ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಆರ್.ಎಂ.ಸಿ.ಯಾರ್ಡ್‌ನಲ್ಲಿರುವ ನವ ಕರ್ನಾಟಕ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಹೊಸ ವರ್ಷಾಚರಣೆ ಪ್ರಯುಕ್ತ ನಗರದ ೨೬ ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅನು ಎಂ. ಪ್ರಥಮ, ಪೂಜಾ ಸಿ. ದ್ವಿತೀಯ, ರುಕ್ಸಾನಾಭಾನು ತೃತೀಯ ಬಹುಮಾನ ಪಡೆದಿದ್ದಾರೆ.
ಪ್ರಥಮ ಬಹುಮಾನವಾಗಿ ಐದು ಸಾವಿರ ರೂ. ದ್ವಿತೀಯ ಬಹುಮಾನ ಮೂರು ಸಾವಿರ ರೂ. ಹಾಗೂ ತೃತೀಯ ಬಹುಮಾನ ಎರಡು ಸಾವಿರ ರೂ.ಗಳನ್ನು ವಿಜೇತರಿಗೆನೀಡಲಾಯಿತೆಂದು ನವ ಕರ್ನಾಟಕ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಕಾರ್ಯದರ್ಶಿ ಜಯಲಕ್ಷ್ಮಿ ಎನ್. ತಿಳಿಸಿದ್ದಾರೆ.

