ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಇಲ್ಲಿನ ಸರಸ್ವತಿ ಟೇಕ್ವಾಂಡೋ ಸಂಸ್ಥೆಯಲ್ಲಿ ನಡೆದ ಬೆಲ್ಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ೪೧ ಮಕ್ಕಳಿಗೆ ಸರ್ಟಿಫಿಕೇಟ್‌ಗಳನ್ನು ಭಾನುವಾರ ವಿತರಿಸಲಾಯಿತು.
ಟೇಕ್ವಾಂಡೋ ಸಂಸ್ಥೆ ಅಧ್ಯಕ್ಷರಾದ ಫಾತ್ಯರಾಜನ್‌ರವರು ಸರ್ಟಿಫಿಕೇಟ್‌ಗಳನ್ನು ವಿತರಿಸಿ ಮಾತನಾಡುತ್ತ ಟೇಕ್ವಾಂಡೋ ಎನ್ನುವುದು ಆತ್ಮರಕ್ಷಣೆಗೆ ಅತ್ಯಂತ ಉಪಕಾರಿಯಾಗಲಿದೆ. ಹಾಗಾಗಿ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ಈ ಕ್ರೀಡೆ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಕರಗತ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಸುನಿತಾ ನರ್ಸಿಂಗ್ ಹೋಂನ ಡಾ.ಸಂದೀಪ್, ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಹನುಮಂತಗೌಡ ಪೂಜಾರ್, ಟೇಕ್ವಾಂಡೋ ಮುಖ್ಯ ತರಬೇತುದಾರ ಮಾಸ್ಟರ್ ಕನಕದಾಸ್, ಶಫಿವುಲ್ಲಾ, ವಿನಯ್‌ಕುಮಾರ್, ಸೀಮಾತಬಸಮ್, ಹನುಮಂತ, ಬಾಬ್‌ಜಾನ್ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ನವದೆಹಲಿಯಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ನಾಗರೀಕ ಸೇವಾ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಕರ್ನಾಟಕ ತಂಡಕ್ಕೆ ಚಿತ್ರದುರ್ಗದಿಂದ ಆಯ್ಕೆಯಾಗಿರುವ ಕ್ರಿಕೇಟ್ ಕ್ರೀಡಾಪಟುಗಳಾದ ರಾಘವೇಂದ್ರ ಜೆ, ಟಿ.ಕೆ.ನಾಗೇಶ್, ಆಕಾಶ್ ಕೆ.ಎಂ, ಹೆಚ್.ಸತೀಶ್‌ಕುಮಾರ್, ಪ್ರಶಾಂತ್ ವಿ, ಕ್ರೀಡಾ ಪೋಷಕರಾದ ನಾಗೇಂದ್ರಬಾಬು ಇವರುಗಳನ್ನು ಸನ್ಮಾನಿಸಲಾಯಿತು.

