ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಶಾಸಕರೊಂದಿಗೆ ಡಿನ್ನರ್ ಮೀಟಿಂಗ್ ಮಾಡಿದ ಮರುದಿನವೇ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಪ್ತ ಶಾಸಕರೊಂದಿಗೆ ಭೋಜನ ಕೂಟ ಏರ್ಪಡಿಸಿ ಸಭೆ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿದ್ದ ರಾಜಕೀಯ ಡಿನ್ನರ್ ಸಭೆಗಳು ಬೆಳಗಾವಿಗೆ ವರ್ಗಾವಣೆಯಾಗಿದ್ದು ಅಧಿವೇಶನವನ್ನು ಲೆಕ್ಕಿಸದೆ ಡಿನ್ನರ್ ಮೇಲೆ ಡಿನ್ನರ್ ಕೂಟಗಳು ಏರ್ಪಾಟಾಗುತ್ತಿವೆ.
ಬೆಳಗಾವಿಯ ದೊಡ್ಡಣ್ಣವರ್ ಫಾರ್ಮ್ ಹೌಸ್‌ನಲ್ಲಿ ಡಿನ್ನರ್ ಜೊತೆಗೆ ಡಿಕೆ ಶಿವಕುಮಾರ್ ಬಣದ ಸಭೆ ನಡೆದಿದೆ. ಈ ಸಭೆಯಲ್ಲಿ 30ಕ್ಕೂ ಹೆಚ್ಚು ಶಾಸಕರು, ಮೂರರಿಂದ ನಾಲ್ವರು ಸಚಿವರು ಹಾಗೂ ಡಿಕೆ ಸುರೇಶ್ ಭಾಗವಹಿಸಿದ್ದರು ಎನ್ನಲಾಗಿದೆ.
ಈ ಸಭೆಯ ಮುಖ್ಯ ಚರ್ಚಾ ವಿಷಯಗಳಲ್ಲಿ ಯತೀಂದ್ರ ಅವರ ಹೇಳಿಕೆಗಳಿಗೆ ಕಡಿವಾಣ ಹಾಕುವುದು ಮತ್ತು ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುವ ಆಕಾಂಕ್ಷೆ ಸೇರಿವೆ ಎನ್ನಲಾಗಿದೆ.
ಡಿಕೆ ಶಿವಕುಮಾರ್ ಕೆಲವೇ ದಿನಗಳಲ್ಲಿ ದೆಹಲಿಗೆ ತೆರಳಲಿದ್ದು, ಸಿಎಂ ಸ್ಥಾನಕ್ಕೆ ಹೇಗೆ ಹಕ್ಕು ಮಂಡಿಸಬೇಕು ಎಂಬ ಬಗ್ಗೆಯೂ ಚರ್ಚೆಗಳು ನಡೆದಿವೆ ಎನ್ನಲಾಗಿದೆ.

