ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಶ್ರೀ ವಿವೇಕ್ ಒಬೆರಾಯ್ ಅವರು ಹಿಂದಿ ಚಲನಚಿತ್ರದ ಖ್ಯಾತ ನಾಯಕನಟರಾದ ಇವರು ದೇಶದ ರಕ್ಷಣೆಗಾಗಿ ಹುತಾತ್ಮರಾದ 25 ಸಿಆರ್ ಪಿಎಫ್ ಯೋಧರ ಕುಟುಂಬ ವರ್ಗಕ್ಕೆ ಉಡುಗೊರೆಯಾಗಿ ಮನೆಗಳನ್ನು ನೀಡಿದ್ದಾರೆ.
ಸಾಮಾಜಿಕ ಕ್ಷೇತ್ರದ ಮಹತ್ವಪೂರ್ಣ ಕಾರ್ಯ ಇದಾಗಿದೆ ಇಂತಹ ಮಹತ್ವರವಾದ ವಿಚಾರದಲ್ಲಿ ಮೆಚ್ಚುಗೆ ವ್ಯಕ್ತಪಡಿಸುವುದು ನಾಗರಿಕ ಸಮಾಜಕ್ಕೆ ಘನತೆ.
ವಿವೇಕ್ ಒಬೆರಾಯ್ ಅವರ ತಂದೆ ಸುರೇಶ್ ಒಬೆರಾಯ್ ಹಿಂದಿ ಚಲನಚಿತ್ರದಲ್ಲಿ ನಿರ್ಮಾಪಕರಾಗಿ ನಟರಾಗಿ ಗುರುತಿಸಿಕೊಂಡಿದ್ದರು.
ರಕ್ತಚರಿತ್ರ ತೆಲುಗು ಸಿನಿಮಾ ಅಖಂಡ ಆಂಧ್ರ ಪ್ರದೇಶದ ರಾಜಕೀಯ ಹಿನ್ನೆಲೆಯ ನೈಜ್ಯ ಕಥೆಯನ್ನು ಹೊಂದಿತ್ತು. ಈ ತೆಲುಗು ಸಿನೆಮಾದಲ್ಲಿ ಪರಿಟಾಲ ರವಿ ಅವರ ಜೀವನ ಚರಿತ್ರೆ ಕಥೆಗೆ ವಿವೇಕ್ ಒಬೆರಾಯ್ ನಾಯಕನಟನಾಗಿ ಬಹಳಷ್ಟು ಉತ್ತಮವಾಗಿ ಅಭಿನಯಿಸಿದರು.
ದೇಶದ ಸಿನಿಮಾ ಕ್ಷೇತ್ರದ ಇತಿಹಾಸದಲ್ಲಿ ಎರಡು ಭಾಗದಲ್ಲಿ ತಯಾರಾದ ಮೊಟ್ಟಮೊದಲ ಸಿನಿಮಾ ರಕ್ತಚರಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸಿನಿಮಾದ ಕಥೆ ಆಂಧ್ರ ಪ್ರಾಂತ್ಯವು ಸೇರಿದಂತೆ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ನೆಲೆಗಟ್ಟಿನವರೆಗು ವಿಸ್ತರಿಸಿದೆ.
ಆಂಧ್ರ ಪ್ರದೇಶದ ಪ್ರಭಾವಿ ರಾಜಕಾರಣಿಯಾದ ಪರಿಟಾಲ್ ರವಿ ಅವರನ್ನು ಸರಿಸುಮಾರು 1997-98 ಆ ದಿನಗಳಲ್ಲಿ ಪಾವಗಡ ತಾಲ್ಲೂಕಿನ ಖಾಸಗಿ ಕಾರ್ಯಕ್ರಮವೊಂದರಲ್ಲಿ ನನ್ನ ವಿಶ್ವಾಸಿಗರು ಆತ್ಮೀಯರಾದ ಶೈಲಾಪುರದ ದಿವಂಗತ ಕರಿಯಣ್ಣನವರು ಪರಿಟಾಲ್ ರವಿ ಅವರನ್ನು ಪರಿಚಯಿಸಿದರು.
2004ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಆರ್ ಮಂಜುನಾಥ್ ಅವರನ್ನು ಹಾಗೂ ಪರಿಟಾಲ್ ರವಿ ಅವರನ್ನು ರಾಜಕಾರಣದ ಮಾನದಂಡದಲ್ಲಿ ಭೇಟಿ ಮಾಡಿಸಲು ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ದಿವಂಗತ ಅಜ್ಜಪ್ಪ ಒಂದು ಸನ್ನಿವೇಶ ಸಿದ್ಧಪಡಿಸಿದರು.
ಈ ವಿಚಾರದಲ್ಲಿ ನನ್ನದು ಒಂದು ಸಣ್ಣ ಪ್ರಯತ್ನವಿತ್ತು. ಕೆಲವು ರಾಜಕೀಯ ಬದಲಾವಣೆ ಹಿನ್ನೆಲೆಯಲ್ಲಿ ಈ ವಿಚಾರವನ್ನು ಕೈಬಿಡಬೇಕಾಯಿತು. ಆ ವಿಚಾರವನ್ನು ಸಮಯದಲ್ಲಿ ನೆನೆದಿದ್ದೇನೆ.
ಲೇಖನ-ರಘು ಗೌಡ –9916101265