ಸರ್ಕಾರಿ ಶಾಲಾ ಮಕ್ಕಳಿಗೆ ಬ್ಯಾಗ್, ನೋಟ್ ಬುಕ್ ವಿತರಣೆ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಹೊಸ ವರ್ಷ ಹಾಗೂ ಭೀಮಾ ಕೋರೆಂಗಾ
oವ್ ವಿಜಯೋತ್ಸವದ ಪ್ರಯುಕ್ತ ದೊಡ್ಡಬಳ್ಳಾಪುರ ತಾಲೂಕು ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಸಂಘಟನೆ ವತಿಯಿಂದ ತಾಲೂಕು ಅಧ್ಯಕ್ಷ ಅರುಣ್ ಕುಮಾರ್ ನೇತೃತ್ವದಲ್ಲಿ ಕೊಡಿಗೇಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಪೆನ್ನು ಬ್ಯಾಗ್ ಗಳನ್ನು ವಿತರಿಸಲಾಯಿತು.

ಈ ಬಗ್ಗೆ ಅರುಣ್ ಕುಮಾರ್ ಮಾತನಾಡಿ ಸರ್ಕಾರಿ ಶಾಲೆಯ ಮಕ್ಕಳು ಶಿಕ್ಷಣ ಪಡೆದು ಉನ್ನತ ಮಟ್ಟಕ್ಕೇರಬೇಕೆಂಬುದು ನಮ್ಮ ಸಂಘಟನೆಯ ಉದ್ದೇಶ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸರ್ಕಾರಿ ಶಾಲಾ ಮಕ್ಕಳಿಗೆ ಪ್ರೋತ್ಸಾಹಿಸುವ ಗುರಿ ಇದೆ. ಜೊತೆಗೆ ಸಂಘಟನೆ ವತಿಯಿಂದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಚಿಂತನೆ ನಮ್ಮದು ಎಂದು ಹೇಳಿದರು.

- Advertisement - 

         ಈ ಸಂದರ್ಭದಲ್ಲಿ ಕೋಡಿಗೆ ಹಳ್ಳಿ ಸರ್ಕಾರಿ ಶಾಲಾ ಮುಕ್ಯೋಪಾಧ್ಯಾಯರಾದ ವೆಂಕಟೇಶ್, ಶಾಲಾ ಶಿಕ್ಷಕಿಯರು, ತಾಲೂಕು ಉಪಾಧ್ಯಕ್ಷರಾದ ನವೀನ್, ಕಾರ್ಯದರ್ಶಿ ಗಜೇಂದ್ರ, ಸದಸ್ಯರಾದ ಪಾಪಣ್ಣ, ಸ್ವಾಮಿ, ಮಂಜುನಾಥ್ ಮುಂತಾದವರು ಹಾಜರಿದ್ದರು.

 

- Advertisement - 

Share This Article
error: Content is protected !!
";