ಮಹಾತ್ಮಗಾಂಧಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಬಡವರಿಗೆ ಬೆಡ್‌ ಶಿಟ್‌ಗಳ ವಿತರಣೆ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಮಹಾತ್ಮಗಾಂಧಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಬಡವರಿಗೆ ಬೆಡ್‌ಶಿಟ್‌ಗಳನ್ನು ವಿತರಿಸಲಾಯಿತು.

ಮಹಾತ್ಮಗಾಂಧಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ನಜೀರ್ ಮಾತನಾಡಿ ಡಿಸೆಂಬರ್, ಜನವರಿ ತಿಂಗಳಿನಲ್ಲಿ ಅತಿಯಾದ ಚಳಿಯಿರುವುದರಿಂದ ಬಡವರಿಗೆ ಹೊದಿಕೆಗಳ ಅಗತ್ಯವಿರುತ್ತದೆನ್ನುವುದನ್ನು ಮನಗಂಡು ಬೆಡ್‌ಶಿಟ್‌ಗಳನ್ನು ವಿತರಿಸಲಾಗಿದೆ.

- Advertisement - 

ಪ್ರತಿ ವರ್ಷವೂ ಬಡ ಮಕ್ಕಳಿಗೆ ನೋಟ್‌ಬುಕ್, ಪೆನ್‌ಗಳನ್ನು ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಇಂತಹ ಸಮಾಜಸೇವಾ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುವುದಾಗಿ ತಿಳಿಸಿದರು.

ರಾಜ್ಯ ವಕ್ಫ್ ಮಂಡಳಿ ಮಾಜಿ ಚೇರ್ಮನ್ ಕೆ.ಅನ್ವರ್‌ಭಾಷಾ, ಮಹಾತ್ಮಗಾಂಧಿ ಚಾರಿಟಬಲ್ ಟ್ರಸ್ಟ್ ಉಪಾಧ್ಯಕ್ಷ ಸೋಮಣ್ಣ, ಪ್ರದೀಪ್, ಬಶೀರ್ ಟ್ರೇಡರ್ ಮಾಲೀಕ  ನಯಾಜ್‌ಭಾಷಾ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.

- Advertisement - 

 

Share This Article
error: Content is protected !!
";