ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ವಿಶ್ವ ವಿಕಲ ಚೇತನ ದಿನಾಚರಣೆಯ ಪ್ರಯುಕ್ತ ಮನಸ್ಫೂರ್ತಿ ವಿಶೇಷ ಶಾಲೆಯು “ಸ್ಫೂರ್ತಿ ವೈಭವ – 2025” ಜಿಲ್ಲಾ ಮಟ್ಟದ ವಿಕಲಚೇತನ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಡಿಸೆಂಬರ್ 26 ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಶಿವಮೊಗ್ಗದ ಡಾ.ಬಿ.ಆರ್.ಅಂಬೇಡ್ಕರ್‌ಭವನದಲ್ಲಿ ಆಯೋಜಿಸಿದ್ದು ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಯ 7 ತಾಲ್ಲೂಕಿನ ವಿಶೇಷ ಶಾಲೆಗಳು ಭಾಗವಹಿಸಲಿವೆ.
ಸ್ಫೂರ್ತಿ ವೈಭವ ಕಾರ್ಯಕ್ರಮವು ವಿಕಲಚೇತನ ಮಕ್ಕಳ ಪ್ರತಿಭೆಯನ್ನು ಉತ್ತೇಜಿಸುವ ಮತ್ತು ವಿಕಲಚೇತನ ಮಕ್ಕಳ ಕಲಾ – ಸಾಂಸ್ಕೃತಿಕ ಪ್ರದರ್ಶನಕ್ಕೆ ಒಂದು ಮಹತ್ವದ ವೇದಿಕೆಯಾಗಿದೆ.
ಜೊತೆಗೆ ವಿಶೇಷ ಚೇತನ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ವಿಶೇಷ ಚೇತನ ವ್ಯಕ್ತಿಗಳ ಪ್ರತಿಭೆಯನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆ ಹಾಗೂ ತಾಲೂಕಿನ ವಿಶೇಷ ಶಾಲೆಗಳು ಹಾಗೂ ವಿಶೇಷ ಚೇತನ ಮಕ್ಕಳು ಮತ್ತು ಅವರ ಪೋಷಕರು ಭಾಗವಹಿಸುವುದರ ಮೂಲಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಮನಸ್ಫೂರ್ತಿ ವಿಶೇಷ ಶಾಲೆಯ ಶೈಕ್ಷಣಿಕ ನಿರ್ದೇಶಕರಾದ ಡಾ.ಪ್ರೀತಿ.ವಿ.ಶಾನ್ ಭಾಗ್ ರವರು ಪ್ರಕಟಣೆಯಲ್ಲಿ ಕೋರಿದ್ದಾರೆ.

