ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ಒಂದು ತಿಂಗಳ ಕಾಲ ನಡೆಯುವ ಉಪವಾಸ ವ್ರತದ ಹಿನ್ನೆಲೆಯಲ್ಲಿ ಚಿತ್ರದುರ್ಗದ ಉಮರ್ ಸರ್ಕಲ್ ನಲ್ಲಿ ಮುಸ್ಲಿಂ ಯುವಕರಿಂದ ಇಪ್ತಿಯಾರ್ ಕೂಟ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಜಿಲ್ಲಾ ಉಪ ವಿಭಾಗಾಧಿಕಾರಿ ಮಹಬೂಬ್ ಜಿಲಾನ್, ಜಿಲ್ಲಾ ಶಸ್ತ್ರ ತಜ್ಞ ರವೀಂದ್ರ, ನಗರ ಪೋಲೀಸ್ ಠಾಣೆ ವೃತ್ತ ನಿರೀಕ್ಷಕ ಉಮೇಶ್ ಬಾಬು, ಪಿಎಸ್ಐ ಗಾದಿ ಲಿಂಗ ಗೌಡರ,
ನಗರಸಭಾ ಸದಸ್ಯರಾದ ಸರ್ದಾರ್ ಅಹಮದ್ ಪಾಷಾ, ಫಕ್ರು, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾಧ್ಯಕ್ಷ ಸಯ್ಯದ್ ಖುದ್ದೂಸ್, ನಗರ ಯುವ ಕಾಂಗ್ರೆಸ್ ಆಜಮ್, ರಫೀ, ಶಾರುಖ್, ಸಾಧಿಕ್ ಮತ್ತು ಇನ್ನು ಅನೇಕ ಮುಸ್ಲಿಂ ಮುಖಂಡರು ಯುವಕರು ಭಾಗಿಯಾಗಿದ್ದರು.