ಡಿಕೆ ಬ್ರದರ್ಸ್ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಮತ ಕೇಳುವ ನೈತಿಕತೆ ಇಲ್ಲ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚನ್ನಪಟ್ಟಣ ತಾಲ್ಲೂಕಿಗೆ ಹೆಚ್‌.ಡಿ.ಕುಮಾರಸ್ವಾಮಿ ಅವರು ಏನು ಮಾಡಿದ್ದಾರೆ
? ಎಂದು ಪ್ರಶ್ನಿಸುತ್ತಿರುವ ಡಿ.ಕೆ ಬ್ರದರ್ಸ್‌ ಗೆ ಜೆಡಿಎಸ್ ಅಭಿವೃದ್ಧಿ ಕಾರ್ಯಗಳ ಪಟ್ಟಿ ಮಾಡಿ ಟ್ವೀಟ್ ಮಾಡಿ ಉತ್ತರ ನೀಡಿದೆ.

 ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಸುಸಜ್ಜಿತ ರಸ್ತೆಗಳು ಹೆಚ್.ಡಿ.ಕುಮಾರಸ್ವಾಮಿ ಅವರ ಕೊಡಗೆಗಳು. ಕಾಂಗ್ರೆಸ್ ನಾಯಕರು ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಡಾಂಬರ್ ರಸ್ತೆಯಲ್ಲಿ ಪ್ರಚಾರಕ್ಕೆ ಹೋಗುತ್ತಿದ್ದಾರೆಂದರೆ, ಅದು ಕುಮಾರಸ್ವಾಮಿ ಅವಧಿಯಲ್ಲಿ ಆದ ಕೆಲಸಗಳು. 

ತಾಲ್ಲೂಕಿನ ಗ್ರಾಮೀಣ ಸಂಪರ್ಕ ರಸ್ತೆಗಳ ಸಮಗ್ರ ಅಭಿವೃದ್ಧಿ ಹಾಗೂ  ಹಳ್ಳಿಗಳಲ್ಲಿ ಕಾಂಕ್ರೀಟ್ ರಸ್ತೆಗಳು ಮತ್ತು ಚರಂಡಿ ವ್ಯವಸ್ಥೆ. ಮೈಲಾನಾಯಕನ ಹೊಸಹಳ್ಳಿ, ಮಾಕಳಿ, ಚಕ್ಕರೆ, ಇಗ್ಗಲೂರು ಗ್ರಾಮಗಳ ಶಾಲಾ-ಕಾಲೇಜುಗಳಿಗೆ ಸುಸಜ್ಜಿತ ಕಟ್ಟಡಗಳಿಗೆ 29 ಕೋಟಿ ಅನುದಾನ.

ಚನ್ನಪಟ್ಟಣಕ್ಕೆ ಯುಜಿಡಿ ಮಂಜೂರಾತಿ ಸೇರಿದಂತೆ ಅದೆಷ್ಟೋ ಕೆಲಸಗಳು ಕುಮಾರಸ್ವಾಮಿ ಅವರ ಕೊಡುಗೆಗಳು. ಇಗ್ಗಲೂರು ಜಲಾಶಯ, ಶಾಶ್ವತ ನೀರಾವರಿಯ ಸತ್ತೇಗಾಲ ಯೋಜನೆ, ತಾಲ್ಲೂಕಿನಲ್ಲಿ 107 ಕೆರೆಗಳನ್ನು ತುಂಬಿಸಿದ್ದು. 38 ಕೋಟಿ ರೂ. ವೆಚ್ಚದಲ್ಲಿ ಕಣ್ವ ಎಡ ಮತ್ತು ಬಲದಂಡೆ ನಾಲೆಗಳ ಆಧುನೀಕರಣ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಚನ್ನಪಟ್ಟಣ ಟೌನ್‌ಹೌಸಿಂಗ್‌ಬೋರ್ಡ್‌ನಲ್ಲಿ ಹಾಸ್ಟೇಲ್‌ನಿರ್ಮಾಣಕ್ಕೆ 12 ಕೋಟಿ ರೂ.  ತಾಲ್ಲೂಕಿನ ವಸತಿ ಯೋಜನೆಗಾಗಿ ಸರ್ಕಾರದಿಂದ 1,458 ಹೆಚ್ಚುವರಿ ಮನೆಗಳಿಗೆ ಮಂಜೂರಾತಿ.

ಕೊಳಚೆ ಪ್ರದೇಶಗಳಲ್ಲಿ ಬಡವರಿಗೆ ವಸತಿ ಆಸರೆಗಾಗಿ 76 ಕೋಟಿ ರೂ. ವೆಚ್ಚದಲ್ಲಿ 1,450 ಮನೆಗಳ ನಿರ್ಮಾಣ. ಡಾ. ಅಂಬೇಡ್ಕರ್‌ಭವನ ಮತ್ತು ಜಗಜೀವನ್‌ರಾಮ್‌ಭವನಗಳ ನಿರ್ಮಾಣಕ್ಕೆ 5 ಕೋಟಿ ಅನುದಾನ.

ಚನ್ನಪಟ್ಟಣಕ್ಕೆ ಹೆಚ್‌.ಡಿ. ಕುಮಾರಸ್ವಾಮಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸುತ್ತೀರಲ್ಲ..ಇವು ಚನ್ನಪಟ್ಟಣ ತಾಲೂಕಿಗೆ ಹೆಚ್‌.ಡಿ. ಕುಮಾರಸ್ವಾಮಿ ಅವರ ಹತ್ತು ಹಲವು ಅಭಿವೃದ್ಧಿ ಕಾರ್ಯಗಳಿಗೆ ಸಾಕ್ಷಿಗಳು.

ಡಿ.ಕೆ. ಸಹೋದರೇ ಈಗ ಹೇಳಿ  ಚನ್ನಪಟ್ಟಣಕ್ಕೆ ನಿಮ್ಮ ಕೊಡುಗೆ ಏನು ? ಎಂಬುದನ್ನು ಚನ್ನಪಟ್ಟಣದ ಮಹಾಜನತೆಗೆ ಮೊದಲು ತಿಳಿಸಿ.

ಚನ್ನಪಟ್ಟಣದ ಅಭಿವೃದ್ಧಿ ಯೋಜನೆಗಳಿಗೆ ಅಡ್ಡಗಾಲು ಹಾಕಿದ್ದ  ಕಾಂಗ್ರೆಸ್ ಸರ್ಕಾರಕ್ಕೆ, ಚನ್ನಪಟ್ಟಣದ ಜನರ ಬಳಿ ಬಂದು ಮತ ಕೇಳುವ ಯಾವ ನೈತಿಕ ಹಕ್ಕು ನಿಮಗಿಲ್ಲ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.

 

- Advertisement -  - Advertisement -  - Advertisement - 
Share This Article
error: Content is protected !!
";