ಬೆಂಗಳೂರು ಮೆಟ್ರೋ ಯೋಜನೆಗಳ ಪ್ರಗತಿ, ವಿಸ್ತರಣೆ ಕುರಿತು ನಡೆಸಿದ ಡಿಕೆ ಶಿವಕುಮಾರ್

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೆಹಲಿ:
ದೆಹಲಿಯಲ್ಲಿ ಕೇಂದ್ರ ಸಚಿವರೊಂದಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬೆಂಗಳೂರು ಮೆಟ್ರೋ ಯೋಜನೆಗಳ ಪ್ರಗತಿ ಹಾಗೂ ವಿಸ್ತರಣೆ ಸಂಬಂಧ ಚರ್ಚೆ ನಡೆಸಿದ್ದಾರೆ.

ಎರಡನೇ ಹಂತದ ಮೆಟ್ರೋ ಯೋಜನೆಗೆ 15 ವರ್ಷಗಳ ಹಿಂದೆ 26,000 ಕೋಟಿ ರೂ. ವೆಚ್ಚ ಅಂದಾಜು ಮಾಡಲಾಗಿದ್ದರೂ, ಈಗ ಅದು 40,000 ಕೋಟಿಗ ರೂ.ಗೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

- Advertisement - 

ಭೂಸ್ವಾಧೀನ ವೆಚ್ಚ 2,250 ಕೋಟಿಯಿಂದ 5,195 ಕೋಟಿ ರೂ.ಗೆ ಹಾಗೂ ಸಿವಿಲ್ ಕಾಮಗಾರಿಗಳ ವೆಚ್ಚ 12,000 ಕೋಟಿಯಿಂದ 16,000 ಕೋಟಿ ರೂ.ಗೆ ಹೆಚ್ಚಳವಾಗಿದೆ. ಡಿಸೆಂಬರ್ 26ರೊಳಗೆ ಈ ಯೋಜನೆಗೆ ಅನುಮೋದನೆ ನೀಡುವಂತೆ ಡಿಸಿಎಂ ಶಿವಕುಮಾರ್ ಅವರು ಕೇಂದ್ರ ಸಚಿವರಲ್ಲಿ ಮನವಿ ಮಾಡಿದ್ದಾರೆ.

 ಇದಲ್ಲದೆ, ಮೂರನೇ ಹಂತದ 3ಎ ಯೋಜನೆಯಡಿ ಸರ್ಜಾಪುರದಿಂದ ಹೆಬ್ಬಾಳದವರೆಗೆ 36.59 ಕಿಲೋಮೀಟರ್ ಉದ್ದದ 28 ನಿಲ್ದಾಣಗಳ ಮಾರ್ಗಕ್ಕೆ 28,405 ಕೋಟಿ ರೂ. ಅಂದಾಜು ವೆಚ್ಚದ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಬೆಂಗಳೂರು, ಬಿಡದಿ, ಮೈಸೂರು, ಕನಕಪುರ, ನೆಲಮಂಗಲ, ತುಮಕೂರು, ಏರ್ಪೋರ್ಟ್, ಚಿಕ್ಕಬಳ್ಳಾಪುರ, ಹೊಸಕೋಟೆ ಮತ್ತು ಕೋಲಾರದಂತಹ ಪಟ್ಟಣಗಳಿಗೆ ಆರ್ಆರ್‌ಟಿಎಸ್ ಡಿಪಿಆರ್ ಸಿದ್ಧಪಡಿಸಲು ಮನವಿ ಮಾಡಲಾಗಿದೆ. ಈ ಯೋಜನೆಗಳು ಬೆಂಗಳೂರಿನ ದಟ್ಟಣೆ ಕಡಿಮೆ ಮಾಡಿ, ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಸಹಕಾರಿಯಾಗಲಿವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

- Advertisement - 

 

 

Share This Article
error: Content is protected !!
";