ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ಏಕೀಕರಣ ರಕ್ಷಣಾ ಸೇನಾ ಸಮಿತಿ ಚಿತ್ರದುರ್ಗ ಜಿಲ್ಲಾ ಘಟಕ ವತಿಯಿಂದ ಕರ್ನಾಟಕ ಏಕೀಕರಣ ರಕ್ಷಣಾ ಸೇನಾ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಪಿ.ಶೇಖರ್ ರವರ 53ನೇ ಹುಟ್ಟು ಹಬ್ಬ ಅಂಗವಾಗಿ ಸೋಮವಾರ ಚಿತ್ರದುರ್ಗ ತಾಯಿ ಮಕ್ಕಳ ಆಸ್ಪತ್ರೆಯ ಬಾಣಂತಿಯರಿಗೆ ಬ್ರೆಡ್ ಹಣ್ಣು ವಿತರಣಾ ಮಾಡಲಾಯಿತು.
ಜಿಲ್ಲಾಧ್ಯಕ್ಷ ಬಿಎಸ್ ಮಂಜಣ್ಣ ಈ ಸಂದರ್ಭದಲ್ಲಿ ಮಾತನಾಡಿ ಕರ್ನಾಟಕ ಏಕೀಕರಣ ರಕ್ಷಣಾ ಸೇನಾ ಸಮಿತಿಯು ನಾಡು ನುಡಿ ನೆಲ ಜಲ ಗಡಿ ಭಾಷೆ ಸಂಸ್ಕೃತಿ ಉಳಿಸಿ ಬೆಳೆಸಲು ಸದಾ ಮುಂದೆ ಇದ್ದು ಈ ಸಮಿತಿಯ ಈ ಭಾಗದ ರೈತಪರ ಕಾರ್ಮಿಕ ಪರ ಶಿಕ್ಷಣ ಪರ ದಿನ ದಲಿತರ ಪರ ಹಿಂದುಳಿದ ವರ್ಗಗಳ ಪರ ಸದಾ ಸೇವ ಮಾಡುತ್ತಾ ಬಂದಿದ್ದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸೇನಾ ಸಮಿತಿಯ ಪದಾಧಿಕಾರಿಗಳಾದ ಎಂ. ಮಾರೆಪ್ಪ, ಎಂ ವಸಂತ ಇದ್ದರು.

