ಮಾದಕ ದ್ರವ್ಯ ವ್ಯಸನ ತಡೆಗಟ್ಟಲು ಅಧಿವೇಶನದಲ್ಲಿ ಚರ್ಚೆ- ಸಭಾಪತಿ ಬಸವರಾಜ ಹೊರಟ್ಟಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕದ ವಿಧಾನಪರಿಷತ್ 155 ನೇ ಅಧಿವೇಶನದ ಉಪ ಅಧಿವೇಶನವು ಮಾರ್ಚ್ 03 ರಿಂದ 21 ರವರೆಗೆ ಸರ್ಕಾರಿ ರಜೆ ದಿನಗಳು ಹೊರತುಪಡಿಸಿ ಒಟ್ಟು 15 ದಿನಗಳು ಅಧಿವೇಶನದ ಕಾರ್ಯಕಲಾಪಗಳು ನಡೆಯಲಿವೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಶಿವಲಿಂಗಪ್ಪ ಹೊರಟ್ಟಿ ತಿಳಿಸಿದರು.

- Advertisement - 

ಇಂದು ವಿಧಾನಸೌಧದ ವಿಧಾನ ಮಂಡಲದ ಸಭಾಂಗಣದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾರ್ಚ್ 3 ರಂದು ಘನತವೆತ್ತ ರಾಜ್ಯಪಾಲರು ಉಭಯಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.  ನಂತರ ಕಳೆದ ಅಧಿವೇಶನದಿಂದೀಚೆಗೆ ಅಗಲಿದ ಗಣ್ಯ ವ್ಯಕ್ತಿಗಳಿಗೆ ಸಂತಾಪ ಸೂಚನೆ ಸಲ್ಲಿಸಲಾಗುವುದು. ನಂತರ ಘನತೆವೆತ್ತ ರಾಷ್ಟ್ರಪತಿ ಮತ್ತು ರಾಜ್ಯಪಾಲರಿಂದ ಕಳೆದ ಅಧಿವೇಶನದಿಂದೀಚೆಗೆ ಅಂಗೀಕಾರವಾದ ವಿಧೇಯಕಗಳ ಪಟ್ಟಿಯನ್ನು ಕಾರ್ಯದರ್ಶಿಯವರು ಸದನದ ಮುಂದೆ ಮಂಡಿಸಲಿದ್ದಾರೆ ಎಂದು ತಿಳಿಸಿದರು.
ಬಾರಿ ಅಧಿವೇಶನದಲ್ಲಿ ಹೊಸ ವಿಷಯಗಳ ಚರ್ಚೆಗೆ ಅವಕಾಶ ನೀಡಲಾಗಿದ್ದು, “ಹದಿಹರೆಯದ ಮಕ್ಕಳು ಅನುಭವಿಸುತ್ತಿರುವ ಸವಾಲುಗಳು, ಪ್ರತಿಸ್ಪಂದನೆಗಳು ಮತ್ತು ಪರಿಹಾರೋಪಾಯಗಳಕುರಿತು ಚರ್ಚಿಸಲು ಮಕ್ಕಳ ಹಕ್ಕುಗಳ ಶಾಸಕರ ವೇದಿಕೆಯ ವತಿಯಿಂದ ಮನವಿಯನ್ನು ಸ್ವೀಕರಿಸಲಾಗಿದೆ. ಪ್ರಸ್ತಾವನೆಯನ್ನು ಕಾರ್ಯಕಲಾಪಗಳ ಸಮಿತಿಯ ಮುಂದೆ ಮಂಡಿಸಿ, ಸಮಿತಿಯ ನಿರ್ಣಯದಂತೆ ಕ್ರಮವಹಿಸಲಾಗುವುದು.

- Advertisement - 

ಅದೇ ರೀತಿ ಮಾದಕ ವಸ್ತುಗಳ ಬಳಕೆಗೆ ಯುವ ಪೀಳಿಗೆಯು ಪ್ರೇರಿತರಾಗುತ್ತಿರುವುದರಿಂದ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿರುವುದು ಆತಂಕಕಾರಿ ವಿಷಯವಾಗಿರುತ್ತದೆ. ಅಪ್ರಾಪ್ತ ವಯಸ್ಸಿನ ಮಕ್ಕಳು ಮತ್ತು ಯುವ ಪೀಳಿಗೆಯು ಮಾದಕ ದ್ರವ್ಯಗಳ ವ್ಯಸನಿಗಳಾಗುತ್ತಿರುವುದನ್ನು ತಡೆಗಟ್ಟುವಕುರಿತು ಚರ್ಚಿಸಲು ಕಾಲಾವಕಾಶವನ್ನು ಕಾರ್ಯಕಲಾಪಗಳ ಸಮಯದಲ್ಲಿ ಮೀಸಲಿಡುವ ಬಗ್ಗೆ ಸಮಿತಿಯ ಮುಂದೆ ಮಂಡಿಸಿ, ಸಮಿತಿಯ ನಿರ್ಣಯದಂತೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಪ್ರಸಕ್ತ ಅಧಿವೇಶನಕ್ಕೆ ಈವರೆಗೆ ಪ್ರಶ್ನೋತ್ತರಗಳು ಒಟ್ಟು 693 ಪ್ರಶ್ನೆಗಳನ್ನು ಸ್ವೀಕರಿಸಿದ್ದು, ಅವುಗಳಲ್ಲಿ 431 ಚುಕ್ಕೆ ಗುರುತಿನ ಹಾಗೂ 262 ಚುಕ್ಕೆ ರಹಿತ ಸ್ವೀಕರಿಸಲಾಗಿದೆ. ನಿಯಮ 72 ಅಡಿಯಲ್ಲಿ 57 ಸೂಚನೆಗಳನ್ನು ಸ್ವೀಕರಿಸಲಾಗಿರುತ್ತದೆ. ನಿಯಮ 330 ಅಡಿಯಲ್ಲಿ ಬಂದಂತಹ 24 ಸೂಚನೆಗಳನ್ನು ಸ್ವೀಕರಿಸಲಾಗಿರುತ್ತದೆ.

