ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೇರ ಮೆಟ್ರೋ

News Desk
- Advertisement -  - Advertisement -  - Advertisement - 

 ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ಜನರು ಬಹುದಿನಗಳಿಂದ ಕಾಯುತ್ತಿದ್ದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ನೇರ ಮೆಟ್ರೋ ಸಂಪರ್ಕಕ್ಕೆ ಅಡ್ಡಿಗಲ್ಲು ಹಾಕಲಾಗಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ವಿಮಾನ ನಿಲ್ದಾಣದ ಮೆಟ್ರೋ ಕಾರಿಡಾರ್ 2027ರ ಅಂತ್ಯದ ವೇಳೆಗೆ ಪೂರ್ಣಗೊಳಿಸಲಿದೆ ಎಂದು ಹೇಳಲಾಗಿದೆ.

- Advertisement - 

ಹೊಸದಾಗಿ ಭೂಮಿ ಪೂಜೆ ಮಾಡಲಾಗಿರುವ ಮಾರ್ಗವು ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣವನ್ನು ಸುಗಮಗೊಳಿಸುವ ಮತ್ತು ಪ್ರಮುಖ ಕಾರಿಡಾರ್‌ಗಳಲ್ಲಿನ ರಸ್ತೆ ದಟ್ಟಣೆ ಕಡಿಮೆ ಮಾಡುವ ಉದ್ದೇಶ ಹೊಂದಿದೆ. ವಿಮಾನ ನಿಲ್ದಾಣ ಮೆಟ್ರೋ ಕಾರಿಡಾರ್ ನಮ್ಮ ಮೆಟ್ರೋದ ವಿಸ್ತರಣೆಯ ಭಾಗವಾಗಿದೆ ಮತ್ತು ಇದನ್ನು ಬ್ಲೂ ಲೈನ್ / ಒಆರ್ಆರ್-ವಿಮಾನ ನಿಲ್ದಾಣ ಮಾರ್ಗಕ್ಕೆ ಜೋಡಿಸಲಾಗುವುದು ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನ ಪ್ರಮುಖ ಸಾರ್ವಜನಿಕ ಸಾರಿಗೆ ಸಂಪರ್ಕಗಳಲ್ಲಿ ಒಂದಾಗಲಿದ್ದು, ಪ್ರಮುಖ ಐಟಿ ವಲಯಗಳು ಮತ್ತು ಹೆಚ್ಚಿನ ಸಾಂದ್ರತೆಯ ವಸತಿ ಪ್ರದೇಶಗಳನ್ನು ವಿಮಾನ ನಿಲ್ದಾಣದೊಂದಿಗೆ ಸಂಪರ್ಕಿಸುತ್ತದೆ.

- Advertisement - 

ಕಾರಿಡಾರ್ ಎರಡು ಹಂತಗಳಲ್ಲಿ ಉದ್ಘಾಟನೆಗೊಳ್ಳಲಿದ್ದು, ಮೊದಲ ಹಂತವು ಅದಕ್ಕೂ ಮುನ್ನ ಉದ್ಘಾಟನೆ ಆಗಲಿದೆ ಎಂದು ಹೇಳಲಾಗಿದೆ.

ಮೆಟ್ರೋ ಕಾರಿಡಾರ್ ಒಟ್ಟು ಉದ್ದ 58.19 ಕಿ.ಮೀ. ಇರಲಿದ್ದು, ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಸಂಚಾರಿಸಲಿದೆ. 2A+2B ಎಂದು ಎರಡು ಹಂತದಲ್ಲಿ ಯೋಜನೆಯ ವಿಭಜನೆ ಮಾಡಲಾಗಿದೆ.

 

Share This Article
error: Content is protected !!
";