ಮಹಿಳಾ ಚೆಸ್‌ ವಿಶ್ವಕಪ್‌ ಗೆದ್ದ ದಿವ್ಯಾ ದೇಶ್‌ ಮುಖ್‌

News Desk

ಚಂದ್ರವಳ್ಳಿ ನ್ಯೂಸ್, ನವದೆಹಲಿ:
FIDE
ಮಹಿಳಾ ಚೆಸ್‌ ವಿಶ್ವಕಪ್‌ ಗೆದ್ದ ದಿವ್ಯಾ ದೇಶ್‌ ಮುಖ್‌ ಅವರಿಗೆ ದೇಶಾದ್ಯಂತ ಅಭಿನಂದನೆಗಳ ಸುರಿಮಳೆಯಾಗಿದೆ.
19 ವರ್ಷದ ದಿವ್ಯಾ ಅವರು FIDE ಮಹಿಳಾ ವಿಶ್ವಕಪ್ ಗೆದ್ದ ಮೊದಲ ಭಾರತೀಯರಾಗಿದ್ದು, ಚೆಸ್‌ ಕ್ರೀಡೆಯಲ್ಲಿ ಭಾರತೀಯರು ಹೆಮ್ಮೆ ಪಡುವಂತ ಐತಿಹಾಸಿಕ ಸಾಧನೆ ಮಾಡಿ ಸ್ಫೂರ್ತಿಯಾಗಿದ್ದಾರೆ.

ಭಾರತದ ಯುವ ಚೆಸ್ ಆಟಗಾರ್ತಿ ದಿವ್ಯಾ ದೇಶಮುಖ್ 2025 ರ ಮಹಿಳಾ ಚೆಸ್ ವಿಶ್ವಕಪ್ ಪ್ರಶಸ್ತಿಯನ್ನು ಗೆಲುವು ಸಾಧಿಸಿದ್ದಾರೆ. ಜಾರ್ಜಿಯಾದಲ್ಲಿ ನಡೆದ ಈ ವಿಶ್ವಕಪ್‌ನ ಫೈನಲ್‌ನಲ್ಲಿ 19 ವರ್ಷದ ದಿವ್ಯಾ, ಭಾರತದ ಲೆಜೆಂಡರಿ ಆಟಗಾರ್ತಿ ಕೊನೆರು ಹಂಪಿ ಅವರನ್ನು ಸೋಲಿಸುವ ಮೂಲಕ ಈ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

- Advertisement - 

ಇದರೊಂದಿಗೆ, ಚೆಸ್ ವಿಶ್ವಕಪ್ ಗೆದ್ದ ಮೊದಲ ಭಾರತೀಯ ಮಹಿಳಾ ಚೆಸ್ ತಾರೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಳೆದ ವರ್ಷವೇ ವಿಶ್ವ ಚಾಂಪಿಯನ್ ಪ್ರಶಸ್ತಿ ಗೆದ್ದಿದ್ದ ದಿವ್ಯಾ, ಈಗ ಮಹಿಳಾ ಚೆಸ್ ವಿಶ್ವಕಪ್‌ ಚಾಂಪಿಯನ್ ಆಗಿದ್ದಾರೆ. ಇದು ಮಾತ್ರವಲ್ಲದೆ, ಈ ಪ್ರಶಸ್ತಿ ಗೆಲುವಿನೊಂದಿಗೆ ಭಾರತದ ನಾಲ್ಕನೇ ಮಹಿಳಾ ಗ್ರ್ಯಾಂಡ್‌ ಮಾಸ್ಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಚೆಸ್ ವಿಶ್ವಕಪ್​ ಗೆದ್ದ ದಿವ್ಯಾ-
ಜಾರ್ಜಿಯಾದ ಬಟುಮಿಯಲ್ಲಿ ಕಳೆದ
3 ವಾರಗಳಿಂದ ನಡೆದ ಮಹಿಳಾ ಚೆಸ್ ವಿಶ್ವಕಪ್​ನಲ್ಲಿ ದಿವ್ಯಾ ದೇಶಮುಖ್ ಫೈನಲ್ ತಲುಪುವ ಮೂಲಕ ಇತಿಹಾಸ ಸೃಷ್ಟಿಸಿದ್ದರು.

