ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತಾನು ಕುರ್ಚಿಯಲ್ಲಿ ಇರುತ್ತೇನೋ ಇಲ್ಲವೋ ಎಂದು ಸ್ಪಷ್ಟನೆ ಕೊಡದೆ ತಮ್ಮನ್ನ Lame Duck ಸಿಎಂ ಮಾಡಿರುವ ಹೈಕಮಾಂಡ್ ಮೇಲೆ ಮುಖ್ಯಮಂತ್ರಿಗಳಿಗೆ ಅಸಮಾಧಾನ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಕೊಟ್ಟ ಮಾತಿಗೆ ತಪ್ಪಿ, ಕುರ್ಚಿ ಬಿಟ್ಟುಕೊಡದೆ ಸತಾಯಿಸುತ್ತಿರುವ ಮುಖ್ಯಮಂತ್ರಿಗಳ ಮೇಲೆ ಉಪಮುಖ್ಯಮಂತಿಗಳಿಗೆ ಅಸಮಾಧಾನ.
ಕೈಗೂ ಸಿಗದ, ಫೋನಿಗೂ ಸಿಗದ ಸಚಿವರ ಮೇಲೆ ಶಾಸಕರಿಗೆ ಅಸಮಾಧಾನ. ಮೂರು ವರ್ಷಗಳಿಂದ ನಯಾ ಪೈಸೆ ಅಭಿವೃದ್ಧಿ ಕೆಲಸ ಮಾಡದ ಶಾಸಕರು, ಸರ್ಕಾರದ ಮೇಲೆ ಕನ್ನಡಿಗರಿಗೆ ಅಸಮಾಧಾನ ಎಂದು ಅಶೋಕ್ ಹರಿಹಾಯ್ದಿದ್ದಾರೆ.
ಒಟ್ಟಿನಲ್ಲಿ ಈ ನಾಲಾಯಕ್ ಕರ್ನಾಟಕ ಕಾಂಗ್ರೆಸ್ ಸರ್ಕಾರ ತೊಲಗುವವರೆಗೂ ಕರ್ನಾಟಕದ ಅಭಿವೃದ್ಧಿ ಸಾಧ್ಯವಿಲ್ಲ, ಕನ್ನಡಿಗರಿಗೆ ನೆಮ್ಮದಿ ಇಲ್ಲ ಎಂದು ಅಶೋಕ್ ಟೀಕಿಸಿದ್ದಾರೆ.

