ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧ್ಯಕ್ಷರಾಗಿ ಸುಧಾ, ಉಪಾಧ್ಯಕ್ಷೆಯಾಗಿ ರತ್ನಮ್ಮ, ಕಾರ್ಯದರ್ಶಿಯಾಗಿ ನಾಜಿಮ, ಮೊಳಕಾಲ್ಮುರು ತಾಲ್ಲೂಕು ಅಧ್ಯಕ್ಷರಾಗಿ ಪರ್ವಿನ್‌ಭಾನು, ಪದಾಧಿಕಾರಿಗಳಾಗಿ ಕವಿತ, ಕಮಲಮ್ಮ ಇವರುಗಳನ್ನು ನೇಮಕ ಮಾಡಲಾಯಿತು.
ಕರ್ನಾಟಕ ರಾಜ್ಯ ರೈತೋದಯ ಹಸಿರುಸೇನೆ ರಾಜ್ಯಾಧ್ಯಕ್ಷ ಚಂದ್ರಶೇಖರ್ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಮಾತನಾಡಿ ರೈತರ ಅಭ್ಯುದಯಕ್ಕಾಗಿ ದೇಶದಲ್ಲಿ ಅನೇಕ ಹೋರಾಟ, ಪ್ರತಿಭಟನೆ, ಚಳುವಳಿಗಳು ನಡೆಯುತ್ತಿವೆ. ದೇಶಕ್ಕೆ ಅನ್ನ ನೀಡುವ ರೈತನನ್ನು ದೇಶದ ಆಸ್ತಿಯೆಂದು ಆಳುವ ಸರ್ಕಾರಗಳು ಪರಿಗಣಿಸಬೇಕು. ರೈತರು, ಕಾರ್ಮಿಕರು, ಬಡವರು ಶೋಷಿತರಿಗೆ ನ್ಯಾಯ ಕೊಡಿಸುವುದು ನಮ್ಮ ಉದ್ದೇಶ. ರೈತನು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಗುತ್ತಿಲ್ಲದ ಕಾರಣ ತಾನು ಬೆಳೆದ ಬೆಳೆಗೆ ರೈತನೆ ಬೆಲೆ ನಿಗದಿಪಡಿಸುವಂತಾಗಬೇಕು. ಆಗ ಮಾತ್ರ ರೈತನ ಬೆವರಿಗೆ ನಿಜವಾದ ಬೆಲೆ ಸಿಗುತ್ತದೆ ಎಂದರು.
ಮಧ್ಯವರ್ತಿಗಳ ಹಾವಳಿಯಲ್ಲಿ ರೈತನ ಧಮನವಾಗುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತನಿಗೆ ನೀರು ಮತ್ತು ವಿದ್ಯುತ್ ಕೊಟ್ಟರೆ ಸಾಕು. ಸರ್ಕಾರಿ ಶಾಲೆಗಳಲ್ಲಿ ಓದಿದವರಿಗೆ ಮಾತ್ರ ಸರ್ಕಾರಿ ನೌಕರಿ ಸಿಗಬೇಕು. ಕನ್ನಡ ನಾಡು, ನುಡಿ, ನೆಲ, ಜಲ ಉಳಿಯಬೇಕಾದರೆ ನಿರಂತರ ಹೋರಾಟವಿರಬೇಕೆಂದು ಹೇಳಿದರು. ಲೇಖಕ ಹೆಚ್.ಆನಂದ್‌ಕುಮಾರ್ ಈ ಸಂದರ್ಭದಲ್ಲಿ ಹಾಜರಿದ್ದರು.