ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಆಧುನಿಕ ಮೊಬೈಲ್ ಹಾವಳಿಯಲ್ಲಿ ಛಾಯಾಗ್ರಹಣ ನೇಪಥ್ಯಕ್ಕೆ ಸರಿಯುತ್ತಿರುವುದು ಆತಂಕಾರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ ಹೇಳಿದರು.
ಛಾಯಾಗ್ರಾಹಕರ ವೃತ್ತಿಯ ಬಗ್ಗೆ ಸಮಾಜದಲ್ಲಿ ವಿಶೇಷ ಗೌರವಿದೆ. ಪ್ರಸ್ತುತ ಘಟನೆಯೂ ಸೇರಿದಂತೆ ಹಳೇತಲೆಮಾರಿನ ಹಲವಾರು ಸಂಗತಿಗಳನ್ನು ನಾವು ಪೋಟೋ ನೋಡುವ ಮೂಲಕ ಮೆಲಕುಹಾಕಬಹುದು. ಛಾಯಾಗ್ರಾಹಕರು ತಮ್ಮ ವೃತ್ತಿಯನ್ನು ವಿಶೇಷವಾಗಿ ಗೌರವಿಸಿ, ಪ್ರೀತಿಸಬೇಕಲ್ಲದೆ, ಎಲ್ಲರೂ ಆತ್ಮವಿಶ್ವಾಸದಿಂದ ಬದುಕಬೇಕು. ನೀವು ಮಾಡುವ ವೃತ್ತಿ ನಿಮಗೆ ವಿಶೇಷ ಸ್ಥಾನಮಾನವನ್ನು ತಂದುಕೊಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ ತಿಳಿಸಿದರು.
ಅವರು, ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಛಾಯಾಗ್ರಾಹಕರ ಸಂಘದ ೧೮೫ನೇ ವಿಶ್ವಛಾಯಾಗ್ರಹಣ ದಿನಾಚರಣೆ ಹಾಗೂ ಛಾಯಾಕುಟುಂಬ ಮಿಲನ ಕಾರ್ಯಕ್ರಮವನ್ನು ಕ್ಯಾಮರ ಕ್ಲಿಕ್ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಕಳೆದ ಹಲವಾರು ವರ್ಷಗಳಿಂದ ಛಾಯಾಗ್ರಾಹಕರ ವೃತ್ತಿಯ ಬಗ್ಗೆ ಮಾಹಿತಿ ಪಡೆದಿರುವೆ. ಬರುವ ಆದಾಯದಲ್ಲೇ ಸಂತೃಪ್ತಿಯ ಬದುಕನ್ನು ನಡೆಸುವುದರಲ್ಲಿ ಛಾಯಾಗ್ರಾಹಕರು ಸದಾಮುಂದು. ತಮ್ಮ ಯಾವುದೇ ಸಮಸ್ಯೆ ಇದ್ದಲ್ಲಿ ಬಗೆಹರಿಸುವ ಭರವಸೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಾಲ್ಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ನೇತಾಜಿಪ್ರಸನ್ನ, ಇತ್ತೀಚಿನ ದಿನಗಳಲ್ಲಿ ಛಾಯಾಗ್ರಹಣ ತನ್ನದೇಯಾದ ವಿಶೇಷತೆಯನ್ನು ಹೊಂದಿದೆ. ಚಳ್ಳಕೆರೆ ನಗರದಲ್ಲಿ ಸುಮಾರು ೧೦೦ಕ್ಕೂ ಹೆಚ್ಚು ಕುಟುಂಬಗಳು ಈ ವೃತ್ತಿ ಅವಲಂಬಿಸಿವೆ. ಅನೇಕ ಸಮಸ್ಯೆಗಳ ನಡುವೆಯೂ ಛಾಯಾಗ್ರಾಹಕರು ತಮ್ಮ ವೃತ್ತಿ ಬದುಕು ಮುಂದುವರೆಸಿಕೊಂಡು ಹೋಗಿದ್ಧಾರೆ. ಛಾಯಾಗ್ರಾಹಕರ ಸಂಘದ ಚಟುವಟಿಕೆಗಳನ್ನು ಕ್ರಿಯಾಶೀಲವಾಗಿ ನಡೆಸಲು ನಗರದಲ್ಲಿ ನಿವೇಶನ ನೀಡುವುದಲ್ಲದೆ, ಛಾಯಾಭವನ ನಿರ್ಮಿಸಿಕೊಡುವಂತೆ ಮನವಿ ಮಾಡಿದರು.
