ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಜವಾಬ್ದಾರಿಗಳ ಹಂಚಿಕೆ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ  ಸೆಪ್ಟಂಬರ್ ೧೫ ರಂದು ಬೆಳಗ್ಗೆ ೮:೩೦ರ ಸಮಯದಲ್ಲಿ ನಡೆಯುವ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ  ಹಮ್ಮಿಕೊಳ್ಳಲಾಗಿರುವ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮದ ಅಂಗವಾಗಿ ಸೆಪ್ಟಂಬರ್೧೨ರಂದು ತಹಶೀಲ್ದಾರರು ಹಾಗೂ ಹಿರಿಯೂರು ತಾಲ್ಲೂಕು ಮುಖ್ಯ ಲೆಕ್ಕಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಚಿತ್ರದುರ್ಗರವರ ಅಧ್ಯಕ್ಷತೆಯಲ್ಲಿ

ನಗರಸಭೆ ಕಾರ್ಯಾಲಯದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಪದವಿ ಕಾಲೇಜಿನ ಪ್ರಾಂಶುಪಾಲರು ಹಾಗೂ ಹೊಸದುರ್ಗ ತಾಲ್ಲೂಕಿನ ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಕೆಳಕಂಡ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಯಿತು.

 ಈ ಸಭೆಯಲ್ಲಿ ತಾಲ್ಲೂಕು ನೊಡಲ್ ಅಧಿಕಾರಿಗಳಾಗಿ ವಿಶೇಷ ಭೂ ಸ್ವಾಧೀನ  ಅಧಿಕಾರಿಗಳಾದ  ವೆಂಕಟೇಶ್ ನಾಯ್ಕ್ಪ್ಲಾನಿಂಗ್ ಆಫೀಸರ್ ಗಳಾದ  ಮಹೇಂದ್ರಕುಮಾರ್, ಚಿತ್ರದುರ್ಗ , ಜಿಲ್ಲಾ ಪಂಚಾಯತ್  ಮುಖ್ಯ ಲೆಕ್ಕಾಧಿಕಾರಿಗಳು ಇವರುಗಳನ್ನು ನೇಮಕ ಮಾಡಲಾಯಿತು.

 ಅಲ್ಲದೆ, ೦೫ಕಿ.ಮೀ.ಒಬ್ಬರಂತೆ ಉಸ್ತುವಾರಿ ನೋಡಿಕೊಳ್ಳಲು ಜಿಲ್ಲಾಮಟ್ಟದ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.  ಸುಮಾರು ೦೧ ಕಿ.ಮೀ. ಶಾಲೆಯ ಮುಖ್ಯೋಪಾಧ್ಯಾಯರುಗಳನ್ನು ನೇಮಕ ಮಾಡಲಾಗಿದೆ.

 ಪ್ರತಿ ೧೦೦ ಮೀಟರ್ ಗೆ ಸಹ ಶಿಕ್ಷಕರನ್ನು/ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳುಗ್ರಾಮ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಮಾನವ ಸರಪಳಿ ನಿರ್ಮಿಸಲು ಮಾನವ ಸಂಪನ್ಮೂಲ ಕ್ರೂಡೀಕರಣಕ್ಕಾಗಿ ತಾಲ್ಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು/ಸಿಬ್ಬಂದಿಗಳಿಗೆ ಕಾರ್ಯಭಾರವನ್ನು ಹಂಚಿಕೆ ಮಾಡಲಾಯಿತು.

 ಈ ಸದರಿ ಸಭೆಯಲ್ಲಿ ಚಿತ್ರದುರ್ಗ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಮಧುತಹಶೀಲ್ದಾರ್ ರಾಜೇಶ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ತಿಪ್ಪೇಸ್ವಾಮಿಸಿ.ಡಿ.ಪಿ.ಓ. ರಾಘವೇಂದ್ರ, ಎ.ಎಚ್.ಓ. ಲೋಕೇಶ್ಟಿ.ಎಚ್.ಓ. ಮಂಜುನಾಥ್ಎ.ಡಿ ಕೃಷಿ ಇಲಾಖೆಯ ದಿನೇಶ್ಸ.ಕ.ಇ. ಪದವಿ ಕಾಲೇಜಿನ ಪ್ರಾಂಶುಪಾಲರುಗಳಾದ ಮಹೇಶ್ವರಪ್ಪಬಿ.ಆರ್. ಹನುಮಂತರಾಯ ಹಾಗೂ ಧರ್ಮಪುರ ಕಾಲೇಜು ವೀರಣ್ಣ, ಮತ್ತು ಪಿಯು ಕಾಲೇಜುಗಳ ಪ್ರಾಂಶುಪಾಲರುಗಳು, ರೈಸ್ ಪ್ರಾಂಶುಪಾಲರು ಹಾಗೂ ಇತರೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

 

 

- Advertisement -  - Advertisement - 
Share This Article
error: Content is protected !!
";