381 ಟಿವಿ ಚಾನೆಲ್ ಮತ್ತು 48 ರೇಡಿಯೋ ಚಾನೆಲ್ಗಳ ಡಿಶ್ ಸೇವೆ ಸಂಪೂರ್ಣ ಉಚಿತ
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಸಾರ ಭಾರತಿ ಈಗ ಡಿಜಿಟಲ್ ಸೇವೆಯಡಿ ದೂರದರ್ಶನ ಉಚಿತ ಡಿಶ್ ಸೇವೆಯನ್ನು ಆರಂಭಿಸಿದೆ. ಡಿಡಿ ಉಚಿತ ಡಿಶ್ ಸೇವೆಯ 381 ಟಿವಿ ಚಾನೆಲ್ ಮತ್ತು 48 ರೇಡಿಯೋ ಚಾನೆಲ್ಗಳನ್ನು ದೇಶಾದ್ಯಂತ ಸುಮಾರು 5 ಕೋಟಿ ಮನೆಗಳನ್ನು ತಲುಪುತ್ತಿದೆ.
ಇತರೆ ಖಾಸಗಿ ಡಿಟಿಹೆಚ್ ವೇದಿಕೆಗಳಡಿ ಡಿಡಿ ಉಚಿತ ಡಿಶ್ ಚಾನೆಲ್ಗಳು ಮತ್ತು ದೂರದರ್ಶನ ತನ್ನ ಗ್ರಾಹಕರಿಗೆ ಯಾವುದೇ ತಿಂಗಳ ಶುಲ್ಕ ಅಥವಾ ಚಂದಾ ಹಣವನ್ನು ವಿಧಿಸುವುದಿಲ್ಲ. ಇವು ಉಚಿತ ಚಾನೆಲ್ಗಲಾಗಿದ್ದು, ಇದನ್ನು ಪಡೆಯಲು ಗ್ರಾಹಕರು ರೂ. 1500 ಡಿಡಿ ಉಚಿತ ಪ್ರೀ ಡಿಶ್ ಸೆಟ್ ಟಾಫ್ ಬಾಕ್ಸ್ ಮತ್ತು ಸಣ್ಣ ಡಿಶ್ ಆಂಟಿನಾವನ್ನು ಖರೀದಿಸಬೇಕು. ಇದು ಯಾವುದೇ ಕುಗ್ರಾಮದಲ್ಲಿ ಸಹ ಲಭ್ಯವಿರುತ್ತದೆ.
ಈ ಡಿಡಿ ಉಚಿತ ಡಿಶ್ ಸೇವೆಯು ಅತಿದೊಡ್ಡ ಡಿಟಿಹೆಚ್ ವೇದಿಕೆಯಾಗಿದ್ದು, ಇದು ಗ್ರಾಮೀಣ, ಗಡಿಭಾಗ, ಸಂಪರ್ಕವಿಲ್ಲದ ಪ್ರದೇಶಗಳಲ್ಲಿಯೂ ಲಭ್ಯವಿದೆ. ಡಿಡಿ ಉಚಿತ ಡಿಶ್ ಸೇವೆಯಿಂದ ಪ್ರಸಾರಭಾರತಿ ತನ್ನ ಸಾರ್ವಜನಿಕ ಸೇವೆ ಪ್ರಸಾರದ ಧ್ಯೇಯೋದ್ದೇಶವಾದ ಶಿಕ್ಷಣ, ಮನೋರಂಜನೆ ಮತ್ತು ಮಾಹಿತಿಯನ್ನು ದೇಶದ ಮೂಲ ಮೂಲೆಗೂ ತಲುಪಿಸುತ್ತಿದೆ. ಇದರಿಂದ ದೇಶದ ಕೆಳವರ್ಗದ ಜನರಿಗೂ ಈ ಸೇವೆ ಲಭ್ಯವಿದೆ. ಖಾಸಗಿ ಚಾನೆಲ್ಗಳಿಗೆ ಕೇಬಲ್, ಒಟಿಟಿಗಳಿಗೆ ಪಾವತಿಸುವ ದುಬಾರಿ ಹಣ, ಈ ಡಿಡಿ ಉಚಿತ ಡಿಶ್ ಸೇವೆ ಪಡೆದುಕೊಳ್ಳಲು ಪಾವತಿಸಬೇಕಿಲ್ಲ.
ಈ ಹಿಂದೆ ಉಳ್ಳವರು ಪಡೆದುಕೊಳ್ಳುತ್ತಿರುವ ಡಿಡಿ ಡಿಶ್ ಸೇವೆ ಈಗ ಎಲ್ಲಾ ವರ್ಗದವರಿಗೂ ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಇದರಿಂದ ದೇಶದ ಜನರ ಸಬಲೀಕರಣ ಸಹ ಆಗಲಿದ್ದು, ಕಡಿಮೆ ವೆಚ್ಚದಲ್ಲಿ ಉತ್ತಮ ಮಾಹಿತಿ ಸಮಾಜಕ್ಕೆ ತಲುಪುತ್ತದೆ.
ಸದ್ಯ ಡಿಡಿ ಉಚಿತ ಡಿಶ್ನಲ್ಲಿ ದೂರದರ್ಶನ ಚಾನೆಲ್ಗಳು ಸೇರಿದಂತೆ ಶೈಕ್ಷಣಿಕ ಚಾನೆಲ್ಗಳು, ಸುದ್ದಿಗಳು, ಭಕ್ತಿ, ಸಿನಿಮಾ, ಕ್ರೀಡಾ ಚಾನೆಲ್ಗಳು ಸೇರಿವೆ. ಶೈಕ್ಷಣಿಕ ಚಾನೆಲ್ಗಳಾದ “ಡಿಡಿ ಸ್ವಯಂ ಪ್ರಭ”, “ಡಿಡಿ ಪಿಎಂ ಇ ವಿದ್ಯಾ” “ಡಿಡಿ ಡಿಜಿ ಶಾಲಾ” ಮುಂತಾದವುಗಳು ಖ್ಯಾತಿಗಳಿಸಿವೆ. ಶೈಕ್ಷಣಿಕ ವಿಭಾಗಗಳಾದ ಕಲೆ, ವಿಜ್ಞಾನ, ಪ್ರದರ್ಶನ ಕಲೆ, ಸಾಮಜಿಕ ವೈಜ್ಞಾನಿಕ, ಕಲಾ ವಿಷಯಗಳು, ಇಂಜಿನಿಯರಿಂಗ್, ತಂತ್ರಜ್ಞಾನ, ಕಾನೂನು, ವೈದ್ಯಕೀಯ ಮತ್ತು ಕೃಷಿ ಮುಂತಾದ ವಿಷಯಗಳ ಕುರಿತು ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ಆಸಕ್ತರಿಗೆ ದೇಶಾದ್ಯಂತ ತಲುಪುವಲ್ಲಿ ಯಶಸ್ವಿಯಾಗಿದೆ. ಇದರಲ್ಲಿನ ಕೆಲ ವಿಷಯಗಳನ್ನು ಎನ್ಸಿಇಆರ್ಟಿ, ಸಿಐಇಟಿ, ಐಐಟಿ ಮತ್ತು ಯುಜಿಸಿಯಿಂದ ಪಡೆದುಕೊಳ್ಳಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.