ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ನಗರದ ಸೋಮೇಶ್ವರ ದೇವಾಲಯದ, ಬಡಾವಣೆಯಲ್ಲಿರುವ ಭಾರತ್ ಗ್ಯಾಸ್ ಮಂಜುನಾಥ ಗ್ಯಾಸ್ ಏಜೆನ್ಸೀಸ್ ವತಿಯಿಂದ ದೀಪಾವಳಿ ಹಬ್ಬ ಆಚರಣೆ ಮಾಡಲಾಯಿತು.
ಮಂಜುನಾಥ ಗ್ಯಾಸ್ ಏಜೆನ್ಸೀಸ್ ಮಾಲಿಕ ನಂದಕುಮಾರ್ ಮಾತನಾಡಿ ತಾಲ್ಲೂಕು ವೃತ್ತದಲ್ಲಿ ಸಣ್ಣ ಕಛೇರಿಯನ್ನು ಆರಂಭ ಮಾಡಿದ ಸಂಸ್ಥೆ ಇಂದಿನ ಆಧುನಿಕ ಸೌಲಭ್ಯಗಳನ್ನು ಬಳಸಿಕೊಂಡು ಗ್ರಾಹಕರ ಸ್ನೇಹಿಯಾಗಿ ಮುನ್ನಡೆಸುತ್ತಿರುವುದು ಹಾಗು ಮೊಬೈಲ್ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡಿ ತ್ವರಿತವಾಗಿ ಪಡೆಯಬಹುದು ಎಂದು ವಿವರಿಸಿದರು.
ಡೆಲಿವರಿ ಬಾಯ್ ಗಳ ಮತ್ತು ಸಿಬ್ಬಂದಿ ವರ್ಗ ಹಾಗು ಮ್ಯಾನೇಜ್ ಮೆಂಟ್ ರವರ ಜೋತೆ ದೀಪಾವಳಿ ಹಬ್ಬ ಆಚರಣೆ ಮಾಡಿಕೂಳ್ಳುತ್ತಿರುವುದು ನಮಗೆ ಹೆಮ್ಮೆ ಯಾಗುತ್ತಿದೆ ಹಾಗು ದೀಪಾವಳಿ ಹಬ್ಬದ ಪ್ರಯುಕ್ತ ಹೆಚ್ಚುವರಿ ಹೊಸ ಸಂಪರ್ಕಗಳು ವಾಣಿಜ್ಯ ಸಂಪರ್ಕಗಳು ಕೆವೈಸಿ ರಾಪಿಡ್ ಹಾಗು ಎಲ್ಲಾ ವರ್ಗಗಳಲ್ಲಿ ಕರ್ತವ್ಯವನ್ನು ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿರುವುದು ಡೆಲಿವರಿ ಹುಡುಗರ ಜೋತೆ ದೀಪಾವಳಿ ಹಬ್ಬದ ಉಡುಗೊರೆ ನೀಡಲಾಗುತ್ತಿದೆ ಎಂದರು
ಈ ಸಂದರ್ಭದಲ್ಲಿ ಬಿ ಪಿ ಸಿ ಎಲ್ ಮುಖ್ಯಸ್ಥ ಪಿಯೂಶ್ ಗುಪ್ತ ಬಿ ಪಿ ಸಿ ಎಲ್ ಅಧಿಕಾರಿ ಅನಿಕೇಶ್ ಬಾಬು, ಮಾಲೀಕ ದಯಾನಂದ್ ಆರ್, ನಂದಕುಮಾರ್ ಡಿ, ಲೆಕ್ಕಪರಿಶೋಧಕ ಗಿರೀಶ್ ಕೆ ಹಾಗೂ ಕಾರ್ಮಿಕ ವರ್ಗ ಹಾಗು ಸಿಬ್ಬಂದಿ ಹಾಜರಿದ್ದರು.