ರಾಜ್ಯ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ನಾಗೇಶ್ ಮಾತನಾಡಿ, ಛಾಯಾಗ್ರಹಣ ವೃತ್ತಿ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ. ಕಳೆದ ಹಲವಾರು ವರ್ಷಗಳ ಹಿಂದೆ ನಡೆದ ವಿಷಯವನ್ನು ಛಾಯಾಗ್ರಹಣದ ಮೂಲಕ ಸೆರೆಹಿಡಿದು ಜನರಿಗೆ ತಲುಪಿಸುವ ಕೆಲಸವನ್ನು ಮಾಡಲಾಗುತ್ತಿದೆ. ವಿಶೇಷವಾಗಿ ಈ ವೃತ್ತಿಯನ್ನು ಎಲ್ಲರೂ ಗೌರವಿಸುತ್ತಾರೆ, ಛಾಯಾಗ್ರಾಹಕರ ಸಮಸ್ಯೆನಿವಾರಣೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಕ್ಷೇತ್ರದ ಶಾಸಕರು ಗಮನಹರಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿ ಮುರುಳಿ, ಉಮಾಶಂಕರ್, ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಸೈಯದ್ ರಹಮತ್‌ವುಲ್ಲಾ, ಪ್ರಧಾನ ಕಾರ್ಯದರ್ಶಿ ನಾಗಣ್ಣ, ಖಜಾಂಚಿ ಕುಮಾರ್, ಹಿರಿಯ ಛಾಯಾಗ್ರಾಹಕರಾದ ಪಿ.ರವೀಂದ್ರನಾಥ, ಭವಾನಿಶಂಕರ ಮುಂತಾದವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರದ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ, ಯಾವ ವ್ಯಕ್ತಿ ವೃತ್ತಿಯನ್ನು ಗೌರವಿಸುತ್ತಾನೋ ಅವನು ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತದೆ. ಛಾಯಾಗ್ರಾಹಕರ ಯಾವುದೇ ಸಮಸ್ಯೆಗಳಿದ್ದರೂ ಅದನ್ನು ಪರಸ್ವರ ಚರ್ಚಿಸಿ ಬಗೆಹರಿಸುವ ಭರವಸೆಯನ್ನು ನೀಡಿದರು.
ಉಪಾಧ್ಯಕ್ಷ ವೈ.ಜಯಕುಮಾರ್, ಪ್ರಧಾನಕಾರ್ಯದರ್ಶಿ ಟಿ.ಆರ್.ಚಂದ್ರಶೇಖರ್, ಖಜಾಂಚಿ ಅಜಯ್, ಸಂಘಟನಾ ಕಾರ್ಯದರ್ಶಿ ಪಿಎಸ್‌ಆರ್ ಪಟೇಲ್, ನಿರ್ದೇಶಕರಾದ ಕೆ.ಮೃತ್ಯುಂಜಯ, ಶ್ರೀನಿವಾಸಲು, ರಘು, ಭಾನುವೀರೇಶ್, ಅಶೋಕ್, ವೆಂಕಟೇಶ್, ನಾಗರಾಜಗೌಡ, ಚೌಧರಿ,ಶಶಿ, ಶಿವು ಮುಂತಾದವರು ಉಪಸ್ಥಿತರಿದ್ದರು.