- Advertisement - 

ಅವರ ನಂತರ, ಭಾರತದ ಮೊದಲ ಮಹಿಳಾ ಗ್ರ್ಯಾಂಡ್ ಮಾಸ್ಟರ್ ಕೊನೆರು ಹಂಪಿ ಕೂಡ ಫೈನಲ್ ತಲುಪುವ ಮೂಲಕ ಈ ಪ್ರಶಸ್ತಿ ಪಂದ್ಯವನ್ನು ಮತ್ತಷ್ಟು ವಿಶೇಷವಾಗಿಸಿದ್ದರು. ಏಕೆಂದರೆ, ಯಾರೇ ಗೆದ್ದರೂ, ಪ್ರಶಸ್ತಿ ಭಾರತದ ಪಾಲಾಗುವುದರ ಜೊತೆಗೆ ಮೊದಲ ಬಾರಿಗೆ ಭಾರತೀಯ ಮಹಿಳೆಯೊಬ್ಬರು ಚೆಸ್ ವಿಶ್ವಕಪ್ ಚಾಂಪಿಯನ್ ಆಗುತ್ತಿದ್ದರು.
ಅದರಂತೆ ನಡೆದ ಫೈನಲ್ ಪಂದ್ಯದಲ್ಲಿ ಕೊನೆರು ಹಂಪಿ ಅವರ ಮೇಲೆ ನಿರೀಕ್ಷೆಗಳು ಹೆಚ್ಚಿದ್ದರೂ
, ಯುವ ಆಟಗಾರ್ತಿಯ ಮುಂದೆ ಅನುಭವಿ ಕೊನೆರು ಹಂಪಿ ಅವರು ಸೋಲೊಪ್ಪಿಕೊಳ್ಳಬೇಕಾಯಿತು.

ಭಾರತೀಯ ಮೊದಲ ಮಹಿಳೆ-
ಪಂದ್ಯ ಟೈ ಬ್ರೇಕ್​ನತ್ತ ಸಾಗಿದ್ದರಿಂದ ಕೊನೆರು ಹಂಪಿ ಕೊಂಚ ಮೇಲುಗೈ ಸಾಧಿಸಿದಂತೆ ತೋರುತ್ತಿತ್ತು. ಏಕೆಂದರೆ ರ್ಯಾಪಿಡ್ ಸ್ವರೂಪದಲ್ಲಿ 38 ವರ್ಷದ ಕೊನೆರು ಹಂಪಿ ದಿವ್ಯಾಗಿಂತ ಉತ್ತಮ ಆಟಗಾರ್ತಿಯಾಗಿದ್ದರು. ಆದರೆ ದಿವ್ಯಾ ತಮ್ಮ ಚಾಣಾಕ್ಷ ನಡೆಗಳಿಂದ ಕೊನೆರು ಹಂಪಿಯವರನ್ನು ಸೋಲಿಸಿ ಪ್ರಶಸ್ತಿ ಗೆದ್ದರು.

ಅವರು ಭಾರತದ ನಾಲ್ಕನೇ ಮಹಿಳಾ ಗ್ರ್ಯಾಂಡ್‌ಮಾಸ್ಟರ್ ಕೂಡ ಆಗಲಿದ್ದಾರೆ. ಪ್ರಾಸಂಗಿಕವಾಗಿ, ಅವರು ಭಾರತದ ಮೊದಲ ಮಹಿಳಾ ಗ್ರ್ಯಾಂಡ್‌ಮಾಸ್ಟರ್ ಅವರನ್ನು ಸೋಲಿಸುವ ಮೂಲಕ ಈ ಸಾಧನೆಯನ್ನು ಮಾಡಿದ್ದು ಮತ್ತಷ್ಟು ವಿಶೇಷವಾಗಿದೆ.

 

Share This Article
error: Content is protected !!
";