ಸರ್ಕಾರದಿಂದ ಸ್ವೀಕೃತವಾಗಲಿರುವ ವಿಧೇಯಕಗಳ ಮಂಡನೆ, ಚರ್ಚೆ ಹಾಗೂ ಅಂಗೀಕಾರ, ಆಧ್ಯಾದೇಶಗಳ ವಿಧೇಯಕಗಳು. ಸದಸ್ಯರ ಖಾಸಗಿ ಕಾರ್ಯಕಲಾಪಗಳು, ಬದಲಿ ವಿಧೇಯಕಗಳು, ಸದಸ್ಯರ ಖಾಸಗಿ ಕಾರ್ಯಕಲಾಪಗಳು ಸೇರಿದಂತೆ ಕಾರ್ಯಕಲಾಪಗಳ ಸಲಹಾ ಸಮಿತಿಯ ತೀರ್ಮಾನದಂತೆ ಇನ್ನಿತರೆ ವಿಷಯಗಳ ಮೇಲಿನ ಚರ್ಚೆ ನಡೆಸಲಾಗುವುದು ಎಂದು ಅವರು ತಿಳಿಸಿದರು.
ರಾಜ್ಯದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲು ಸಚಿವರಾದ ಎಚ್.ಕೆ. ಪಾಟೀಲ್ ಅವರು ಮನವಿ ಮಾಡಿದ್ದಾರೆ. ಬಗ್ಗೆ ಸಮಯಾವಕಾಶ ನೋಡಿಕೊಂಡು ಚರ್ಚೆಗೆ ಕೈಗೆತ್ತಿಕೊಳ್ಳಲಾಗುವುದು.
ಸದನ ಆರಂಭಕ್ಕೂ ಮುನ್ನ ವಿಧಾನ ಪರಿಷತ್ತಿನ ಆಡಳಿತ ಪಕ್ಷದ ನಾಯಕರು ಹಾಗೂ ವಿರೋಧ ಪಕ್ಷಗಳ ನಾಯಕರೊಂದಿಗೆ ಹಾಗೂ ಪರಿಷತ್ತಿನ ಸದಸ್ಯರೊಂದಿಗೆ ಮಾತನಾಡಿ, ಸದನವನ್ನು ಸುಗಮವಾಗಿ ನಡೆಸಲು ಕ್ರಮವಹಿಸಲಾಗುವುದು.  

- Advertisement - 

ಕಳೆದ ಬೆಳಗಾವಿ ಅಧಿವೇಶನದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಒಂದು ತಿಂಗಳ ಒಳಗಾಗಿ ವರದಿಯನ್ನು ನೀಡಲು ಪರಿಷತ್ತಿನ Council Ethic Committee ಗೆ ತಿಳಿಸಲಾಗಿದ್ದು, ಸಮಿತಿಯು ಕೈಗೊಳ್ಳುವ ನಿರ್ಣಯದಂತೆ ಕ್ರಮ ವಹಿಸಲಾಗುವುದು.
ಅಧಿವೇಶನಕ್ಕೆ ಸಂಬಂಧಿಸಿದಂತೆ ಮಾರ್ಚ್ 3 ರಂದು ಜಂಟಿ ಸಲಹಾ ಸಮಿತಿಯ ಸಭೆ ಕರೆದು ಚರ್ಚೆಮಾಡಲು ಪರಿಷತ್ತಿನಿಂದ ಮನವಿಯನ್ನು ಸಲ್ಲಿಸಲಾಗಿದೆ. ಸಭೆ ಕರೆಯಲು ಮಾನ್ಯ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಸಹ ಒಪ್ಪಿಗೆಯನ್ನು ನೀಡಿದ್ದಾರೆ. ಬಗ್ಗೆ ಪಿ.ಎಸ್.ಯು ಸಮಿತಿಯೊಂದಿಗೆ ಮಾತನಾಡಿ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ವಿಧಾನ ಪರಿಷತ್ತಿಗೆ 123 ವರ್ಷಗಳ ಇತಿಹಾಸವಿದ್ದು, ತನ್ನದೇ ಆದ ಮೌಲ್ಯಗಳನ್ನು ಉಳಿಸಿಕೊಂಡಿದೆ. ಅಧಿವೇಶನದಲ್ಲಿಯೂ ಸಹ ಮೌಲ್ಯಗಳನ್ನು ಕಾಪಾಡಿಕೊಂಡು ಸದನವನ್ನು ಸುಗಮ ರೀತಿಯಲ್ಲಿ ನಡೆಸಿಕೊಂಡು ಹೋಗಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಭಾಪತಿಗಳು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ತಿನ ಕಾರ್ಯದರ್ಶಿಗಳಾದ ಶ್ರೀಮತಿ ಕೆ.ಆರ್. ಮಹಾಲಕ್ಷ್ಮಿ ಅವರು ಉಪಸ್ಥಿತರಿದ್ದರು.

Share This Article
error: Content is protected !!
";