ಚಂದ್ರವಳ್ಳಿ ನ್ಯೂಸ್, ವಿಜಯನಗರ(ಹೊಸಪೇಟೆ):
ಜಿಲ್ಲೆಯಲ್ಲಿ ಬೆಳೆದ ಬೇಸಿಗೆ ಹಂಗಾಮಿನ ಭತ್ತ, ರಾಗಿ ಹಾಗೂ ವಿವಿಧ ಬೆಳೆಗಳ ಕಟಾವು ಕಾರ್ಯ ಪ್ರಗತಿಯಲ್ಲಿದ್ದು, ಬಹುತೇಕ ಕಡೆ ಬೆಳೆಗಳನ್ನು ಕಟಾವು ಯಂತ್ರಗಳ ಮೂಲಕ ಕಟಾವು ಮಾಡಲಾಗುತ್ತಿದೆ.
ಪ್ರಸ್ತುತ ಜಿಲ್ಲೆಯಲ್ಲಿ ಲಭ್ಯವಿರುವ ಕಂಬೈನ್ ಹಾರ್ವೆಸ್ಟರ್ ಯಂತ್ರಗಳೊಂದಿಗೆ ಹೊರ ರಾಜ್ಯದ ಬಹುತೇಕ ಕಂಬೈನ್ ಹಾರ್ವೆಸ್ಟರ್ ಯಂತ್ರಗಳಿಂದಲೂ ಸಹ ಬೆಳೆ ಕಟಾವು ಮಾಡಲಾಗುತ್ತಿದೆ. ಖಾಸಗಿ ವಾಹನ ಮಾಲೀಕರು ಪ್ರತಿ ಎಕರೆಗೆ ರೂ.3000 ವರೆಗೆ ರೈತರಿಂದ ನಗದು ಪಡೆದು ಕಟಾವು ಮಾಡುತ್ತಿರುವುದು ತಿಳಿದು ಬಂದಿರುತ್ತದೆ.
ಪ್ರಸ್ತುತ ದರವು ರೈತರಿಗೆ ಹೆಚ್ಚಿನ ಹೊರೆಯಾಗುತ್ತಿರುವುದರಿಂದ ಕಟಾವು ಕಾರ್ಯ ಕುಂಠಿತವಾಗುತ್ತಿದೆ. ಆದ್ದರಿಂದ ರೈತರಿಗೆ ಅನುಕೂಲವಾಗುವ ದೃಷ್ಠಿಯಿಂದ ಜಿಲ್ಲೆಯಾದ್ಯಂತ 1 ಎಕರೆ ಬೆಳೆಯನ್ನು ಕಂಬೈನ್ ಹಾರ್ವೆಸ್ಟರ್ ಯಂತ್ರದ ಮೂಲಕ ಕಟಾವು ಮಾಡಲು ರೂ.2300 ನ್ನು ನಿಗದಿಪಡಿಸಲಾಗಿದೆ.
ಎಲ್ಲಾ ಕಂಬೈನ್ ಹಾರ್ವೆಸ್ಟರ್ ಮಾಲೀಕರು ನಿಗದಿಪಡಿಸಿದ ದರದಂತೆ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ. ತಪ್ಪಿದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.