ಲಯನ್ಸ್ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಕಂಟನಕುಂಟೆ ಕಿಂಗ್ಸ್ ನ ವತಿಯಿಂದ ಕಂಟನಕುಂಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು.

ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಕಂಟನಕುಂಟೆ ಕಿಂಗ್ಸ್ ಅಧ್ಯಕ್ಷ ಲಯನ್ ಕೆ. ಎಂ. ಕೃಷ್ಣಮೂರ್ತಿ ಮಾತನಾಡಿ ಗ್ರಾಮೀಣ ಭಾಗಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ಸರ್ಕಾರಿ ಹಿರಿಯ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಂತ ಹಂತವಾಗಿ ಎಲ್ಲರಿಗೂ ಉಚಿತ ನೋಟ್ ಪುಸ್ತಕಗಳನ್ನು ನಮ್ಮ ಕ್ಲಬ್ ವತಿಯಿಂದ ವಿತರಣೆ ಮಾಡಲಾಗುವುದು ಇದರಿಂದ ಸರ್ಕಾರಿ ಶಾಲೆಯ ಮಕ್ಕಳಿಗೆ ತುಂಬಾ ಅನುಕೂಲವಾಗುವುದು. ಜೊತೆಗೆ ನಮ್ಮ ಕ್ಲಬ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಮಾಡಲಾಗುವುದು ಎಂದು ಹೇಳಿದರು.

- Advertisement - 

ಕಾರ್ಯಕ್ರಮದಲ್ಲಿ ಕ್ಲಬ್ ನ ಕಾರ್ಯದರ್ಶಿ ಲಯನ್ ಎಂ ಸಿ ಮಂಜುನಾಥ್ ಖಜಾಂಚಿ ಲಯನ್ ಆರ್ ಗೋಪಾಲಕೃಷ್ಣ ಮೊದಲ ಉಪಾಧ್ಯಕ್ಷ ಜಿ ರಾಜಗೋಪಾಲ್ ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಕಂಟನಕುಂಟೆ ಕಿಂಗ್ಸ್ ನ ಎಲ್ಲಾ ಸದಸ್ಯರು ಶಾಲೆಯ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.

 

- Advertisement - 

 

Share This Article
error: Content is protected !!
";