಿ  ಹಣ ಇದ್ದರು ದೇವರಿಗೆ ಕಾಣಿಕೆ ನೀಡಲು ಸಾಧ್ಯವಾಗ ದಿರುವುದರಿಂದ  ಪ್ರಸ್ತುತ ಇಂಡಿಯನ್ ಓವರ್ಸೀಸ್ ಬ್ಯಾಂಕ್ ಐ ಒ ಬಿ

ಸಹಯೋಗದಲ್ಲಿ ಇ-ಹುಂಡಿ ವ್ಯವಸ್ಥೆ ಕಲ್ಪಿಸಲಾಗಿದೆ ಗೂಗಲ್ ಪೇ ಪೇಟಿಎಂ ಫೋನ್ ಪೇ ಭೀಮ್ ಆಪ್ ಸೇರಿದಂತೆ ಯಾವುದೇ ಆಪ್ ನಿಂದ ಭಕ್ತರು ಕಾಣಿಕೆ ಸಲ್ಲಿಸಲು ಅವಕಾಶ ನೀಡಲಾಗಿದ್ದು ಕ್ಯೂಆರ್ ಕೋಡ್  ಅಳವಡಿಕೆ ಮಾಡಲಾಗಿದ್ದು ಸ್ಕ್ಯಾನ್ ಮಾಡಿ ಕಾಣಿಕೆ ನೀಡಲು ಅವಕಾಶ ಕಲ್ಪಿಸಲಾಗಿದ್ದು  ಭಕ್ತರು ಸುಲಭವಾಗಿ ಕಾಣಿಕೆ ನೀಡಬಹುದಾಗಿದೆ ಎಂದು

ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಂ ನಾರಾಯಣಸ್ವಾಮಿ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ  ಪ್ರಧಾನ ಅರ್ಚಕರು ಆರ್ ಸುಬ್ರಹ್ಮಣ್ಯ ಇಂಡಿಯನ್ ಓವರ್ಸೀಸ್ ಬ್ಯಾಂಕ್ ಮುಖ್ಯ ಪ್ರಾದೇಶಿಕ ವ್ಯವಸ್ಥಾಪಕರು ಉಮೇಶ್ ಕುಮಾರ್ ಸಿಂಗ್ ಅಜಿತ್ ದಾಸ್ ಬ್ಯಾಂಕ್ ಸಿಬ್ಬಂದಿ ಹಾಗೂ ದೇವಾಲಯದ ಸಿಬ್ಬಂದಿ ಸಾರ್ವಜನಿಕರು ಹಾಜರಿದ್ದರು.

 

 

- Advertisement -  - Advertisement -  - Advertisement - 
Share This Article
error: Content is protected !!
";