ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ
ತಾಲೂಕು ಕೊಡುಗೆಹಳ್ಳಿ ವಲಯದ ಚಿಕ್ಕಪೇಟೆ ಏರಿಯಾದ ಗಂಟಲು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಫಾರೂಕ್ ಪಾಷ ರವರಿಗೆ ಪರಮ ಪೂಜ್ಯ ವೀರೇಂದ್ರ ಹೆಗ್ಗಡೆ ಯವರು 20,000 ಸಹಾಯಧನ ಮಂಜೂರು ಮಾಡಿದ್ದು ಇಂದು ತಾಲೂಕು ಯೋಜನಾಧಿಕಾರಿಗಳಾದ ದಿನೇಶ್ ರವರು ಸಹಾಯಧನ ಚೆಕ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕಿ ಸವಿತಾ , ಒಕ್ಕೂಟದ ಪದಾಧಿಕಾರಿಗಳಾದ ಸುಜಾತಾ, ರತ್ನಮ್ಮ, ಸೇವಾಪ್ರತಿನಿದಿಗಳಾದ ಮಂಜಮ್ಮ, ಶ್ವೇತಾ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

